ನವದೆಹಲಿ: ಭಾರತೀಯ ವಾಯುಸೇನೆಯು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್)ನಿಂದ 83 ತೇಜಸ್ ಲಘು ಯುದ್ಧ ವಿಮಾನಗಳನ್ನು ಖರೀದಿಸಲು ಆರ್ಡರ್ ನೀಡಿದೆ. ಈ ಒಪ್ಪಂದದ ಮೊತ್ತಕ್ಕೆ ಸಂಬಂಧಿಸಿದ ಮಾತುಕತೆಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ವಾಯುಸೇನೆಯು, ಡಿಸೆಂಬರ್ 2017 ರಲ್ಲಿ, 83 ತೇಜಸ್ ಲಘು ಯುದ್ಧ ವಿಮಾನಗಳಿಗಾಗಿ ಎಚ್ಎಎಲ್ಗೆ ಸಿಂಗಲ್ ವೆಂಡರ್ ಟೆಂಡರ್ ಅನ್ನು ನೀಡಿತ್ತು. ಆದರೆ ಈ ಒಪ್ಪಂದ ದೀರ್ಘ ಸಮಯದವರೆಗೆ ವಿಳಂಬಗೊಂಡಿತ್ತು, ಇದೀಗ ಒಪ್ಪಂದಕ್ಕೆ ಕುರಿತ ಚರ್ಚೆಯನ್ನು ಮತ್ತೆ ಪ್ರಾರಂಭಿಸಲಾಗುತ್ತಿದೆ. ದೀರ್ಘಕಾಲದವರೆಗೆ ವಿಳಂಬವಾಗಿರುವ ಈ ಒಪ್ಪಂದವು ಮೊತ್ತದ ಬಗೆಗಿನ ಮಾತುಕತೆ ನಡೆದ ನಂತರವೇ ಅಂತಿಮಗೊಳ್ಳಲಿದೆ.
“ವೆಚ್ಚದ ಬಗ್ಗೆ ಮಾತುಕತೆ ನಡೆಸುವ ಸಮಿತಿಯು ತೇಜಸ್ ಲಘು ಯುದ್ಧ ವಿಮಾನಗಳ ಬೆಲೆಯ ಮಾತುಕತೆಗಳನ್ನು ಬಹುತೇಕ ಮುಗಿಸಿದೆ. ಇದು ಅಂತಿಮಗೊಂಡ ನಂತರ, ವಾಯುಸೇನೆಯು ಎಚ್ಎಎಲ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ” ಎಂದು ಐಎಎಫ್ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
83 ಮಾರ್ಕ್ 1 ಎ ತೇಜಸ್ ಲಘು ಯುದ್ಧ ವಿಮಾನಗಳ ಒಪ್ಪಂದದ ಅಂದಾಜು ವೆಚ್ಚ 45,000 ಕೋಟಿ ರೂಪಾಯಿ ಆಗಿದೆ. ಸುಧಾರಿತ ಸೇವಾ ಸಾಮರ್ಥ್ಯ, ವೇಗದ ಶಸ್ತ್ರಾಸ್ತ್ರ-ಲೋಡಿಂಗ್ ಸಮಯ, ದೀರ್ಘಾಯುಷ್ಯ, ಉತ್ತಮ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್ ಮತ್ತು ಆಕ್ಟಿವ್ ಎಲೆಕ್ಟ್ರಾನಿಕ್ ಸ್ಕ್ಯಾನ್ಡ್ ಅರೇ (ಎಇಎಸ್ಎ) ರೇಡಾರ್ನೊಂದಿಗೆ ಈ ವಿಮಾನಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲಿವೆ.
ಈ ಹಿಂದೆ, ಐಎಎಫ್ 40 ತೇಜಸ್ ಲಘು ಯುದ್ಧ ವಿಮಾನಗಳಿಗಾಗಿ ಎಚ್ಎಎಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಅದರಲ್ಲಿ 18 ವಿಮಾನಗಳನ್ನು ಪೂರೈಕೆ ಮಾಡಿದೆ.
ಪ್ರಸ್ತುತ, ವಾಯುಪಡೆಯು ಸುಮಾರು 10-12 ಸ್ಕ್ವಾಡ್ರನ್ಗಳ ಫೈಟರ್ ಜೆಟ್ಗಳ ಅಗತ್ಯವನ್ನು ಹೊಂದಿದ್ದು, 36 ರಫೇಲ್ ಮಲ್ಟಿ-ರೋಲ್ ವಿಮಾನಗಳಲ್ಲಿ ಮೊದಲ ನಾಲ್ಕು ವಿಮಾನಗಳು 2020 ರ ಮೇ ವೇಳೆಗೆ ಬರಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.