ಪಾಟ್ನಾ: ವ್ಯಾಪಮ್ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಿಂದ ನೊಟೀಸ್ ಪಡೆದಿದ್ದರೂ ಮಧ್ಯಪ್ರದೇಶ ಗವರ್ನರ್ ರಾಮ್ ನರೇಶ್ ಯಾದವ್ ಅವರು ರಾಜೀನಾಮೆ ನೀಡಲು ಮುಂದಾಗದೆ ಅಧಿಕಾರದಲ್ಲಿ ಮುಂದುವರೆದಿದ್ದಾರೆ.
ಅಷ್ಟೇ ಅಲ್ಲ ನೋಟಿಸ್ ಬಂದ ದಿನವೇ ಅವರು ಇಫ್ತಾರ್ ಕೂಟವನ್ನು ಆಯೋಜನೆ ಮಾಡಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದಾರೆ. ಅವರ ಈ ಕ್ರಮ ಭಾರೀ ಟೀಕೆಗೂ ಕಾರಣವಾಗಿದೆ.
ಇನ್ನೊಂದೆಡೆ ಕೇಂದ್ರ ಸರ್ಕಾರ ರಾಜ್ಯಪಾಲರೇ ಗೌರವಯುತವಾಗಿ ರಾಜೀನಾಮೆ ನೀಡಲಿ ಎಂದು ಕಾಯುತ್ತಿದೆ. ಆದರೆ ರಾಜ್ಯಪಾಲರು ಮಾತ್ರ ಅಧಿಕಾರ ಬಿಟ್ಟುಕೊಡುವ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಕೇಂದ್ರಕ್ಕೆ ಅವರ ತಲೆದಂಡ ಪಡೆಯುವುದು ಅನಿವಾರ್ಯ ಎನ್ನಲಾಗಿದೆ.
ಬಹುಕೋಟಿ ವ್ಯಾಪಮ್ ಹಗರಣದಲ್ಲಿ ರಾಜ್ಯಪಾಲರು ಆರೋಪಿಯಾಗಿದ್ದಾರೆ, ಈ ಹಗರಣಕ್ಕೆ ಸಂಬಂಧಿಸಿದ 46 ಮಂದಿ ಅನುಮಾನಾಸ್ಪದವಾಗಿ ಮೃತರಾಗಿದ್ದು, ಹಗರಣವನ್ನು ಮತ್ತಷ್ಟು ಗಂಭೀರವನ್ನಾಗಿಸಿದೆ. ನಿನ್ನೆಯಷ್ಟೇ ಸುಪ್ರೀಂ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.