ನವದೆಹಲಿ: ಕಳೆದ ಫೆಬ್ರವರಿ 27 ರಂದು ಶ್ರೀನಗರದಲ್ಲಿ ನಡೆದ ಸ್ನೇಹಪರ ಫೈರಿಂಗ್ ವೇಳೆ ಹುತಾತ್ಮರಾದ ತನ್ನ ಏಳು ಮಂದಿ ಸಿಬ್ಬಂದಿಗಳಿಗೆ ವಾಯುಸೇನೆಯು ಶೌರ್ಯ ಪ್ರಶಸ್ತಿಯನ್ನು ಶಿಫಾರಸ್ಸು ಮಾಡಿದೆ. ಬಾಲಕೋಟ್ ಮೇಲೆ ಏರ್ ಸ್ಟ್ರೈಕ್ ಮಾಡಿದ ಒಂದು ದಿನಗಳ ತರುವಾಯ ಈ ದುರ್ಘಟನೆ ಸಂಭವಿಸಿತ್ತು.
ಭಾರತದ ಕ್ಷಿಪಣಿಗೆ ಅಪ್ಪಳಿಸಿದ ಹಿನ್ನಲೆಯಲ್ಲಿ ಹೆಲಿಕಾಪ್ಟರ್ ಮಿ -17 ವಿ 5 ಹೊತ್ತಿ ಉರಿದಿತ್ತು. ಇದರಲ್ಲಿದ್ದ ಸ್ಕ್ವಾಡ್ರನ್ ಲೀಡರ್ ಸಿದ್ಧಾರ್ಥ್ ವಶಿಷ್ಟ್ ಇತರ ಪೈಲಟ್ ಸ್ಕ್ವಾಡ್ರನ್ ಲೀಡರ್ಗಳಾದ ನಿನಾದ್ ಮಾಂಡ್ವಗಾನೆ, ಕುಮಾರ್ ಪಾಂಡೆ, ಸಾರ್ಜೆಂಟ್ ವಿಕ್ರಾಂತ್ ಸೆಹ್ರಾವತ್, ಕಾರ್ಪೋರಲ್ಗಳಾದ ದೀಪಕ್ ಪಾಂಡೆ ಮತ್ತು ಪಂಕಜ್ ಕುಮಾರ್ ಸೇರಿದಂತೆ ಇತರ ಸಿಬ್ಬಂದಿಗಳು ಅಸುನೀಗಿದ್ದರು.
“ಇಬ್ಬರು ಪೈಲಟ್ಗಳಿಗೆ ವಾಯುಸೇನಾ ಪದಕವನ್ನು ಶಿಫಾರಸ್ಸು ಮಾಡಲಾಗಿದೆ, ಇತರ ನಾಲ್ಕು ಸಿಬ್ಬಂದಿಗಳನ್ನು ಡೆಸ್ಪ್ಯಾಚ್ಗಳಲ್ಲಿ ಉಲ್ಲೇಖಿಸಲು ಶಿಫಾರಸ್ಸು ಮಾಡಲಾಗಿದೆ” ಎಂದು ಐಎಎಫ್ ಮೂಲಗಳು ತಿಳಿಸಿವೆ.
ಎಲ್ಲಾ ಆರು ಸಿಬ್ಬಂದಿಯನ್ನು ಯುದ್ಧಕಾಲದ ಶೌರ್ಯ ಪದಕಗಳಿಗೆ ಶಿಫಾರಸ್ಸು ಮಾಡಲಾಗಿದೆ. ತಮಗೆ ವಹಿಸಲಾದ ಕಾರ್ಯಾಚರಣೆಯ ಕಾರ್ಯವನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಇವರು ಅಸುನೀಗಿದ ಹಿನ್ನಲೆಯಲ್ಲಿ ಶೌರ್ಯ ಪ್ರಶಸ್ತಿಯನ್ನು ಶಿಫಾರಸ್ಸು ಮಾಡಲಾಗಿದೆ.
ಶ್ರೀನಗರ ಬಳಿಯ ಬುಡ್ಗಾಮ್ನಲ್ಲಿ ಸ್ಪೈಡರ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗೆ ಡಿಕ್ಕಿ ಹೊಡೆದ ನಂತರ ಚಾಪರ್ನಲ್ಲಿದ್ದ ಆರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಆರು ಐಎಎಫ್ ಸಿಬ್ಬಂದಿಗಳಲ್ಲದೆ, ಒಬ್ಬ ನಾಗರಿಕನನ್ನು ನೆಲದ ಮೇಲೆ ಸಾವಿಗೀಡಾದರು.
ಮಿ -17 ಚಾಪರ್ ಅಪಘಾತವು ವಾಯುಪಡೆಯ ಕಡೆಯಿಂದಾದ ಅತೀ ದೊಡ್ಡ ಪ್ರಮಾದ ಎಂದು ವಾಯುಸೇನಾ ಮುಖ್ಯಸ್ಥ ಮಾರ್ಷಲ್ ಭದೌರಿಯಾ ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.