ಕಠ್ಮಂಡು: ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ನಡೆದ SAFF ಅಂಡರ್ 18 ಚಾಂಪಿಯನ್ಶಿಪ್ನಲ್ಲಿ ಭಾರತ ಜಯಭೇರಿಯನ್ನು ಬಾರಿಸಿದೆ. ಭಾರತೀಯರು ಫೈನಲ್ನಲ್ಲಿ ಬಾಂಗ್ಲಾವನ್ನು ಮಣಿಸುವ ಮೂಲಕ ಮೊದಲ ಬಾರಿಗೆ ಚಾಂಪಿಯನ್ಶಿಪ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾರೆ.
ಕಠ್ಮಂಡುವಿನ ಹಲ್ಚೌಕ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬಾಂಗ್ಲಾವನ್ನು ಮಣಿಸಿ ಭಾರತ ಚಾಂಪಿಯನ್ ಆಗಿದೆ. ಈ ಬಗ್ಗೆ ತಂಡ ಮುಖ್ಯ ಕೋಚ್ ಫ್ಲಾಯ್ಡ್ ಪಿಂಟೊ ಅತೀವ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ತಂಡವು ಪಂದ್ಯಾವಳಿಯಲ್ಲಿ ಅತ್ಯುತ್ತಮ ಫುಟ್ಬಾಲ್ ತಂಡವಾಗಿತ್ತು, ಮಾತ್ರವಲ್ಲದೆ ಅತ್ಯಂತ ‘ಪರಿಣಾಮಕಾರಿ ತಂಡ’ ಕೂಡ ಆಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ಪಂದ್ಯ ಎರಡನೇ ನಿಮಿಷದಲ್ಲಿದ್ದಾಗ ವಿಕ್ರಮ್ ಪ್ರತಾಪ್ ಸಿಂಗ್ ಪಂದ್ಯದ ಆರಂಭಿಕ ಗೋಲು ಗಳಿಸಿದರು ಆದರೆ ಮೊದಲಾರ್ಧದ ಅಂತ್ಯದ ಮೊದಲು ಬಾಂಗ್ಲಾದೇಶ ಸಮಬಲ ಸಾಧಿಸಿತು. ಪಂದ್ಯದ 90 + 1 ನಿಮಿಷದಲ್ಲಿ ರವಿ ಬಹದ್ದೂರ್ ರಾಣಾ ಮತ್ತೊಂದು ಗೋಲು ಗಳಿಸುವವರೆಗೂ ಉಭಯ ತಂಡಗಳು 1-1ರಲ್ಲಿ ಸಮಬಲಕ್ಕೆ ಸಿಲುಕಿಕೊಂಡವು, ನಂತರ ಭಾರತ U-18 ಅನ್ನು 2-1 ಅಂತರದಿಂದ ಜಯಿಸಿತು.
“ಈ SAFF ಚಾಂಪಿಯನ್ಶಿಪ್ ಅನ್ನು ಕೊನೆಗೊಳಿಸಲು ತೇಜಸ್ಸು ಬೇಕಾಗುತ್ತದೆ ಎಂದು ನಾನು ಹೇಳಿದ್ದೆ ಮತ್ತು ರವಿ ತಮ್ಮ ಅದ್ಭುತವಾದ ಗೋಲ್ ಮೂಲಕ ತೇಜಸ್ಸನ್ನು ತಂದುಕೊಟ್ಟರು” ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ನ (ಎಐಎಫ್ಎಫ್) ವೆಬ್ಸೈಟ್ ಪಿಂಟೊ ಹೇಳಿಕೆಯನ್ನು ಉಲ್ಲೇಖಿಸಿದೆ. ಈ ಮೂಲಕ ರವಿ ಅವರ ಗೋಲು ಭಾರತಕ್ಕೆ ವಿಜಯದ ಮಾಲೆಯನ್ನು ತಂದುಕೊಟ್ಟಿದು ಎಂಬುದನ್ನು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.