ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಲಡಾಖ್ಗೆ ತೆರಳಿದ್ದು, ಅಲ್ಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರೊಂದಿಗೆ ಹಲವು ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಮತ್ತು ಶಿಯೋಕ್ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ, ಕಾರ್ಯತಾಂತ್ರಿಕವಾಗಿ ಅತ್ಯಂತ ಮಹತ್ವದ ಸೇತುವೆಯನ್ನು ಉದ್ಘಾಟಿಸಲಿದ್ದಾರೆ.
ಪೂರ್ವ ಲಡಾಖ್ನಲ್ಲಿನ ಡರ್ಬುಕ್ ಮತ್ತು ದೌಲತ್ ಬೇಗ್ ಓಲ್ಡಿ ನಡುವೆ ನಿರ್ಮಿಸಲಾದ ಕರ್ನಲ್ ಚೆವಾಂಗ್ ರಿಂಚನ್ ಸೇತುವೆಯನ್ನು ರಾಜನಾಥ್ ಸಿಂಗ್ ಇಂದು ಉದ್ಘಾಟಿನೆಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ನವದೆಹಲಿಯಿಂದ ಲಡಾಖಿಗೆ ತೆರಳುತ್ತಿದ್ದೇನೆ. ಜನರಲ್ ಬಿಪಿನ್ ರಾವತ್ ಅವರೊಂದಿಗೆ ಫಾರ್ವರ್ಡ್ ಪ್ರದೇಶಗಳಿಗೆ ಭೇಟಿ ನೀಡಲಿದ್ದೇನೆ. ಶಿಯೋಕ್ ನದಿಯ ಮೇಲೆ ನಿರ್ಮಾಣಗೊಂಡಿರುವ ಕಾರ್ಯತಾಂತ್ರಿಕ ಮಹತ್ವದ ಸೇತುವೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿದ್ದೇನೆ” ಎಂದು ರಕ್ಷಣಾ ಸಚಿವರು ಟ್ವೀಟ್ ಮಾಡಿದ್ದಾರೆ.
Leaving New Delhi for Ladakh. Shall visit the forward areas with the CoAS, General Bipin Rawat. Looking forward to attend the inaugural ceremony of a strategically important bridge over Shyok River.
— Rajnath Singh (@rajnathsingh) October 21, 2019
ಈ ಸೇತುವೆ ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ ಮತ್ತು ಶಿಯೋಕ್ ನದಿ ಸಮೀಪದ ಗಡಿ ಪ್ರದೇಶಗಳು ಮತ್ತು ಹಳ್ಳಿಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಇದು ಚೀನಾದೊಂದಿಗಿನ ಎಲ್ ಒ ಸಿ ಯಿಂದ ಪೂರ್ವಕ್ಕೆ 45 ಕಿ.ಮೀ ದೂರದಲ್ಲಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್ಒ) ನಿರ್ಮಿಸಿರುವ ಈ ಸೇತುವೆಯಲ್ಲಿ 70 ಟನ್ ಕ್ಲಾಸ್ ಮತ್ತು 4.5 ಮೀಟರ್ ಅಗಲದ ವಾಹನಗಳು ಓಡಾಡಬಹುದು.
1952 ರಲ್ಲಿ ಮಹಾ ವೀರ ಚಕ್ರದಿಂದ ಪುರಸ್ಕರಿಸಲ್ಪಟ್ಟ ಸೇನಾಧಿಕಾರಿ ಕರ್ನಲ್ ಚೆವಾಂಗ್ ರಿಂಚೆನ್ ಅವರಿಗೆ ಸಮರ್ಪಣೆ ಮಾಡಿ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ.
ಈ ಭೇಟಿಯ ಸಮಯದಲ್ಲಿ ರಕ್ಷಣಾ ಸಚಿವರು, ಚೀನಾ ಮತ್ತು ಪಾಕಿಸ್ಥಾನಗಳೊಂದಿಗಿನ ಗಡಿ ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸುವ ನಿರೀಕ್ಷೆಯಿದೆ. ಎಲ್ಎಸಿಯಲ್ಲಿನ ದೌಲತ್ ಬೇಗ್ ಓಲ್ಡಿ ಮತ್ತು ಇತರ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.