ನವದೆಹಲಿ: ತನ್ನ ಮಗುವಿನ ಪೋಷಕಳಾಗುವುದಕ್ಕೆ ಮಹಿಳೆ ಮಗುವಿನ ತಂದೆಯ ಅನುಮತಿಯನ್ನು ಪಡೆಯಬೇಕಾದ ಅವಶ್ಯಕತೆಯಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಮಹತ್ವದ ತೀರ್ಪನ್ನು ನೀಡಿದೆ.
ತನ್ನ ಮಗುವಿನ ತಂದೆಗೆ ತಿಳಿಸದೆ ಅಥವಾ ತಂದೆಯ ಹೆಸರನ್ನು ಎಲ್ಲಿಯೂ ಸೂಚಿಸದೆ ಅಥವಾ ನಮೋದಿಸದೆಯೇ ಮಹಿಳೆ ಮಗುವಿನ ಪೋಷಕಳಾಗಬಹುದು. ಮಗುವಿನ ಗಾರ್ಡಿಯನ್ಶಿಪ್ ತೆಗೆದುಕೊಳ್ಳಲು ಆಕೆಗೆ ಆತನ ಅನುಮತಿ ಅಥವಾ ಆತನ ಗುರುತು ಬಹಿರಂಗಪಡಿಸಬೇಕಾದ ಅವಶ್ಯಕತೆಯಿಲ್ಲ ಎಂದು ನ್ಯಾ.ವಿಕ್ರಮ್ಜಿತ್ ಸೇನ್ ಅವರನ್ನೊಳಗೊಂಡ ಸುಪ್ರೀಂ ನ್ಯಾಯಪೀಠ ತೀರ್ಪು ನೀಡಿದೆ.
ಮಹಿಳೆಯೊಬ್ಬರು ಈ ಸಂಬಂಧ ಸಲ್ಲಿಸಿದ ಅರ್ಜಿಗೆ ವಿಚಾರಣಾಧೀನ ನ್ಯಾಯಾಲಯ ಮತ್ತು ಹೈಕೋರ್ಟ್ ಮಗುವಿನ ಗಾರ್ಡಿಯನ್ಶಿಪ್ ಪಡೆದುಕೊಳ್ಳಲು ಅದರ ತಂದೆಯ ಅನುಮತಿ ಅಗತ್ಯ ಎಂದು ಹೇಳಿತ್ತು. ಆಕೆ ಈ ಸಂಬಂಧ ಸುಪ್ರೀಂ ಮೆಟ್ಟಿಲೇರಿದ್ದಳು.
ಅವಿವಾಹಿತರಾಗಿದ್ದರೂ ಮಗು ಪಡೆದಿರುವ ಮತ್ತು ಮಗುವಿನ ಪೋಷಕತ್ವ ಬಯಸುವ ಮಹಿಳೆಯರಿಗೆ ಈ ತೀರ್ಪು ಸಹಕಾರಿಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.