ನವದೆಹಲಿ: ವಿಶ್ವದ ಅತೀ ಎತ್ತರದ ಮತ್ತು ಅತ್ಯಂತ ಅಪಾಯಕಾರಿ ಯುದ್ಧಭೂಮಿಯಾದ ಸಿಯಾಚಿನ್ ಗ್ಲೇಸಿಯರ್ನ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ಮೆಗಾ ಅಭಿಯಾನದ ಭಾಗವಾಗಿ ಭಾರತೀಯ ಸೇನೆಯು ಸಿಯಾಚಿನ್ನಿಂದ 130 ಟನ್ ಘನತ್ಯಾಜ್ಯವನ್ನು ಹೊರತೆಗೆದಿದೆ.
ಅಧಿಕ ಸಂಖ್ಯೆಯ ಸೈನಿಕರ ಉಪಸ್ಥಿತಿಯ ಕಾರಣದಿಂದಾಗಿ ಗ್ಲೇಸಿಯರ್ ಪ್ರದೇಶದಲ್ಲಿ ಹಲವು ಟನ್ ತ್ಯಾಜ್ಯಗಳು ಸೃಷ್ಟಿಯಾಗಿದ್ದವು. ಈ ಮಾಲಿನ್ಯಕಾರಕ ತ್ಯಾಜ್ಯಗಳನ್ನು ಈ ಪ್ರದೇಶದಿಂದ ತೆಗೆದುದುಹಾಕಲು ಸೇನೆಯು ಕಟಿಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 130.18 ಟನ್ ತ್ಯಾಜ್ಯವನ್ನು ಈವರೆಗೆ ವಿಲೇವಾರಿ ಮಾಡಲಾಗಿದ್ದು, ಇದರಲ್ಲಿ 48.41 ಟನ್ ಜೈವಿಕವಾಗಿ ಕರಗುವ ತ್ಯಾಜ್ಯ, 40.32 ಟನ್ ಜೈವಿಕವಾಗಿ ಕರಗದ ತ್ಯಾಜ್ಯಗಳಾಗಿವೆ ಮತ್ತು 41.45 ಟನ್ ಜೈವಿಕವಾಗಿ ಕರಗದ ಲೋಹದ ತ್ಯಾಜ್ಯಗಳೂ ಇದರಲ್ಲಿ ಸೇರಿವೆ ಎಂದು ಅವರು ಹೇಳಿದ್ದಾರೆ.
ಅಧಿಕೃತ ಮಾಹಿತಿ ಪ್ರಕಾರ, ಸಿಯಾಚಿನ್ ಗ್ಲೇಸಿಯರ್ನಲ್ಲಿ ಉತ್ಪತ್ತಿಯಾದ ತ್ಯಾಜ್ಯದ ಒಟ್ಟು ಪ್ರಮಾಣ 236 ಟನ್.
ಒಂದೂವರೆ ವರ್ಷಗಳ ಹಿಂದೆಯೇ ಸೇನೆಯು ಇಲ್ಲಿ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸಿತು.
ಲೋಹವಲ್ಲದ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲು ಸಿಯಾಚಿನ್ ಬೇಸ್ ಕ್ಯಾಂಪ್ ಬಳಿಯ ಪಾರ್ಟಾಪುರ ಮತ್ತು ಲೇಹ್ನ ಬುಕ್ಡಾಂಗ್ನಲ್ಲಿ ದಹನಕಾರಕಗಳನ್ನು ಅಳವಡಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಸೇನೆಯು ಲೇಹ್ನಲ್ಲಿ ರಟ್ಟಿನ ಮರುಬಳಕೆ ಯಂತ್ರಗಳನ್ನು ಸ್ಥಾಪಿಸಿದೆ.
ಪರಿಸರವನ್ನು ರಕ್ಷಿಸುವ ಬಗ್ಗೆ ಲೇಹ್ ಮತ್ತು ಅಕ್ಕಪಕ್ಕದ ಪ್ರದೇಶಗಳ ಜನರಲ್ಲಿ ಜಾಗೃತಿ ಮೂಡಿಸಲು ಸೇನೆಯು ಮೆಗಾ ಅಭಿಯಾನವನ್ನು ಪ್ರಾರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.