ನವದೆಹಲಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಭಾರತವು 2022ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಇಂಟರ್ಪೋಲ್ ಸಾಮಾನ್ಯ ಸಭೆಯನ್ನು ಆಯೋಜಿಸುವ ಮಹತ್ವದ ಮತವನ್ನು ಯಶಸ್ವಿಯಾಗಿ ಗೆದ್ದುಕೊಂಡಿದೆ.
ಗೃಹ ಸಚಿವ ಅಮಿತ್ ಶಾ ಅವರು ಕಳೆದ ಆಗಸ್ಟ್ 30 ರಂದು ಇಂಟರ್ಪೋಲ್ ಸಾಮಾನ್ಯ ಸಭೆಯನ್ನು ಭಾರತದಲ್ಲಿ ಆಯೋಜಿಸುವ ನಿಟ್ಟಿನಲ್ಲಿ ಪ್ರಸ್ತಾಪವನ್ನಿಟ್ಟಿದ್ದರು ಎಂದು ಗೃಹ ಸಚಿವಾಲಯ ಹೇಳಿದೆ.
ಇಂಟರ್ಪೋಲ್ನ ಪ್ರಧಾನ ಕಾರ್ಯದರ್ಶಿ ಜುರ್ಗೆನ್ ಸ್ಟಾಕ್ ಅವರು ನವದೆಹಲಿಯಲ್ಲಿ ಶಾ ಅವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಈ ಪ್ರಸ್ತಾಪವನ್ನು ಇಡಲಾಗಿತ್ತು.
“ಭಾರತೀಯ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಅಂಗವಾಗಿ 2022 ರಲ್ಲಿ ಭಾರತದಲ್ಲಿ 91 ನೇ ಮಹಾಸಭೆಯನ್ನು ಆಯೋಜಿಸುವ ಮತವನ್ನು ಭಾರತ ಗೆದ್ದಿದೆ” ಎಂದು ಗೃಹ ಸಚಿವಾಲಯ ತಿಳಿಸಿದೆ.
ಸಿಬಿಐ ನಿರ್ದೇಶಕ ರಿಷಿ ಕುಮಾರ್ ಶುಕ್ಲಾ ಅವರು ಚಿಲಿಯ ಸ್ಯಾಂಟಿಯಾಗೊದಲ್ಲಿ ನಡೆಯುತ್ತಿರುವ 88 ನೇ ಇಂಟರ್ಪೋಲ್ ಜನರಲ್ ಅಸೆಂಬ್ಲಿಯಲ್ಲಿ ಸಂಕ್ಷಿಪ್ತ ಭಾಷಣವನ್ನು ಮಾಡಿದ್ದ ವೇಳೆ ಭಾರತದ ಉಮೇದುವಾರಿಕೆಯನ್ನು ಪ್ರಸ್ತಾಪಿಸಿದ್ದರು. ಈ ಕಾರ್ಯಕ್ರಮವನ್ನು ಆಯೋಜಿಸುವ ಭಾರತದ ಪ್ರಸ್ತಾಪದ ಪರವಾಗಿ ಬಹುಮತ ಸಿಕ್ಕಿತ್ತು.
ಇಂಟರ್ಪೋಲ್ 194 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ ಮತ್ತು ಪೋಲಿಸಿಂಗ್ನಲ್ಲಿ 100 ವರ್ಷಗಳ ಅಂತಾರಾಷ್ಟ್ರೀಯ ಸಹಕಾರದ ಅನುಭವವನ್ನು ಹೊಂದಿದೆ. ಇಂಟರ್ಪೋಲ್ನ 17 ಡೇಟಾಬೇಸ್ಗಳು 90 ಮಿಲಿಯನ್ ದಾಖಲೆಗಳನ್ನು ಹೊಂದಿವೆ.
ಅದರ ಸುರಕ್ಷಿತ ಜಾಗತಿಕ ದತ್ತಾಂಶ ಸಂವಹನ ಚಾನೆಲ್ (ಐ -24 / 7), ಘಟನೆ ಸ್ಪಂದನಾ ತಂಡಗಳು, ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್, ಎನ್ಸಿಬಿಗಳ ವಿಶ್ವಾದ್ಯಂತದ ನೆಟ್ವರ್ಕ್, ಇಂಟರ್ಪೋಲಿಸ್ ಸದಸ್ಯ ರಾಷ್ಟ್ರಗಳ ಎಲ್ಇಎ (law enforcement agency) ಗಳಿಗೆ ಸಹಾಯ ಮಾಡುವ ಅನನ್ಯತೆಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.