ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್ನಲ್ಲಿ ನಡೆದ ವಿಶ್ವಸಂಸ್ಥೆ ಅಧಿವೇಶನದ ಸಂದರ್ಭದಲ್ಲಿ ಪೆಸಿಫಿಕ್ ದ್ವೀಪಗಳ ಅಭಿವೃದ್ಧಿಶೀಲ ರಾಷ್ಟ್ರಗಳ (ಪಿಎಸ್ಐಡಿಎಸ್) ಮುಖಂಡರನ್ನು ಭೇಟಿಯಾದರು. ಅಸಮಾನತೆಯನ್ನು ನಿವಾರಿಸಲು ಮತ್ತು ಜನಸಾಮಾನ್ಯರನ್ನು ಸಶಕ್ತಗೊಳಿಸಲು ಕೊಡುಗೆ ನೀಡುವಂತೆ ಅಭಿವೃದ್ಧಿ ನೀತಿಗಳನ್ನು ಒಳಗೊಳ್ಳುವ ಮತ್ತು ಸಮರ್ಥನೀಯವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆಗಳು ನಡೆದವು.
ಈ ವೇಳೆ ಮೋದಿಯವರು ತನ್ನ ಪ್ರಮುಖ ಧ್ಯೇಯವಾದ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್”ಗೆ ಅನುಗುಣವಾಗಿ, ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದ ಅಭಿವೃದ್ಧಿ ಯೋಜನೆಯ ಅನುಷ್ಠಾನವನ್ನು ಮಾಡಲು ಪೆಸಿಫಿಕ್ ದ್ವೀಪ ರಾಷ್ಟ್ರಗಳಿಗೆ 12 ಮಿಲಿಯನ್ ಯುಎಸ್ ಡಾಲರ್ ಅನುದಾನವನ್ನು ನೀಡುವುದಾಗಿ ಘೋಷಿಸಿದರು.
ಪಿಎಸ್ಐಡಿಎಸ್ ನಾಯಕರನ್ನು ಭೇಟಿಯಾದ ಸಂದರ್ಭದಲ್ಲಿ, ಹವಾಮಾನ ಬದಲಾವಣೆಯ ಪರಿಣಾಮವನ್ನು ನಿಭಾಯಿಸಲು ಭಾರತವು ಬದ್ಧವಾಗಿದೆ ಮತ್ತು ಅಗತ್ಯ ಅಭಿವೃದ್ಧಿ ಮತ್ತು ತಾಂತ್ರಿಕ ನೆರವಿನ ಮೂಲಕ ಪಿಎಸ್ಐಡಿಎಸ್ ತಮ್ಮ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಪ್ರಯತ್ನಗಳಿಗೆ ಬೆಂಬಲವನ್ನು ಭಾರತ ನೀಡಲಿದೆ ಎಂದು ಮೋದಿ ಪ್ರತಿಪಾದಿಸಿದರು.
ಇದಲ್ಲದೆ, ಪ್ರತಿ ದೇಶದ ಅವಶ್ಯಕತೆಯ ಆಧಾರದ ಮೇಲೆ ಸೌರ, ನವೀಕರಿಸಬಹುದಾದ ಇಂಧನ ಮತ್ತು ಹವಾಮಾನ ಸಂಬಂಧಿತ ಯೋಜನೆಗಳನ್ನು ಕೈಗೊಳ್ಳಲು ಪಿಎಸ್ಡಿಎಸ್ ಪಡೆಯಬಹುದಾದ 150 ಮಿಲಿಯನ್ ಡಾಲರ್ಗಳ ರಿಯಾಯಿತಿ ಸಾಲವನ್ನು ಈ ಸಂದರ್ಭದಲ್ಲಿ ಘೋಷಿಸಲಾಯಿತು. ಪಿಎಸ್ಐಡಿಎಸ್ ನಾಯಕರು ಉಭಯ ಪಕ್ಷಗಳ ನಡುವಿನ ಸಹಕಾರವನ್ನು ಬಲಪಡಿಸಲು ಮೋದಿ ಪ್ರಸ್ತಾಪಿಸಿದ ಉಪಕ್ರಮಗಳನ್ನು ಸ್ವಾಗತಿಸಿದರು ಮತ್ತು ತಮ್ಮ ಸರ್ಕಾರಗಳಿಂದ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಘೋಷಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.