ನವದೆಹಲಿ: ಜಾಗತಿಕ ಭಯೋತ್ಪಾದಕ ಹಣಕಾಸು ನಿಗ್ರಹ ಸಂಸ್ಥೆ FATF ಪಾಕಿಸ್ಥಾನಕ್ಕೆ ಮತ್ತೊಂದು ಡೆಡ್ಲೈನ್ ನೀಡಿದೆ. ಉಗ್ರರಿಗೆ ಹಣಕಾಸು ನೆರವು ನೀಡುವುದರನ್ನು ಸಂಪೂರ್ಣವಾಗಿ ತಡೆಗಟ್ಟಲು ಅದಕ್ಕೆ 2020ರ ಫೆಬ್ರವರಿ ಗಡುವನ್ನು ನೀಡಿದೆ. ಈ ನಾಲ್ಕು ತಿಂಗಳ ಅವಧಿಯೊಳಗೆ ಕ್ರಮಕೈಗೊಳ್ಳಲು ವಿಫಲವಾದರೆ ಕಪ್ಪು ಪಟ್ಟಿಗೆ ಸೇರಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ. ಅಲ್ಲಿಯವರೆಗೆ ಪಾಕಿಸ್ಥಾನ ‘ಗ್ರೇ ಪಟ್ಟಿ’ಯಲ್ಲೇ ಇರಲಿದೆ.
ಫೆಬ್ರವರಿ 2020ರಲ್ಲಿ ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸುವುದು ಈಗ ಬಹುತೇಕ ಸಂಭವನೀಯ ಎಂದು FATF ಅಧಿಕಾರಿಗಳು ಹೇಳಿದ್ದಾರೆ.
ಭಯೋತ್ಪಾದನೆಗೆ ಹಣ ಪೂರೈಕೆಯಾಗುವುದನ್ನು ತಡೆಗಟ್ಟಲು ಮತ್ತು ಭಯೋತ್ಪಾದನಾ ಹಣಕಾಸು ಸವಾಲುಗಳನ್ನು ಎದುರಿಸಲು ಅತ್ಯಂತ ದುರ್ಬಲ ದೇಶೀಯ ಕಾನೂನುಗಳನ್ನು ಹೊಂದಿರುವ ದೇಶವೆಂದು ಪಾಕಿಸ್ಥಾನವನ್ನು ಪರಿಗಣಿಸಲಾಗಿದ್ದು, ಪ್ರಸ್ತುತ ಅದನ್ನು FATFನ ‘ಗ್ರೇ ಪಟ್ಟಿ’ಯಲ್ಲಿ ಇರಿಸಲಾಗಿದೆ.
ಭಯೋತ್ಪಾದನೆಯನ್ನು ನಿಗ್ರಹಿಸಲು, ಭಯೋತ್ಪಾದನೆಗೆ ಹಣಕಾಸು ಪೂರೈಕೆಯಾಗುವುದನ್ನು ಸಂಪೂರ್ಣವಾಗಿ ತಡೆಗಟ್ಟಲು ಪಾಕಿಸ್ಥಾನ ವಿಫಲವಾಗಿದೆ ಎಂದು FATF ಆರೋಪಿಸುತ್ತಲೇ ಬಂದಿದೆ. ಒಂದು ವೇಳೆ ಇದು ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸಿದರೆ ಪಾಕಿಸ್ಥಾನ ಆರ್ಥಿಕವಾಗಿ ದಿವಾಳಿಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.