ಸೂರತ್: ಗುಜರಾತ್ನ ಸೂರತ್ ನಗರದಲ್ಲಿರುವ ಬೇಕರಿಗಳು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ವಿಶಿಷ್ಟವಾದ ರೀತಿಯಲ್ಲಿ ಆಚರಿಸುವ ಯೋಜನೆಗಳನ್ನು ಹಾಕಿಕೊಂಡಿವೆ.
ಸೂರತ್ನ ಬ್ರೆಡ್ಲೈನ್ ಬೇಕರಿ 7,000 ಕೆಜಿ ತೂಕದ 700 ಅಡಿ ಉದ್ದದ ಕೇಕ್ ತಯಾರಿಸುವ ಮೂಲಕ ದಾಖಲೆ ನಿರ್ಮಿಸಲು ಸಜ್ಜಾಗಿದೆ.
ಮೋದಿಯವರ 69 ನೇ ಹುಟ್ಟುಹಬ್ಬವನ್ನು ಈ ಬೇಕರಿಯು ‘ಭ್ರಷ್ಟಾಚಾರ ಮುಕ್ತ’ ಥೀಮ್ನಲ್ಲಿ ಆಚರಣೆ ಮಾಡುತ್ತಿದೆ. ಹೀಗಾಗಿ ಸೂರತ್ ನಗರದ 700 ಪ್ರಾಮಾಣಿಕ ಜನರು ಈ 7 ಸಾವಿರ ಕೆಜಿ ತೂಕದ ಕೇಕ್ ಅನ್ನು ಕತ್ತರಿಸಲಿದ್ದಾರೆ.
ಮಾತ್ರವಲ್ಲದೇ, ಮೋದಿಯ ಹುಟ್ಟು ಹಬ್ಬವನ್ನು ದೊಡ್ಡ ಮಟ್ಟದಲ್ಲಿ ಗುಜರಾತಿನಲ್ಲಿ ಆಚರಿಸಲಾಗುತ್ತಿದೆ. ಎರಡು ದಿನಗಳ ಕಾಲ ಸಂಭ್ರಮಾಚರಣೆ ಜರುಗಲಿದ್ದು, ವಿವಿಧ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿವೆ.
ತಮ್ಮ 69ನೇ ಹುಟ್ಟು ಹಬ್ಬವನ್ನು ಆಚರಿಸಲು ಮೋದಿಯವರು ಗುಜರಾತಿಗೆ ತೆರಳಿದ್ದು, ತಮ್ಮ ತಾಯಿಯನ್ನು ಭೇಟಿಯಾಗಿ ಅವರು ಆಶೀರ್ವಾದವನ್ನು ಪಡೆದುಕೊಳ್ಳಲಿದ್ದಾರೆ. ನರ್ಮದಾ ನದಿಗೆ ಆರತಿಯನ್ನೂ ಮಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.