ನವದೆಹಲಿ: ಮುಂದಿನ ಎರಡು ವರ್ಷಗಳಲ್ಲಿ ದೇಶವನ್ನು 3ಡಿ ಡಿಜಿಟಲ್ ಮ್ಯಾಪಿಂಗ್ಗೆ ಒಳಪಡಿಸಲು ಸರ್ವೇ ಆಫ್ ಇಂಡಿಯಾ ಮುಂದಾಗಿದೆ. ಹೈ ರೆಸಲ್ಯೂಷನ್ ಡಿಜಿಟಲ್ ಮ್ಯಾಪ್ ಇದಾಗಿದ್ದು, ಮೂರು ಆಯಾಮಗಳನ್ನು ಒಳಗೊಳ್ಳಲಿದೆ ಮತ್ತು ಉಚಿತವಾಗಿ ಲಭ್ಯವಾಗಲಿದೆ.
“ಪ್ರಸ್ತುತ ಭಾರತದ ಹೈ ರೆಸಲ್ಯೂಷನ್ ಡಿಜಿಟಲ್ ಮ್ಯಾಪ್ ಅನ್ನು ನಾವು ಹೊಂದಿಲ್ಲ. ಈ ಮ್ಯಾಪ್ಗಳು ಹೆಚ್ಚು ನಿಖರವಾಗಿರುತ್ತವೆ ಇದರಿಂದಾಗಿ ಸರ್ಕಾರಗಳು ಉತ್ತಮ ರೀತಿಯಲ್ಲಿ ಯೋಜನೆ ಸಿದ್ಧಪಡಿಸಲು ಸಾಧ್ಯವಾಗುತ್ತದೆ. ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಈ ಮ್ಯಾಪ್ ಉಚಿತವಾಗಿ ಲಭ್ಯವಾಗಲಿದೆ. ಈ ಮ್ಯಾಪ್ ಅನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿದ ಯಾವುದೇ ವಾಣಿಜ್ಯ ಯೋಜನೆಗಳು ಸರ್ವೇ ಆಫ್ ಇಂಡಿಯಾಗೆ ಶೇಕಡಾವಾರು ಲಾಭವನ್ನು ತಂದುಕೊಡುತ್ತವೆ” ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ (ಡಿಎಸ್ಟಿ) ಕಾರ್ಯದರ್ಶಿ ಪ್ರೊ. ಅಶುತೋಷ್ ಶರ್ಮಾ ಹೇಳಿದ್ದಾರೆ.
ಈ ಹಿಂದಿನ ಮ್ಯಾಪ್ಗಳನ್ನು ಸ್ಯಾಟಲೈಟ್ ಸಹಾಯದಿಂದ ಸಿದ್ಧಪಡಿಸಲಾಗುತ್ತಿತ್ತು, ಆದರೆ ಈಗಿನ ಹೈ ರೆಸಲ್ಯೂಷನ್ ಮ್ಯಾಪ್ ಅನ್ನು 200-300 ಮೀಟರ್ ಎತ್ತರದಲ್ಲಿ ಹಾರಾಡುವ ಡ್ರೋನ್ಗಳ ಸಹಾಯದಿಂದ ರಚಿಸಲಾಗುತ್ತದೆ.
“ಹಿಂದಿನ ಮ್ಯಾಪ್ ಅನ್ನು ಭೂಮಿಯಿಂದ ನೂರಾರು ಕಿಲೋಮೀಟರ್ ಎತ್ತರದಲ್ಲಿನ ಸ್ಯಾಟಲೈಟ್ ಮೂಲಕ ತೆಗೆದ ಚಿತ್ರಗಳ ಸಹಾಯದಿಂದ ತಯಾರಿಸಲಾಗಿತ್ತು. ಇದಕ್ಕೆ ಹೋಲಿಸಿದರೆ, ಡ್ರೋನ್ ಚಿತ್ರಗಳು ಹೆಚ್ಚು ನಿಖರವಾಗಿರುತ್ತವೆ ಮತ್ತು ಇದರ ವಿವರಣಾ ಮಟ್ಟವು ಅಪಾರವಾಗಿರುತ್ತದೆ ”ಎಂದು ಡಿಎಸ್ಟಿ ನಿರ್ದೇಶಕ ಮತ್ತು ಯೋಜನಾ ಸಂಯೋಜಕ ಎಸ್.ಕೆ. ಸಿನ್ಹಾ ಹೇಳಿದ್ದಾರೆ.
ಈ ಯೋಜನೆಯು ಈಗಾಗಲೇ ಮಹಾರಾಷ್ಟ್ರ, ಕರ್ನಾಟಕ ಮತ್ತು ಹರಿಯಾಣದಲ್ಲಿ ಪ್ರಾರಂಭವಾಗಿದೆ. “ಮ್ಯಾಪ್ ರೆಸಲ್ಯೂಷನ್ 5 ಸೆಂ.ಮೀ. ಅಂದರೆ ಒಂದು ಪಿಕ್ಸೆಲ್ ನೆಲದ ಮೇಲೆ 5 ಸೆಂ.ಮೀ ಪ್ರತಿನಿಧಿಸುತ್ತದೆ. ನಿಖರತೆಗಾಗಿ, ನಮಗೆ ಕನಿಷ್ಠ ಎರಡು ಪಿಕ್ಸೆಲ್ಗಳ ಅಗತ್ಯವಿದೆ, ಅಂದರೆ ಮ್ಯಾಪ್ ನಿಖರತೆ 10 ಸೆಂ.ಮೀ. ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ಸ್ ಆಧುನೀಕರಣ ಕಾರ್ಯಕ್ರಮದಡಿ ಕಂದಾಯ ಇಲಾಖೆಗೆ ಇದು ಅತ್ಯವಶ್ಯಕತೆಯಾಗಿದೆ. ಮೂರು ರಾಜ್ಯಗಳಲ್ಲಿ ಈ ನಿಟ್ಟಿನಲ್ಲಿ ಕೈಗೊಳ್ಳಲಾದ ಪ್ರಾಯೋಗಿಕ ಯೋಜನೆಗಳು ಯಶಸ್ವಿಯಾಗಿದೆ ”ಎಂದು ಸರ್ವೇಯರ್ ಜನರಲ್ ಆಫ್ ಇಂಡಿಯಾ ಲೆಫ್ಟಿನೆಂಟ್ ಜನರಲ್ ಗಿರೀಶ್ ಕುಮಾರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.