ನವದೆಹಲಿ: ಜಮ್ಮು-ಕಾಶ್ಮೀರ ಅಧಿಕೃತವಾಗಿ ವಿಭಜನೆಗೊಂಡು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳು ರೂಪುಗೊಂಡಿದೆ. ಹೀಗಾಗಿ ರೇಡಿಯೋ ಕಾಶ್ಮೀರವನ್ನು ಅಧಿಕೃತವಾಗಿ ಆಲ್ ಇಂಡಿಯಾ ರೇಡಿಯೋ ಎಂದು ಬದಲಾಯಿಸಲಾಗಿದೆ.
ಶ್ರೀನಗರ, ಕಾಶ್ಮೀರ, ಜಮ್ಮು ಮತ್ತು ಲೇಹ್ನಲ್ಲಿರುವ ರೇಡಿಯೊ ಕೇಂದ್ರಗಳನ್ನು ಆಲ್ ಇಂಡಿಯಾ ರೇಡಿಯೋ ಆಗಿ ಮರುನಾಮಕರಣ ಮಾಡಲಾಗಿದೆ. ಇನ್ನು ಮುಂದೆ ಇವುಗಳನ್ನು ಆಲ್ ಇಂಡಿಯಾ ರೇಡಿಯೋ ಕಾಶ್ಮೀರ, ಆಲ್ ಇಂಡಿಯಾ ರೇಡಿಯೋ ಶ್ರೀನಗರ ಮತ್ತು ಆಲ್ ಇಂಡಿಯಾ ರೇಡಿಯೋ ಲೇಹ್ ಎಂದು ಕರೆಯಲಾಗುತ್ತದೆ. ಈ ಬದಲಾವಣೆಗಳು ಅಕ್ಟೋಬರ್ 31ರ ಗುರುವಾರದಿಂದಲೇ ಜಾರಿಗೆ ಬಂದಿವೆ.
ರೇಡಿಯೋ ಕಾಶ್ಮೀರವನ್ನು 1948 ರಲ್ಲಿ ಸ್ಥಾಪಿಸಲಾಯಿತು. ಇದರ ಪ್ರಸಾರ ಕೇಂದ್ರವು ಶ್ರೀನಗರದಲ್ಲಿದೆ. ಜೆ.ಎನ್. ಜುಶ್ಟ್ಸಿ ಅವರು ರೇಡಿಯೋ ಕಾಶ್ಮೀರದ ಮೊದಲ ಮಹಾನಿರ್ದೇಶಕರಾಗಿದ್ದರು.
ಜಮ್ಮು ಮತ್ತು ಕಾಶ್ಮೀರ, ಲಡಾಖ್ ಅಧಿಕೃತವಾಗಿ ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲೇ ರೇಡಿಯೋ ಮರುನಾಮಕರಣ ನಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.