ನವದೆಹಲಿ: ಭಾರತೀಯರ ಜೀವ ಸೆಲೆಯಾಗಿರುವ ಪವಿತ್ರ ಗಂಗಾ ನದಿಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಭಾನುವಾರ ದೆಹಲಿಯಲ್ಲಿ ‘ಗ್ರೇಟ್ ಗಂಗಾ ರನ್’ ಎಂಬ ಮ್ಯಾರಥಾನ್ ಅನ್ನು ಆಯೋಜನೆಗೊಳಿಸಲಾಗಿತ್ತು. 20 ಸಾವಿರ ಜನರು ಇದರಲ್ಲಿ ಭಾಗಿಯಾಗಿ ಗಂಗಾ ನದಿ ಸಂರಕ್ಷಣೆಯ ಸಂದೇಶವನ್ನು ಸಾರಿದರು.
ಕೇಂದ್ರ ಜಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಕಿರಣ್ ರಿಜ್ಜು ಮತ್ತು ಜಲ ಶಕ್ತಿ ಸಚಿವಾಲಯದ ರಾಜ್ಯ ಖಾತೆ ಸಚಿವ ರತನ್ ಲಾಲ್ ಕಟಾರಿಯಾ ಅವರು ನವದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಿಂದ ಈ ಮ್ಯಾರಥಾನ್ಗೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಿಜ್ಜು ಅವರು, “ಈ ಮ್ಯಾರಥಾನ್ ಜಲಶಕ್ತಿ ಸಚಿವಾಲಯದ ಅತ್ಯುತ್ತಮ ಉಪಕ್ರಮವಾಗಿದೆ. ಇದು ಬಹಳ ವಿಸ್ತಾರವಾದ ಸಂದೇಶವನ್ನು ಹೊಂದಿದೆ. ಗಂಗಾ ನದಿ ದೇಶಕ್ಕೆ ಬಹಳ ಮುಖ್ಯವಾದ ನದಿ ಮತ್ತು ನಾವು ಅದರ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ. ಈ ಮ್ಯಾರಥಾನ್ನಲ್ಲಿ, ಪ್ರತಿ ವಯಸ್ಸಿನ ಜನರು ಭಾಗವಹಿಸಿದ್ದಾರೆ ಎಂಬುದು ವಿಶೇಷ. ನಮಾಮಿ ಗಂಗೆ ಮ್ಯಾರಥಾನ್ನಲ್ಲಿ ಹಲವಾರು ಜನರನ್ನು ತೊಡಗಿಸಿಕೊಂಡಿದ್ದಕ್ಕಾಗಿ ಸಂಘಟಕರನ್ನು ಅಭಿನಂದಿಸಲು ನಾನು ಬಯಸುತ್ತೇನೆ ”ಎಂದಿದ್ದಾರೆ.
ಗಜೇಂದ್ರ ಸಿಂಗ್ ಅವರು ಮಾತನಾಡಿ, “ಈ ಮ್ಯಾರಥಾನ್ಗಾಗಿ ನಾವು ಒಂದು ತಿಂಗಳಿನಿಂದ ಸಿದ್ಧತೆ ಮಾಡಿಕೊಂಡಿದ್ದೆವು. ಆನ್ಲೈನ್ ನೋಂದಣಿಗಳನ್ನು ನಡೆಸಿದ್ದೇವೆ. ಈ ಮ್ಯಾರಥಾನ್ಗೆ ಸುಮಾರು 20,000 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಇಷ್ಟು ಜನರು ಮ್ಯಾರಥಾನ್ನಲ್ಲಿ ಭಾಗವಹಿಸುವುದನ್ನು ನೋಡಲು ಸಂತೋಷವಾಗುತ್ತಿದೆ. ಅಕ್ಟೋಬರ್ 9 ರಿಂದ ನಾವು ಗಂಗಾ ದಂಡಯಾತ್ರೆಯನ್ನು ಆಯೋಜಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.