ಉಫಾ: ವಿಶ್ವ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳು ಎಲ್ಲಾ ದೇಶಗಳಲ್ಲೂ ಸಾಮಾನ್ಯವಾಗಿದೆ, ವಿಶ್ವಸಂಸ್ಥೆ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಸುಧಾರಣೆ ಮಾಡಿದರೆ ಯಾವ ಸವಾಲನ್ನಾದರೂ ನಾವು ಎದುರಿಸಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಷ್ಯಾದ ಉಫಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಗುರುವಾರ ಮಾತನಾಡಿದ ಅವರು, ‘ಹವಮಾನ ವೈಪರೀತ್ಯ ನಮ್ಮ ಅತಿ ಪ್ರಮುಖ ಜಾಗತಿಕ ಸಮಸ್ಯೆಯಾಗಿದೆ, ನವೀಕರಿಸಬಹುದಾದ ಶಕ್ತಿ ಮತ್ತು ಇಂಧನ ದಕ್ಷತೆಯತ್ತ ನಾವು ಹೆಚ್ಚಿನ ಗಮನ ಹರಿಸಬೇಕಾಗಿದೆ’ ಎಂದರು.
ಅಲ್ಲದೇ ಉತ್ತಮ ಭವಿಷ್ಯಕ್ಕಾಗಿ ಪರಸ್ಪರ ಒಟ್ಟುಗೂಡಲು ಬ್ರಿಕ್ಸ್ ರಾಷ್ಟ್ರಗಳು ಅಳವಡಿಸಬೇಕಾದ 10 ಅಂಶಗಳನ್ನು (ದಸ್ ಕದಮ್) ಅವರು ಪ್ರಸ್ತಾಪಿಸಿದ್ದಾರೆ. ಅವುಗಳೆಂದರೆ
1. BRICS Trade Fair
2. BRICS Railway Research Centre
4. BRICS Digital Initiative
5. BR1CS Agricultural Research Centre
6. BRICS State/Local Government’s Forum
8. BRICS Sports Council and Annual BRICS Sports Meet
9. First major project of NDB to be in field of Clean Energy
10. BRICS Film Festival
ನಾಳೆಯೂ ರಷ್ಯಾದಲ್ಲೇ ಇರುವ ಪ್ರಧಾನಿ ಪಾಕಿಸ್ಥಾನದ ಪ್ರಧಾನಿ ನವಾಝ್ ಶರೀಫ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.