ನವದೆಹಲಿ: ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದ ವಿಚಾರಣೆಯನ್ನು ಅಂತ್ಯಗೊಳಿಸಲು 2019 ರ ಅಕ್ಟೋಬರ್ 18 ರ ಗಡುವನ್ನು ಸುಪ್ರೀಂ ಕೋರ್ಟ್ ವಿಧಿಸಿದೆ. 2019 ರ ನವೆಂಬರ್ನಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ನಿವೃತ್ತಿಯಾಗಲಿದ್ದಾರೆ, ಹೀಗಾಗಿ ಅದಕ್ಕೂ ಮೊದಲೇ ಅಯೋಧ್ಯೆ ಪ್ರಕರಣದ ಬಗ್ಗೆ ತೀರ್ಪನ್ನು ನೀಡಲು ಸುಪ್ರೀಂ ಕೋರ್ಟ್ ಉತ್ಸಾಹವನ್ನು ತೋರಿಸುತ್ತಿದೆ.
ಅಯೋಧ್ಯೆ ವಿವಾದದ ವಿಚಾರಣೆಯ ಸಂವಿಧಾನ ಪೀಠವು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದಲ್ಲಿದೆ, ಅವರು ಇದೇ ನವೆಂಬರ್ 17 ರಂದು ನಿವೃತ್ತರಾಗಲಿದ್ದಾರೆ. ಅವರ ನಿವೃತ್ತಿಯ ಮೊದಲು ಈ ಪ್ರಕರಣದ ತೀರ್ಪು ಹೊರಬೀಳದಿದ್ದರೆ, ಹೊಸದಾಗಿ ನೇಮಕಗೊಳ್ಳುವ ನ್ಯಾಯಮೂರ್ತಿಗಳು ಇಡೀ ಪ್ರಕರಣವನ್ನು ಹೊಸದಾಗಿ ಆಲಿಸಬೇಕಾಗುತ್ತದೆ.
ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ತಮ್ಮ ವಾದಗಳನ್ನು ಪೂರ್ಣಗೊಳಿಸಲು ಸುಪ್ರೀಂಕೋರ್ಟ್ ಪೀಠವು ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ದಾವೇದಾರರಿಗೆ ಸಮಯ ನಿಗದಿಪಡಿಸುವಂತೆ ಈ ಹಿಂದೆ ಕೇಳಿತ್ತು, ಇದರಿಂದಾಗಿ ನ್ಯಾಯಾಧೀಶರು ತೀರ್ಪನ್ನು ಬರೆಯಲು ಎಷ್ಟು ಸಮಯ ಬೇಕಾಗುತ್ತದೆ ಎಂಬ ಅಂದಾಜು ಹಾಕಿಕೊಳ್ಳಬಹುದಾಗಿದೆ. ಎಲ್ಲಾ ದಾವೇದಾರರು ಸಮಾಲೋಚಿಸಿ ಮತ್ತು ಸಮಯದ ಅವಧಿಯನ್ನು ನೀಡಿದ ಹಿನ್ನಲೆಯಲ್ಲಿ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಅಕ್ಟೋಬರ್ 18 ಅನ್ನು ಗಡುವು ಎಂದು ನಿರ್ಧರಿಸಿದೆ.
ನಿಗದಿತ ಗಡುವಿಗೆ ಮುಂಚಿತವಾಗಿ ಅಯೋಧ್ಯೆ ಪ್ರಕರಣದ ವಿಚಾರಣೆಗಳನ್ನು ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ನ್ಯಾಯಪೀಠ ಈ ಪ್ರಕರಣಕ್ಕೆ ಹೆಚ್ಚುವರಿ ಸಮಯವನ್ನು ನೀಡಲು ಸಿದ್ಧವಾಗಿದೆ ಎಂದು ಮುಖ್ಯನ್ಯಾಯಮೂರ್ತಿಗಳು ಹೇಳಿದ್ದಾರೆ. “ಅಕ್ಟೋಬರ್ 18 ರೊಳಗೆ ಅಂತಿಮ ತೀರ್ಮಾನವನ್ನು ಮಾಡಲು ನಾವು ಜಂಟಿ ಪ್ರಯತ್ನ ಮಾಡೋಣ. ಅಗತ್ಯವಿದ್ದರೆ, ನಾವು ನಮ್ಮ ಕೆಲಸದ ಸಮಯವನ್ನು ಒಂದು ಗಂಟೆಯವರೆಗೆ ವಿಸ್ತರಿಸಿಕೊಳ್ಳುತ್ತೇವೆ” ಎಂದು ರಂಜನ್ ಗೊಗೊಯ್ ಎಲ್ಲಾ ದಾವೇದಾರರು ಮತ್ತು ಅವರ ವಕೀಲರಿಗೆ ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.