ಸಿರ್ಸಾ: ಗುರುನಾನಕ್ ದೇವ್ ಮತ್ತು ಭಕ್ತರ ಅತ್ಯಂತ ಪವಿತ್ರ ಸ್ಥಳವಾದ ಕರ್ತಾರ್ಪುರ್ ಸಾಹಿಬ್ ನಡುವಿನ ಅಂತರವನ್ನು ಹೋಗಲಾಡಿಸಲು ಕಾಂಗ್ರೆಸ್ ಪಕ್ಷ ಎಂದಿಗೂ ಪ್ರಯತ್ನಿಸಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
“ಕಾಂಗ್ರೆಸ್ ಮತ್ತು ಅದರ ಸಂಸ್ಕೃತಿಯೊಂದಿಗೆ ಬೆಸೆದುಕೊಂಡ ಇತರ ಪಕ್ಷಗಳು, ಭಾರತೀಯರ ನಂಬಿಕೆ, ಪರಂಪರೆ ಮತ್ತು ಸಂಸ್ಕೃತಿಗೆ ಎಂದೂ ಗೌರವವನ್ನು ನೀಡಿಲ್ಲ. ಕಾಂಗ್ರೆಸ್ ಪಕ್ಷದ ಧೋರಣೆ, ನಡವಳಿಕೆ ನಮ್ಮ ಪವಿತ್ರ ಕ್ಷೇತ್ರಗಳ ಬಗ್ಗೆ ಹೇಗಿತ್ತೋ, ಅದೇ ರೀತಿಯ ಧೋರಣೆ, ಅದೇ ರೀತಿಯ ನಡವಳಿಕೆ ಜಮ್ಮು ಕಾಶ್ಮೀರದ ಬಗ್ಗೆಯೂ ಇತ್ತು. 70 ವರ್ಷಗಳ ಕಾಲ ಸಮಸ್ಯೆಗಳಲ್ಲಿ ಒದ್ದಾಡಿದರು. ಸಾರ್ಥಕ ಸಮಾಧಾನಕ್ಕಾಗಿ ಪ್ರಮಾಣಿಕ ಪ್ರಯತ್ನವನ್ನೂ ಮಾಡಲಿಲ್ಲ” ಎಂದಿದ್ದಾರೆ.
“ಕಾಂಗ್ರೆಸ್ 1947 ರಲ್ಲಿ ಭಾರತ ಮತ್ತು ಪಾಕಿಸ್ಥಾನವನ್ನು ವಿಭಜಿಸುವ ರೇಖೆಯನ್ನು ರಚಿಸುವ ಜವಾಬ್ದಾರಿಯನ್ನು ಹೊಂದಿತ್ತು, ಆದರೆ ಗುರುನಾನಕ್ ಭಕ್ತರನ್ನು ತಮ್ಮ ಗುರುಗಳಿಂದ ಕೇವಲ 4 ಕಿ.ಮೀ ಅಂತರದಲ್ಲಿ ಬೇರ್ಪಡಿಸಬಾರದು ಎಂಬ ಕನಿಷ್ಠ ಪರಿಜ್ಞಾನವನ್ನು ಅದು ಪರಿಗಣಿಸಲಿಲ್ಲ. 70 ವರ್ಷಗಳ ಅವಧಿಯಲ್ಲೂ ಕಾಂಗ್ರೆಸ್ ಈ ದೂರವನ್ನು ಅಳಿಸಲು ಪ್ರಯತ್ನಿಸಲಿಲ್ಲ” ಎಂದಿದ್ದಾರೆ.
ಏಳು ದಶಕಗಳ ಸ್ವಾತಂತ್ರ್ಯದ ನಂತರ ಗುರುನಾನಕ್ ಅವರ ಪವಿತ್ರ ಕ್ಷೇತ್ರವನ್ನು ಅವರ ಭಕ್ತರೊಂದಿಗೆ ಜೋಡಿಸುವ ಅವಕಾಶ ಬಂದಿದೆ ಎಂದು ಹೇಳಿದ ಅವರು, ಕರ್ತಾರ್ಪುರ ಕಾರಿಡಾರ್ ಯೋಜನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ನಮ್ಮ ನಂಬಿಕೆಯ ಒಂದು ದೊಡ್ಡ ಕೇಂದ್ರವನ್ನು 70 ವರ್ಷಗಳಿಂದ ಬೈನಾಕ್ಯುಲರ್ಗಳನ್ನು ಬಳಸಿ ನಾವು ಪೂಜಿಸಬೇಕಾಗಿತ್ತು ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಎಂದಿಗೂ ಭಾರತೀಯ ಸಂಸ್ಕೃತಿಯನ್ನು ಗೌರವಿಸಿಲ್ಲ ಎಂದಿದ್ದಾರೆ.
ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಅ.21ರಂದು ಅಲ್ಲಿ ಚುನಾವಣೆ ಜರುಗುತ್ತಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.