ನವದೆಹಲಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಸೇನಾಪಡೆಗಳು ಗಡಿಯಲ್ಲಿ ಪರಸ್ಪರ ಸಿಹಿಯನ್ನು ಹಂಚಿಕೊಂಡಿವೆ. ಭಾರತದ ಬಿಎಸ್ಎಫ್ ಪಡೆಗಳು ಮತ್ತು ಬಾಂಗ್ಲಾದ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ಅಖೌರಾ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ನಲ್ಲಿ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಂಡವು.
ದೀಪಾವಳಿ ಹಬ್ಬದ ಆರಂಭದ ಶುಭ ಸೂಚನೆಯಾಗಿ ಎರಡು ಸ್ನೇಹಪರ ನೆರೆಯ ರಾಷ್ಟ್ರಗಳ ಸೈನಿಕರ ನಡುವೆ ಸಿಹಿತಿಂಡಿಗಳು ವಿನಿಮಯಗೊಂಡವು.
“ಇದು ದೀಪಾವಳಿಗೂ ಮುಂಚಿತವಾದ ಆಚರಣೆಯಾಗಿದೆ, ಸಿಹಿ ವಿನಿಮಯವು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧವನ್ನು ಇನ್ನಷ್ಟು ಸುಧಾರಿಸುತ್ತದೆ. ಇದು ಎರಡೂ ಕಡೆಯ ಗಡಿ ಪ್ರದೇಶಗಳಲ್ಲಿನ ಅಪರಾಧ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ” ಎಂದು ಅಖೌರಾ ಬಿಜಿಬಿ ಶಿಬಿರದ ಕಂಪನಿ ಕಮಾಂಡರ್ ಜಹಾಂಗೀರ್ ಆಲಂ ಅಭಿಪ್ರಾಯಿಸಿದ್ದಾರೆ.
ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ, ಈದ್, ದೀಪಾವಳಿ ಮುಂತಾದ ಉಭಯ ದೇಶಗಳ ರಾಷ್ಟ್ರೀಯ ಮತ್ತು ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ರೇಂಜರ್ಗಳು ಪ್ರತಿವರ್ಷ ಪರಸ್ಪರ ಸಿಹಿ ತಿಂಡಿ ವಿನಿಮಯ ಮಾಡಿಕೊಳ್ಳುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ.
ಭಾರತ ಮತ್ತು ವಿಶ್ವದಾದ್ಯಂತದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು ದೀಪಾವಳಿಯನ್ನು ಆಚರಿಸುತ್ತಾರೆ. ಭಾನುವಾರದಿಂದ ದೀಪಾವಳಿ ಸಂಭ್ರಮ ಆರಂಭಗೊಳ್ಳಲಿದೆ. ದೀಪಗಳನ್ನು ಹೊತ್ತಿಸುವ ಮೂಲಕ ದೀಪಾವಳಿಯನ್ನು ಆಚರಿಸಿ ಸಂಭ್ರಮಿಸುವುದು ಸಂಪ್ರದಾಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.