ನವದೆಹಲಿ: ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ (ಎಫ್ಎಸ್ಎಸ್ಎಐ) ನಡೆಸಿದ ಅಧ್ಯಯನದ ಪ್ರಕಾರ, ಕಚ್ಛಾ ಹಾಲು ಮಾತ್ರವಲ್ಲದೆ ಪ್ರಮುಖ ಬ್ರ್ಯಾಂಡ್ಗಳು ತಯಾರಿಸಿದ ಮತ್ತು ಮಾರಾಟ ಮಾಡುವ ಸಂಸ್ಕರಿಸಿದ ಹಾಲು ಸಹ ನಿಗದಿತ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿದೆ.
ಸಂಸ್ಕರಿಸಿದ ಹಾಲಿನ ಮಾದರಿಗಳಲ್ಲಿ ಅಫ್ಲಾಟಾಕ್ಸಿನ್-ಎಂ 1, ಪ್ರತಿಜೀವಕಗಳು ಮತ್ತು ಕೀಟನಾಶಕಗಳಂತಹ ವಸ್ತುಗಳು ಹೆಚ್ಚು ಕಂಡುಬಂದಿದೆ, ಕಲಬೆರಕೆಗಿಂತಲೂ ಕಲುಷಿತಗೊಳಿಸುವಿಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಎಫ್ಎಸ್ಎಸ್ಎಐ ಸಿಇಒ ಪವನ್ ಅಗರ್ವಾಲ್ ಹೇಳಿದ್ದಾರೆ.
ಗುಣಮಟ್ಟದ ಮಾನದಂಡಗಳನ್ನು ಪೂರೈಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು, 2020 ರ ಜನವರಿ 1 ರೊಳಗೆ ಸಂಪೂರ್ಣ ಮೌಲ್ಯ ಸರಪಳಿಯಲ್ಲಿರುವ ‘ಪರೀಕ್ಷೆ ಮತ್ತು ಪರಿಶೀಲನೆ’ಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಘಟಿತ ಡೈರಿ ವಲಯಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಕಲುಷಿತಗೊಂಡಿರುವ, ಕಲಬೆರೆಕೆಗೊಂಡ ಹಾಲಿನ ಪರಿಣಾಮಗಳನ್ನು ಅಧ್ಯಯನ ಮಾಡಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 1,103 ಪಟ್ಟಣಗಳು ಮತ್ತು ನಗರಗಳಿಂದ ಒಟ್ಟು 6,432 ಹಾಲಿನ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಸಂಘಟಿತ ಮತ್ತು ಅಸಂಘಟಿತ ಎರಡೂ ವಲಯದ ಹಾಲಿನ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಎರಡೂ ವಲಯದ ಹಾಲಿನಲ್ಲೂ ಕಲಬೆರಕೆ ಮತ್ತು ಕಲ್ಮಶಗಳು ಕಂಡು ಬಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.