ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ಶುಕ್ರವಾರ ಮಾಡಿದ ಅತೀದೊಡ್ಡ ಘೋಷಣೆಯಲ್ಲಿ ಇಂಡಿಯಾ ಇಂಕ್ಗೆ 1.45 ಲಕ್ಷ ಕೋಟಿ ರೂಪಾಯಿಗಳ ತೆರಿಗೆ ಕಡಿತದ ಉಡುಗೊರೆಯನ್ನು ನೀಡಿದರು. ಸ್ಥಾಪಿತ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆಯನ್ನು ನಾಲ್ಕನೇ ಒಂದು ಭಾಗ (30% ರಿಂದ 22%) ರಷ್ಟು ಕಡಿತಗೊಳಿಸಲಾಗಿದೆ ಮತ್ತು 2023ರ ಮಾರ್ಚ್ ತಿಂಗಳ ಮೊದಲು ಉತ್ಪಾದನೆಯನ್ನು ಪ್ರಾರಂಭಿಸುವ ಹೊಸ ಉತ್ಪಾದನಾ ಕಂಪನಿಗಳಿಗೆ ತೆರಿಗೆ ದರವನ್ನು 15% ಕ್ಕೆ ಇಳಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ವ್ಯಾಪಾರ ಯುದ್ಧದ ಮಧ್ಯೆ ಚೀನಾದಿಂದ ಪಲಾಯನ ಮಾಡುವ ಅಮೆರಿಕನ್ ಕಂಪೆನಿಗಳನ್ನು ಭಾರತಕ್ಕೆ ಆಹ್ವಾನಿಸಲು ಸೂಕ್ತ ಸಂದರ್ಭದಲ್ಲಿ ಈ ಕ್ರಮವನ್ನು ಘೋಷಣೆ ಮಾಡಲಾಗಿದೆ. ಭಾರತಕ್ಕೂ ಇದು ಸಾಕಷ್ಟು ಪ್ರಯೋಜನಗಳನ್ನು ತಂದುಕೊಡಲಿದೆ.
ಮೋದಿ ಸರ್ಕಾರ ನೀಡಿದ ಅತೀ ದೊಡ್ಡ ಕಾರ್ಪೊರೇಟ್ ತೆರಿಗೆ ವಿನಾಯಿತಿಯಿಂದಾಗಿ ಭಾರತವು ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಕಾರ್ಪೊರೇಟ್ ಆಡಳಿತಗಳಲ್ಲಿ ಒಂದಾಗಿದೆ. ಭಾರತದಲ್ಲಿ ವಿಧಿಸುವ ಕಾರ್ಪೊರೇಟ್ ತೆರಿಗೆ ಆಗ್ನೇಯ ಏಷ್ಯಾ ಮತ್ತು ಪೂರ್ವ ಏಷ್ಯಾದ ಇತರ ಉತ್ಪಾದನಾ ಕೇಂದ್ರಗಳಂತೆಯೇ ಸೂಕ್ತ ದರದಲ್ಲಿದೆ.
“ಭಾರತವು ಹೊಸ ಉತ್ಪಾದನಾ ಕಂಪನಿಗಳನ್ನು ಪ್ರಪಂಚದಾದ್ಯಂತ ಆಕರ್ಷಿಸಲು ಸಿದ್ಧವಾಗಿದೆ” ಎಂದು ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. “ಉತ್ಪಾದನಾ ಕಂಪನಿಗಳು ತೆರಿಗೆ ಲಾಭ ಪಡೆಯಲು ಭಾರತದಲ್ಲಿ ಕಚೇರಿಯನ್ನು ಹೊಂದಿರಬೇಕು ಮತ್ತು ಭಾರತದಲ್ಲೇ ವ್ಯವಹಾರಗಳನ್ನು ನಡೆಸಬೇಕು” ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸುವುದರಿಂದ ದೇಶವು ಉತ್ಪಾದನಾ ಕೇಂದ್ರ ಅಥವಾ ‘ವಿಶ್ವದ ಕಾರ್ಖಾನೆ’ ಆಗಲು ಸಹಾಯಕವಾಗುತ್ತದೆ. ಇಲ್ಲಿಯವರೆಗೆ, ಚೀನಾ ಜಾಗತಿಕ ಕಂಪನಿಗಳಿಗೆ ‘ಕಾರ್ಖಾನೆ’ಯ ಪಾತ್ರವನ್ನು ವಹಿಸಿದೆ. ಆದರೆ, ಹೆಚ್ಚುತ್ತಿರುವ ಕಾರ್ಮಿಕ ವೆಚ್ಚಗಳು ಮತ್ತು ನಡೆಯುತ್ತಿರುವ ಯುಎಸ್ ಚೀನಾ ವ್ಯಾಪಾರ ಯುದ್ಧವು ಚೀನಾದ ಪೂರೈಕೆ ಸರಪಳಿಗಳನ್ನು ಬಗೆಹರಿಸಿಲ್ಲ ಮತ್ತು ಅಮೆರಿಕನ್ ಕಂಪನಿಗಳು ಸೇರಿದಂತೆ ಅನೇಕ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಚೀನಾದಿಂದ ಬೇರೆಡೆಗೆ ಸ್ಥಳಾಂತರಿಸಲು ಎದುರು ನೋಡುತ್ತಿವೆ.
ಬಾಂಗ್ಲಾದೇಶ, ವಿಯೆಟ್ನಾಂ ಮತ್ತು ಕೆಲವು ಆಗ್ನೇಯ ಏಷ್ಯಾದ ದೇಶಗಳು ಭಾರತಕ್ಕೆ ಅನುಕೂಲಕರ ತೆರಿಗೆ ದರವನ್ನು ನೀಡಿವೆ. ಆದರೆ ನಿರ್ಮಲಾ ಸೀತಾರಾಮನ್ ನೀಡಿದ ಕಾರ್ಪೊರೇಟ್ ತೆರಿಗೆ ವಿನಾಯಿತಿಯೊಂದಿಗೆ, ದರಗಳನ್ನು ಸೂಕ್ತ ದರಕ್ಕೆ ಇಳಿಸುವುದರೊಂದಿಗೆ, ಅನೇಕ ವಿದೇಶಿ ಕಂಪನಿಗಳು ಉತ್ಪಾದನಾ ಘಟಕಗಳನ್ನು ಭಾರತಕ್ಕೆ ಸ್ಥಳಾಂತರಿಸುವ ನಿರೀಕ್ಷೆಯಿದೆ, ಅಗ್ಗದ ಕಾರ್ಮಿಕರ ಲಭ್ಯತೆ ಮತ್ತು ನುರಿತ ಉದ್ಯೋಗಿಗಳ ಸಂಖ್ಯೆ ಇದಕ್ಕೆ ಪೂರಕವೂ ಆಗಲಿದೆ.
ಕಾರ್ಪೊರೇಟ್ ತೆರಿಗೆಯ ಕಡಿತವು ಎಫ್ಡಿಐ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್ಐಐ) ರೂಪದಲ್ಲಿ ದೊಡ್ಡ ಸಾಂಧರ್ಬಿಕ ಹೂಡಿಕೆಯನ್ನು ತರುತ್ತದೆ. “ಭಾರತಕ್ಕೆ ವಿದೇಶಿ ಹಣದ ಹರಿವನ್ನು ಸ್ಥಿರಗೊಳಿಸಲು ಭಾರತ ಬಯಸಿದೆ” ಎಂದು ಹಣಕಾಸು ಸಚಿವರು ಹೇಳಿದ್ದಾರೆ
ಕಾರ್ಪೊರೇಟ್ ತೆರಿಗೆಗಳಲ್ಲಿನ ಕಡಿತವು ಇಂಡಿಯಾ ಇಂಕ್ನ ಗಳಿಕೆಯನ್ನು ಶೇಕಡಾ 13.2 ರಷ್ಟು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಹಣವನ್ನು ಅವರಿಗೆ ಉಳಿಸಿಕೊಡಲಿದೆ. ಅದು ಆ ಹೊಸ ಹೂಡಿಕೆಗೆ ವಿನಿಯೋಗವಾಗಲಿದೆ. ಖಾಸಗಿ ಹೂಡಿಕೆ 2024 ರ ವೇಳೆಗೆ 5 ಟ್ರಿಲಿಯನ್ ಗುರಿಯನ್ನು ತಲುಪಬೇಕೆಂದು ಸರ್ಕಾರ ಬಯಸಿದೆ. “ಹೂಡಿಕೆಯು, ವಿಶೇಷವಾಗಿ ಖಾಸಗಿ ಹೂಡಿಕೆ, ಬೇಡಿಕೆಯನ್ನು ಹೆಚ್ಚಿಸುವ, ಸಾಮರ್ಥ್ಯವನ್ನು ಸೃಷ್ಟಿಸುವ, ಕಾರ್ಮಿಕ ಉತ್ಪಾದಕತೆಯನ್ನು ಹೆಚ್ಚಿಸುವ, ಹೊಸ ತಂತ್ರಜ್ಞಾನವನ್ನು ಪರಿಚಯಿಸುವ, ಸೃಜನಶೀಲ ಅಂತ್ಯವನ್ನು ಅನುಮತಿಸುವ“ ಪ್ರಮುಖ ಅಂಶವಾಗಿದೆ” ಎಂದು ಮುಂದಿನ ಐದು ವರ್ಷಗಳಲ್ಲಿ 5 ಟ್ರಿಲಿಯನ್ ಆರ್ಥಿಕತೆಗೆ ಮಾರ್ಗಸೂಚಿಯನ್ನು ನೀಡಿದ ಆರ್ಥಿಕ ಸಮೀಕ್ಷೆಯ ಮೊದಲ ಅಧ್ಯಾಯ ವಿವರಿಸುತ್ತದೆ.
ಚೀನಾ ಮತ್ತು ಭಾರತದ ನಡುವೆ ನಡೆಯುತ್ತಿರುವ ವ್ಯಾಪಾರ ಯುದ್ಧವು ‘ಮೇಕ್ ಇನ್ ಇಂಡಿಯಾ’ಕ್ಕೆ ಅಪಾರ ಸಹಾಯ ಮಾಡಲಿದೆ. ಉತ್ಪಾದನೆಯು ಭಾರತದ ಜಿಡಿಪಿಯಲ್ಲಿ ಕೇವಲ ಶೇ. 15 ರಷ್ಟನ್ನು ಮಾತ್ರ ಹೊಂದಿದೆ. ಭಾರಿ ಜನಸಂಖ್ಯೆ ಮತ್ತು ಕಡಿಮೆ ನುರಿತ ಉದ್ಯೋಗಿಗಳನ್ನು ಗಮನಿಸಿದರೆ, ಉದ್ಯೋಗ ಮಾರುಕಟ್ಟೆಯಲ್ಲಿ ಪ್ರವೇಶಿಸುವ ಜನರ ಸಂಖ್ಯೆಯು ದೃಢವಾದ ಉತ್ಪಾದನಾ ವಲಯವಿಲ್ಲದೆ ಮುನ್ನಡೆಯಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಉತ್ಪಾದನೆಯಲ್ಲಿನ ಹೂಡಿಕೆ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ ಮತ್ತು ದೇಶವು ಜನಸಂಖ್ಯಾ ಲಾಭಾಂಶದ ಲಾಭವನ್ನು ಪಡೆದುಕೊಳ್ಳಬಹುದು. ಹೂಡಿಕೆಯು ಉದ್ಯೋಗಗಳನ್ನು ಸ್ಥಳಾಂತರಿಸುತ್ತದೆ ಎಂದು ಆಗಾಗ್ಗೆ ಹೇಳಲಾಗುತ್ತದೆಯಾದರೂ, ನಿರ್ದಿಷ್ಟ ಚಟುವಟಿಕೆಯ ಒಳಗೆ ನೋಡಿದಾಗ ಮಾತ್ರ ಇದು ನಿಜವಾಗುತ್ತದೆ. ಇಡೀ ಮೌಲ್ಯ ಸರಪಳಿಯನ್ನು ಪರಿಶೀಲಿಸಿದಾಗ, ಬಂಡವಾಳ ಹೂಡಿಕೆಯು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ, ಏಕೆಂದರೆ ಬಂಡವಾಳ ಸರಕುಗಳ ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಪೂರೈಕೆ ಸರಪಳಿಗಳು ಉದ್ಯೋಗಗಳನ್ನು ಸೃಷ್ಟಿಸುತ್ತವೆ ” ಎಂದು ಸಮೀಕ್ಷೆ ಹೇಳುತ್ತದೆ.
ಕಾರ್ಪೊರೇಟ್ ತೆರಿಗೆ ವಿನಾಯಿತಿಯು ಪ್ರಸ್ತುತ ನಡೆಯುತ್ತಿರುವ ಚೀನಾ-ಯುಎಸ್ ವ್ಯಾಪಾರ ಯುದ್ಧದ ಲಾಭಾಂಶವನ್ನು ಪಡೆದುಕೊಳ್ಳುವ ಮೂಲಕ ನಮ್ಮ ದೇಶವನ್ನು ‘ವಿಶ್ವದ ಕಾರ್ಖಾನೆಯಾಗಲು’ ಸಹಾಯ ಮಾಡುತ್ತದೆ. ಇದು ದೇಶೀಯ ಕಂಪನಿಗಳಿಗೆ ಹೂಡಿಕೆಯನ್ನು ಹೆಚ್ಚಿಸಲು ಮತ್ತು ಹೊಸ ಘಟಕಗಳನ್ನು ಸ್ಥಾಪಿಸಲು ಉತ್ತೇಜನ ನೀಡುತ್ತದೆ.
ಕಾರ್ಪೊರೇಟ್ ತೆರಿಗೆ ದರಗಳನ್ನು ಕಡಿಮೆ ಮಾಡಲು ಆಯ್ಕೆ ಮಾಡಿದ ಸಮಯ ಬಹಳ ಕಾರ್ಯತಂತ್ರದದ್ದಾಗಿತ್ತು. ನಿರ್ಮಲಾ ಸೀತಾರಾಮನ್ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ತೆರಿಗೆ ಕಡಿತವನ್ನು ಜಾರಿಗೊಳಿಸಿದ್ದರೆ, ಪ್ರತಿಪಕ್ಷಗಳು ಮೋದಿ ಸರ್ಕಾರವನ್ನು ಕಾರ್ಪೊರೇಟ್ ಪರ ಎಂದು ದೂಷಿಸಲು ಮತ್ತು ಅದನ್ನು ‘ಅಂಬಾನಿ ಅದಾನಿ ಕಿ ಸರ್ಕಾರ್’ ಅಥವಾ ‘ಸೂಟ್ ಬೂಟ್ ಕಿ ಸರ್ಕಾರ್’ ಎಂದು ಕರೆಯುವ ಅವಕಾಶವನ್ನು ಪಡೆದುಕೊಳ್ಳುತ್ತಿದ್ದವು. ಆದರೆ, ಸರ್ಕಾರವು ಮೊದಲು ಕಾರ್ಪೊರೇಟ್ಗಳ ಮೇಲಿನ ತೆರಿಗೆ ದರವನ್ನು ಬಿಗಿಗೊಳಿಸಿತು ಮತ್ತು ಪ್ರತಿಪಕ್ಷಗಳು ಮತ್ತು ಮೋದಿ ವಿರೋಧಿ ಬ್ರಿಗೇಡ್ಗಳು ಎಂದಿನಂತೆ ಮೋದಿ ಸರ್ಕಾರವನ್ನು ಟೀಕೆ ಮಾಡಲಾರಂಭಿಸಿದವು. ಕಳೆದ ಎಂಟು ತ್ರೈಮಾಸಿಕಗಳ ಆರ್ಥಿಕ ಕುಸಿತ, ಇದು ಬಹುಶಃ ಜೂನ್ ತ್ರೈಮಾಸಿಕದಲ್ಲಿ ಬೆಳವಣಿಗೆಯ ದರವನ್ನು ಶೇ. 5 ಕ್ಕೆ ಇಳಿಸಿತು. ಆಗ ವ್ಯಕ್ತವಾದ ರಾಜಕೀಯ ಆಕ್ರೋಶವು ಈ ಅಸಾಧಾರಣ ಕಾರ್ಪೋರೇಟ್ ತೆರಿಗೆ ಕಡಿತವನ್ನು ಮಾಡಲು ಸರ್ಕಾರವನ್ನು ಪ್ರೇರೇಪಿಸಿತು. ಅದರಂತೆ ನಿರ್ಮಲಾ ಸೀತಾರಾಮನ್ ತೆರಿಗೆ ದರ ಕಡಿತ ಘೋಷಣೆ ಮಾಡಿದರು. ಇದರಿಂದ ವಿರೋಧಿಗಳಿಗೆ ವಿರೋಧಿಸಲು ಅವಕಾಶವೇ ಸಿಗದಂತಾಯಿತು. ಎಡಪಂಥೀಯರು ಮತ್ತು ಅಲ್ಟ್ರಾ-ಸಮಾಜವಾದಿಗಳಿಗೆ ಇದು ದೊಡ್ಡ ಮಟ್ಟದ ಆಘಾತವನ್ನೇ ನೀಡಿತು. ಒಟ್ಟಿನಲ್ಲಿ ಕಾಪೋರ್ಪೋರೇಟ್ ತೆರಿಗೆ ದರವನ್ನು ಸೂಕ್ತ ಸಂದರ್ಭದಲ್ಲೇ ಅತ್ಯಂತ ಜಾಣ್ಮೆಯಿಂದ ಮೋದಿ ಸರ್ಕಾರ ತೆಗೆದುಕೊಂಡಿರುವುದು ನಿಜಕ್ಕೂ ಶ್ಲಾಘನೀಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.