ಕೊಯಂಬತ್ತೂರು: 9 ಮಂದಿ ದೃಷ್ಟಿ ವಿಕಲಚೇತನರು ಹಾಗೂ ತೃತೀಯ ಲಿಂಗಿ ಸಮುದಾಯದ ಕೆಲವು ಸದಸ್ಯರು ಸೆಣಬಿನಿಂದ ವಿಶ್ವದ ಅತೀದೊಡ್ಡ ಬ್ಯಾಗ್ ಅನ್ನು ಹೊಲಿದಿದ್ದಾರೆ. ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅರಿವು ಮೂಡಿಸುವ ಸಲುವಾಗಿ ಈ ಬ್ಯಾಗ್ ಅನ್ನು ಹೊಲಿಯಲಾಗಿದೆ.
ಈ ಬ್ಯಾಗ್ 66 ಅಡಿ ಎತ್ತರ ಮತ್ತು 33 ಅಡಿ ಅಗಲವಿದೆ. ಇದನ್ನು ಹೊಲಿಯಲು ಅವರು ತೆಗೆದುಕೊಂಡ ಸಮಯ 5 ಗಂಟೆ. ಶೀಘ್ರದಲ್ಲೇ ಈ ಬ್ಯಾಗ್ ಗಿನ್ನಿಸ್ ವಿಶ್ವ ದಾಖಲೆ ಪುಟವನ್ನು ಸೇರಲಿದೆ ಎನ್ನಲಾಗಿದೆ.
ಯುವ ಫೌಂಡೇಶನ್ ಈ ಬ್ಯಾಗ್ ಹೊಲಿಯುವ ಕಾರ್ಯಕ್ರಮವನ್ನು ಆಯೋಜನೆಗೊಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅದರ ಮುಖ್ಯಸ್ಥೆ ಶಶಿಕಲಾ ಅವರು, “ಯುವ ಫೌಂಡೇಶನ್ನಿನ 9 ಮಂದಿ ದೃಷ್ಟಿ ವಿಕಲಚೇತನರು ಹಾಗೂ ಕೆಲವು ತೃತೀಯ ಲಿಂಗಿ ಸಮುದಾಯದ ಕೆಲವು ಸದಸ್ಯರು ಹ್ಯಾಂಡಲ್ ಇಲ್ಲದೆಯೇ ಸೆಣಬಿನಿಂದ 66 ಅಡಿ ಎತ್ತರ ಮತ್ತು 33 ಅಡಿ ಅಗಲದ ಬ್ಯಾಗ್ ಅನ್ನು ತಯಾರಿಸಿದ್ದಾರೆ. ಹಾನಿಕಾರಕ ಪ್ಲಾಸ್ಟಿಕ್ ಬ್ಯಾಗ್ಗಳನ್ನು ಬಳಸದಂತೆ ಮತ್ತು ಪರಿಸರ ಸ್ನೇಹಿ ಮಾರ್ಗಗಳನ್ನು ಆಯ್ಕೆ ಮಾಡುವಂತೆ ಜನರನ್ನು ಪ್ರೇರೇಪಿಸಲು ಈ ಕಾರ್ಯ ಮಾಡಲಾಗಿದೆ” ಎಂದಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಏಕಬಳಕೆ ಪ್ಲಾಸ್ಟಿಕ್ ಬಳಸುವುದನ್ನು ನಿಷೇಧಿಸಬೇಕು ಇದಕ್ಕಾಗಿ ಎಲ್ಲರೂ ಸಹಕರಿಸಿ ಪಣ ತೊಡಬೇಕು ಎಂದಿದ್ದರು. ಈ ಹಿನ್ನೆಲೆಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತ ಜಾಗೃತಿ ಅಭಿಯಾನಕ್ಕೆ ಕೈಜೋಡಿಸಲು ಸೆಣಬಿನ ಬ್ಯಾಗ್ನ್ನು ಹೆಣೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.