ನವದೆಹಲಿ: BSNL ಮತ್ತು MTNL ಪುನಶ್ಚೇತನಕ್ಕಾಗಿ ಕೇಂದ್ರ ಸರಕಾರವು ಮಹತ್ವದ ಕ್ರಮಗಳನ್ನು ಘೋಷಣೆ ಮಾಡಿದೆ. ಈ ಎರಡೂ ಟೆಲಿಕಾಂ ಸಂಸ್ಥೆಗಳನ್ನು ವಿಲೀನಗೊಳಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆಯನ್ನು ನೀಡಿದೆ. ಅಮೂಲಾಗ್ರ ಬದಲಾವಣೆ ತಂದಿದೆ. ಸರಕಾರಿ ಸ್ವಾಮ್ಯದ ಉದ್ದಿಮೆಗಳ ರಕ್ಷಣೆಗಾಗಿ ಮೋದಿ ಸರ್ಕಾರ ಕೈಗೊಳ್ಳುತ್ತಿರುವ ಮತ್ತೊಂದು ಮಹತ್ವದ ನಿರ್ಧಾರ ಇದಾಗಿದೆ.
BSNL ಮತ್ತು MTNL ಪುನಶ್ಚೇತನಕ್ಕಾಗಿ ರೂ.15,000 ಕೋಟಿ ಮೌಲ್ಯದ ಬಾಂಡ್ ಬಿಡುಗಡೆ ಮಾಡಲು ಕೇಂದ್ರ ನಿರ್ಧರಿಸಿದೆ. ಈ ಎರಡೂ ಸಂಸ್ಥೆಗಳು ವಿಲೀನಗೊಳ್ಳಲಿದ್ದು, ವಿಲೀನ ಸಂಸ್ಥೆ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ವಿಲೀನ ಪ್ರಕ್ರಿಯೆಯ ಭಾಗವಾಗಿ ರೂ. 38,000 ಕೋಟಿ BSNL ಮತ್ತು MTNL ಆಸ್ತಿಗಳು ನಾಲ್ಕು ವರ್ಷಗಳ ಅವಧಿಯಲ್ಲಿ ಹಣವಾಗಿ ಪರಿವರ್ತನೆಯಾಗಲಿವೆ. ಇವುಗಳಿಗೆ 4ಜಿ ಸ್ಪೆಕ್ಟ್ರಮ್ ಹಂಚಿಕೆಯಾಗಲಿದೆ. ವಿಲೀನಗೊಂಡ ಉಭಯ ಸಂಸ್ಥೆಗಳ ಉದ್ಯೋಗಿಗಳಿಗೆ ಆಕರ್ಷಕ VRS ಪ್ಯಾಕೇಜ್ಗಳು ಸಿಗಲಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು, “ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಅನ್ನು ಮುಚ್ಚಲಾಗುವುದಿಲ್ಲ, ಅಥವಾ ಮೂರನೇ ವ್ಯಕ್ತಿಯಿಂದ ಹೂಡಿಕೆ ಮಾಡಲಾಗುವುದಿಲ್ಲ. ಆದರೆ ಸರ್ಕಾರವು ಅದನ್ನು ವೃತ್ತಿಪರರನ್ನಾಗಿ ಮಾಡಲು ಬಯಸಿದೆ” ಎಂದಿದ್ದಾರೆ.
“4 ಜಿ ಸ್ಪೆಕ್ಟ್ರಮ್ ಅನ್ನು ಆಡಳಿತಾತ್ಮಕವಾಗಿ 2016ರ ದರದಲ್ಲಿ ಇವುಗಳಿಗೆ ಹಂಚಲಾಗುತ್ತದೆ. ಬಜೆಟ್ ನಿಬಂಧನೆಯಿಂದ ಸ್ಪೆಕ್ಟ್ರಮ್ ವೆಚ್ಚಕ್ಕೆ ಸರ್ಕಾರ 4,000 ಕೋಟಿ ರೂಪಾಯಿ ಒದಗಿಸಲಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.