ನವದೆಹಲಿ: ಪ್ರೇಕ್ಷಣೀಯ ಸ್ಥಳವನ್ನು ನೋಡಲು ಹೋಗಿ ಭಾರತೀಯ ಆರ್ಚರಿ ಸ್ಪರ್ಧಿಗಳು ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್, 2015ರ ಮೂರನೇ ಸ್ಥಾನಕ್ಕಾಗಿನ ಸ್ಪರ್ಧೆಯನ್ನೇ ತಪ್ಪಿಸಿಕೊಂಡಿದ್ದಾರೆ.
ಪುರುಷ ಆರ್ಚರಿಪಟುಗಳಾದ ಗುರುವೀಂದರ್ ಸಿಂಗ್, ಕನ್ವಲ್ಪ್ರೀತ್ ಸಿಂಗ್ ಮತ್ತು ಅಮನ್ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಮಂಗಳವಾರ ಅವರು 3ನೇ ಸ್ಥಾನದ ಕಂಚಿನ ಪದಕ್ಕಾಗಿ ಇಟಲಿಯ ವಿರುದ್ಧ ಆಟವಾಡಬೇಕಿತ್ತು. ಆದರೆ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ತೆರಳಿದ್ದ ಇವರು ತಡವಾಗಿ ಬಂದ ಕಾರಣ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಈ ಮೂಲಕ ಭಾರತದ ಕಂಚಿನ ಆಸೆಗೆ ತಣ್ಣೀರೆರೆಚಿದ್ದಾರೆ.
ಆದರೆ ಈ ಆಟಗಾರರ ಕೋಚ್ ಜೀವನ್ಜೋತ್ ಸಿಂಗ್ ಮಾತ್ರ ಆಟ ಮಿಸ್ ಆಗಲು ಬೇರೆಯದ್ದೇ ಕಾರಣ ನೀಡಿದ್ದಾರೆ. ಆಟಗಾರರ ಬಳಿಯಿದ್ದ ಬಿಲ್ಲು ಮುರಿದು ಹೋಗಿತ್ತು, ಇವರ್ಯಾರೂ ಹೆಚ್ಚುವರಿ ಬಿಲ್ಲುಗಳನ್ನು ತಂದಿರಲಿಲ್ಲ. ಹೀಗಾಗಿ ಭಾರತೀಯ ಮಹಿಳಾ ಸ್ಪರ್ಧಿಗಳ ಬಿಲ್ಲನ್ನು ತರಲು ಅವರಿದ್ದ ಬಳಿ ಹೋಗಿದ್ದೆವು. ಬರುವಾಗ ತಡವಾಯಿತು. ಆಯೋಜಕರು ನಮ್ಮನ್ನು ಆಡಲು ಬಿಡಲಿಲ್ಲ ಎಂದಿದ್ದಾರೆ.
ಆದರೆ ಆಟಗಾರರು ಸುತ್ತಾಡಲು ಹೋದ ಕಾರಣವೇ ತಡವಾಗಿ ಬಂದರು ಎಂಬುದನ್ನು ಆರ್ಚರಿ ಅಸೋಸಿಯೇಶನ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ.
ಒಟ್ಟಿನಲ್ಲಿ ವಿದೇಶಕ್ಕೆ ತೆರಳಿ ಆಡುವುದಕ್ಕಿಂತ ಹೆಚ್ಚಾಗಿ ಸುತ್ತುವುದಕ್ಕೆಯೇ ಪ್ರಾಮುಖ್ಯತೆ ನೀಡಿದ ಆರ್ಚರಿ ಪಟುಗಳು ಭಾರತಕ್ಕೆ ಕಂಚು ಗೆದ್ದುಕೊಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.