ಗುವಾಹಟಿ: ಪ್ಲಾಸ್ಟಿಕ್ ಅನ್ನು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಅಸ್ಸಾಂನ ಬೊನ್ಗೈಗಾಂವ್ ಜಿಲ್ಲೆಯಲ್ಲಿ ಮಹತ್ವದ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಒಂದು ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ತಂದುಕೊಟ್ಟರೆ ಒಂದು ಗಿಡ ಮತ್ತು ಬಟ್ಟೆಯ ಚೀಲವನ್ನು ನೀಡುವುದಾಗಿ ಜನರಿಗೆ ಕರೆ ನೀಡಿದೆ. ಮಹಿಳಾ ಸ್ವಸಹಾಯ ಗುಂಪಗಳು ತಯಾರಿಸಿದ ಬಟ್ಟೆ ಚೀಲಗಳನ್ನು ಪ್ಲಾಸ್ಟಿಕ್ ತ್ಯಾಜ್ಯ ತಂದು ಕೊಟ್ಟವರಿಗೆ ಹಂಚಲಾಗುತ್ತಿದೆ. ಇದರಿಂದ ಮಹಿಳೆಯರಿಗೂ ಉತ್ತೇಜನ ಸಿಗುತ್ತಿದೆ, ಪ್ಲಾಸ್ಟಿಕ್ ತ್ಯಾಜ್ಯವೂ ಕಡಿಮೆಯಾಗುತ್ತಿದೆ.
ಕೊಟ್ಟು ಪಡೆಯುವಿಕೆಯ ಈ ಕಾರ್ಯಕ್ರಮ ಪ್ಲಾಸ್ಟಿಕ್ ನಿರ್ಮೂಲನೆಯ ಬಗ್ಗೆ ಅರಿವು ಮೂಡಿಸಲಿದೆ ಮತ್ತು ಜನರಿಗೆ ಬಟ್ಟೆ ಚೀಲ ಬಳಸುವಂತೆ ಪ್ರೇರೇಪಿಸಲಿದೆ, ಪರಿಸರವನ್ನು ಪೋಷಿಸಲಿದೆ.
ಈ ಕಾರ್ಯಕ್ರಮದ ಕುರಿತು ಮಾತನಾಡಿದ ಬೊನ್ಗೈಗಾಂವ್ ಜಿಲ್ಲಾಧಿಕಾರಿ ಆದಿಲ್ ಖಾನ್ ಅವರು, “ತಮ್ಮ ಮನೆ, ವಾಣಿಜ್ಯ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ಪ್ಲಾಸ್ಟಿಕ್ ಸಂಗ್ರಹಿಸಲು ಮತ್ತು ಅದನ್ನು ನಿರ್ಮೂಲನೆ ಮಾಡಲು ಜನರನ್ನು ಪ್ರೋತ್ಸಾಹಿಸುವ ಸಲುವಾಗಿ ನಾವು ‘ಪ್ಲಾಂಟ್ಸ್ ಫಾರ್ ಪ್ಲಾಸ್ಟಿಕ್’ ಅಭಿಯಾನವನ್ನು ಪ್ರಾರಂಭಿಸುತ್ತಿದ್ದೇವೆ. ಸ್ವಸಹಾಯ ಸಂಘಗಳು ತಯಾರಿಸುವ ಬಟ್ಟೆ ಚೀಲಗಳಿಗೂ ಒಳ್ಳೆಯ ಬೇಡಿಕೆಯನ್ನು ಇದು ತಂದುಕೊಡಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದಿದ್ದಾರೆ.
ಜನರಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ಅನ್ನು ನಾಶಪಡಿಸುವ ಅಥವಾ ಮರುಬಳಕೆ ಮಾಡುವ ಕಾರ್ಯವನ್ನು ಮಹಾನಗರ ಪಾಲಿಕೆ ಮಾಡಲಿದೆ. ಪ್ಲಾಸ್ಟಿಕ್ ತಂದುಕೊಟ್ಟ ಜನರಿಗೆ ಮಾವಿನ ಹಣ್ಣು, ಆಲಿವ್, ಹಲಸಿನ ಕಾಯಿ ಮುಂತಾದ ಉಪಯುಕ್ತ ಗಿಡಗಳನ್ನು ನೀಡಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು ಅಸ್ಸಾಂ ಸರ್ಕಾರವು ಜನತಾ ಭವನ ಕಾಂಪ್ಲೆಕ್ಸ್ ಆವರಣದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಅನ್ನು ನಿಷೇಧ ಮಾಡಿದೆ. ಅದರ ಬದಲಿಗೆ ಗ್ಲಾಸ್, ಬಿದಿರಿನ ವಸ್ತುಗಳನ್ನು ತಂದಿಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.