ಇಂದು ಪ್ರತಿಯೊಬ್ಬ ಭಾರತೀಯ ತಮ್ಮ ಸೈನಿಕರ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬೇಕಾದ ದಿನ. 3 ವರ್ಷಗಳ ಹಿಂದೆ ಇದೇ ದಿನದಂದು ರಾತ್ರಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ಕ್ಯಾಂಪ್ಗಳನ್ನು ಗುರಿಯಾಗಿರಿಸಿಕೊಂಡು ಸರ್ಜಿಕಲ್ ಸ್ಟ್ರೈಕ್ (ಸೀಮಿತ ದಾಳಿ) ಕೈಗೊಳ್ಳಲಾಗಿದ್ದು ದಾಳಿಯಲ್ಲಿ ಅನೇಕ ಉಗ್ರರು ಸಾವನ್ನಪ್ಪಿದ್ದರು. ಅವರ ಜತೆಗಿದ್ದ ಹಲವರು ಗಾಯಗೊಂಡಿದ್ದಾರೆ ಎಂದು ಸೇನಾ ಮುಖ್ಯಸ್ಥ ರಣಬೀರ್ ಸಿಂಗ್ ಬಹಿರಂಗ ಪಡಿಸಿದ್ದು ಇದು ದೇಶಾದ್ಯಂತ ಹೊಸ ಸಂಚಲನವನ್ನು ಮೂಡಿಸಿತ್ತು.
ಹಾಗಾದರೆ ಸರ್ಜಿಕಲ್ ಸ್ಟ್ರೈಕ್ ಎಂದರೇನು?
ಸರ್ಜಿಕಲ್ ಸ್ಟ್ರೈಕ್ ಎಂದರೆ ವ್ಯಾಪಕ ಹಾನಿಯನ್ನು ತಪ್ಪಿಸಿ ನಿರ್ದಿಷ್ಟವಾದುದನ್ನು ನಾಶಗೊಳಿಸಲು ವಿನ್ಯಾಸಿಸಲಾದ ಸೇನಾ ದಾಳಿ. ಒಂದು ನಿರ್ದಿಷ್ಟ ಸ್ಥಳದಲ್ಲಿ, ನಿಖರ ರೀತಿಯಲ್ಲಿ ಮಾಡಲಾದ ಒಂದು ಬಗೆಯ ಮಿಲಿಟರಿ ಆಕ್ರಮಣ. ಈ ಸೀಮಿತ ದಾಳಿಯಲ್ಲಿ ಬೃಹತ್ ಪ್ರಮಾಣದ ಹಾನಿಯನ್ನು ತಪ್ಪಿಸಿ ಉದ್ದೇಶಿತ ಕಾನೂನುಬದ್ಧ ಸೇನಾ ಗುರಿಗೆ ಮಾತ್ರ ಹಾನಿ ಮಾಡುವ ಗುರಿ ಇರುತ್ತದೆ. ಈ ರೀತಿಯ ದಾಳಿಯಲ್ಲಿ ಸುತ್ತಲಿನ ವಾಹನಗಳು, ಕಟ್ಟಡಗಳು, ಅಥವಾ ಸಾಮಾನ್ಯ ಸಾರ್ವಜನಿಕ ಮೂಲಭೂತ ಮತ್ತು ಉಪಯುಕ್ತತೆಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ.
ಈ ಸೀಮಿತ ದಾಳಿಗೆ ಅತ್ಯುತ್ತಮ ಉದಾಹರಣೆ ಎಂದರೆ ಇತ್ತೀಚಿಗೆ ಭಾರತೀಯ ಸೈನ್ಯದ 70 ಕಮಾಂಡೋಗಳು ಮಯನ್ಮಾರ್ನಲ್ಲಿ ಕೈಗೊಂಡ ಕಾರ್ಯಾಚರಣೆ. ಇದನ್ನು ಕೇವಲ 40 ನಿಮಿಷಗಳಲ್ಲಿ ಮುಗಿಸಿದ್ದ ಕಮಾಂಡೋಗಳು ೩೮ ನಾಗಾ ಬಂಡುಕೋರರನ್ನು ಹತ್ಯೆಗೈಯ್ಯಲಾಗಿತ್ತು. ಜತೆಗೆ 7 ಜನ ಗಾಯಗೊಂಡಿದ್ದರು.
ನಮ್ಮ ಹೆಮ್ಮೆಯ ಸೈನಿಕರು ಮಯನ್ಮಾರ್ಗೆ ನುಗ್ಗಿ ರಾತ್ರೋರಾತ್ರಿ ಶತ್ರುಗಳ ಮೇಲೆ ಪ್ರತಿದಾಳಿ ಮಾಡಿ ಅದೇ ದಾರಿಯಲ್ಲಿ ವಾಪಸ್ಸು ಬಂದದ್ದು ಯಾವ ರೋಚಕತೆಗೂ ಕಡಿಮೆಯಲ್ಲ.
ಹಾ! ಈ ಸರ್ಜಿಕಲ್ ದಾಳಿ ಮಾಡಿದ್ದಾದರು ಏಕೆ? ಎಂಬುದು ತಿಳಿದುಕೊಳ್ಳಬೇಕಲ್ಲವೇ
ಇಸ್ಲಾಮಿಕ್ ಭಯೋತ್ಪಾದಕರು ಭಾರತದ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ ೭೦ ಕಿ.ಮೀ. ದೂರದಲ್ಲಿರುವ ಉರಿ ಪಟ್ಟಣದ ಸಮೀಪ, 18 ಸೆಪ್ಟೆಂಬರ್ 2016 ರಂದು ದಾಳಿ ಮಾಡಿದ್ದರು. ಇದು ಸುಮಾರು ಎರಡು ದಶಕಗಳಲ್ಲಿ ಭಾರತೀಯ ಭದ್ರತಾ ಸಿಬ್ಬಂದಿ ಮೇಲೆ ಮಾರಣಾಂತಿಕ ದಾಳಿ ಎಂದು ಹೇಳಲಾಗಿದೆ.
ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಜೈಷ್ – ಎ- ಮೊಹಮ್ಮದ್ ಸಂಘಟನೆಗೆ ಸೇರಿದವರು ಎಂದು ಶಂಕಿಸಲಾದ ನಾಲ್ವರು ಉಗ್ರರು ಈ ದಾಳಿ ನಡೆಸಿದ್ದರು. ದಾಳಿಯ ಹಿಂದೆ ಇರುವವರು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ಸೆಪ್ಟಂಬರ್ 18, 2016 ರ ಭಾನುವಾರ ಬೆಳಗ್ಗೆ ಸುಮಾರು 5.30 ರ ವೇಳೆಗೆ ಈತಿ ದಾಳಿ ನಡೆಸಲಾಯಿತು. ಉರಿಯ ಬ್ರಿಗೇಡ್ 12 ಕೇಂದ್ರ ಕಚೇರಿ ಮೇಲೆ ನಿರಂತರ ಉಗ್ರರು ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದರು. ಹಠಾತ್ ದಾಳಿಯಲ್ಲಿ 17 ಯೋಧರು ವೀರ ಮರಣ ಹೊಂದಿದರೆ, 6 ಭಾರತೀಯ ಯೋಧರು ಗಾಯಗೊಂಡಿದ್ದರು. ಈ ಘಟನೆ ಬಳಿಕ ಗೃಹ ಸಚಿವ ರಾಜನಾಥ್ ಸಿಂಗ್ ಅವರು ರಷ್ಯಾ ಹಾಗೂ ಯುಎಸ್ ಪ್ರವಾಸವನ್ನು ರದ್ದುಗೊಳಿಸಿದ್ದರು. ಕಾಶ್ಮೀರದಲ್ಲಿ ಉದ್ಭವಿಸಿರುವ ಪರಿಸ್ಥಿತಿ ಬಗ್ಗೆ ಚರ್ಚಿಸಲು ಉನ್ನತ ಮಟ್ಟದ ತುರ್ತುಸಭೆಗೆ ರಾಜನಾಥ್ ಸಿಂಗ್ ಕರೆ ನೀಡಿದ್ದರು. ನಂತರದ ಎಣಿಕೆಯಲ್ಲಿ 20 ಜನ ಯೋಧರು ಮರಣ ಹೊಂದಿದ್ದು 17 ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು. ಇದಕ್ಕೆ ತಕ್ಕ ಉತ್ತರ ನೀಡಲು ಭಾರತ ಸಿದ್ಧವಾಗಿಯೇ ನಿಂತಿತ್ತು. ಆ ಉತ್ತರವೇ ಸರ್ಜಿಕಲ್ ಸ್ಟ್ರೈಕ್.
ಈ ಸರ್ಜಿಕಲ್ ದಾಳಿ ನಡೆದ ರೀತಿ ಅತ್ಯಂತ ರೋಮಾಂಚಕ.
ಅದು ಸಪ್ಟೆಂಬರ್ 28-29 ರ ನಡುವಣ ರಾತ್ರಿ ಸೇನೆ ನಡೆಸಿದ ಕಾರ್ಯಾಚರಣೆ. ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರ ಅಡುಗುದಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ 35 ಉಗ್ರರು ಸೇರಿದಂತೆ 9 ಪಾಕ್ ಸೈನಿಕರನ್ನು ಹತ್ಯೆ ಮಾಡಲಾಯಿತು. ಉಗ್ರರ ಏಳು ಶಿಬಿರಗಳನ್ನು ನಾಶ ಮಾಡಲಾಯಿತು. ಹಲವು ಉಗ್ರರು ದಾಳಿಗೆ ಬಲಿಯಾಗಿದ್ದರು ಎಂದು ಸೇನೆ ತಿಳಿಸಿದರು. ಆದರೆ ಸತ್ತವರ ಸಂಖ್ಯೆ ಎಷ್ಟು ಎಂಬುದನ್ನು ಬಹಿರಂಗಪಡಿಸಿಲ್ಲ. ಐದೂವರೆ ತಾಸು ನಡೆದ ಕಾರ್ಯಾಚರಣೆಯಲ್ಲಿ ಹೆಲಿಕಾಪ್ಟರ್ಗಳನ್ನು ಬಳಸಿಕೊಳ್ಳಲಾಗಿತ್ತು.
ರಾತ್ರೋರಾತ್ರಿ ವೈರಿಯ ಗುಹೆಗೆ ವೈರಿಗೆ ಗೊತ್ತಾಗದಂತೆ ನುಗ್ಗಿ ಅವರನ್ನು ಧ್ವಂಸ ಮಾಡಿ ಹಿಂದಿರುಗಿದ ಆ ಸಾಹಸ ಯಾರನ್ನಾದರು ರೋಮಾಂಚನಗೊಳಿಸಿಬಿಡುತ್ತದೆ. ಈ ಘಟನೆಯಾಗಿ ಇಂದಿಗೆ 3 ವರ್ಷಗಳಾಗಿವೆ.
✍ ರಶ್ಮಿ ನಾಯಕ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.