ನವದೆಹಲಿ: ಸ್ವತಂತ್ರ ಭಾರತದ ಸಮೃದ್ಧ ಬರಹಗಾರರಲ್ಲಿ ಒಬ್ಬರಾದ ಅಮೃತಾ ಪ್ರೀತಂ ಅವರ 100ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಗೂಗಲ್ ಡೂಡಲ್ ಅವರಿಗೆ ಗೌರವಾರ್ಪಣೆ ಮಾಡಿದೆ. ಮಹಿಳೆಯರ ಹೋರಾಟಗಳ ಧ್ವನಿಯಾಗಿದ್ದ ಅಮೃತಾ ಪ್ರೀತಮ್ ಅವರ ಧೈರ್ಯವಂತ ಬರಹಗಾರ್ತಿ ಎಂದೇ ಹೆಸರಾಗಿದ್ದರು.
ಇತಿಹಾಸದ ಅಗ್ರಗಣ್ಯ ಮಹಿಳಾ ಪಂಜಾಬಿ ಬರಹಗಾರರಲ್ಲಿ ಒಬ್ಬರಾದ ಪ್ರೀತಂ 100 ವರ್ಷಗಳ ಹಿಂದೆ ಆಗಸ್ಟ್ 31 ರಂದು ಬ್ರಿಟಿಷ್ ಭಾರತದ ಗುಜ್ರಾನ್ವಾಲಾದಲ್ಲಿ ಜನಿಸಿದರು. ಅವರು ತಮ್ಮ 16 ನೇ ವಯಸ್ಸಿನಲ್ಲಿ ತಮ್ಮ ಮೊದಲ ಗದ್ಯ ಸಂಗ್ರಹವನ್ನು ಪ್ರಕಟಿಸಿದರು.
ಭಾರತ ಮತ್ತು ಪಾಕಿಸ್ಥಾನದ ವಿಭಜನೆಯ ನಂತರ ಪ್ರೀತಂ ಪಾಕಿಸ್ಥಾನದಲ್ಲಿ ವಾಸಿಸುತ್ತಿದ್ದರು, ಪಂಜಾಬಿ, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಬರೆಯುತ್ತಿದ್ದರು. ಉಭಯ ದೇಶಗಳಲ್ಲೂ ಅವರ ಬರವಣಿಗೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
1947 ರ ಭಾರತ ಮತ್ತು ಪಾಕಿಸ್ಥಾನದ ವಿಭಜನೆಯನ್ನು ಬಗ್ಗೆ ವಿಷಾದವನ್ನು ವ್ಯಕ್ತಪಡಿಸಿ ಅವರು ಬರೆದ ಕವಿತೆ “ಅಜ್ಜ್ ಆಖಾನ್ ವಾರಿಸ್ ಷಾ ನು” ಭಾರೀ ಪ್ರಶಂಸೆಯನ್ನು ಗಳಿಸಿತ್ತು.
“20 ನೇ ಶತಮಾನದ ಶ್ರೇಷ್ಠ ಪಂಜಾಬಿ ಕವಯತ್ರಿ ಎಂದು ಪರಿಗಣಿಸಲ್ಪಟ್ಟಿರುವ ಪ್ರೀತಂ, ಪಿಂಜಾರ್ ಸೇರಿದಂತೆ 28 ಕಾದಂಬರಿಗಳನ್ನು ಪ್ರಕಟಿಸಿದರು, ಇದು ವಿಭಜನೆಯ ಸಮಯದ ಕಥೆಯನ್ನು ಒಳಗೊಂಡಿದೆ. ಇದನ್ನು ಆಧರಿಸಿ ಚಲನಚಿತ್ರವೂ ನಿರ್ಮಾಣವಾಗಿತ್ತು. ಅವರ ಆತ್ಮಚರಿತ್ರೆ ಕಾಲ ಗುಲಾಬ್ ಅನ್ನು ಡೂಡಲ್ ಆರ್ಟ್ನಲ್ಲಿ ಉಲ್ಲೇಖಿಸಲಾಗಿದೆ.
ಆಲ್ ಇಂಡಿಯಾ ರೇಡಿಯೋದಲ್ಲಿ ಅವರು ಕೆಲಸ ಮಾಡಿದ್ದಾರೆ ಮತ್ತು ನಾಗಮಣಿ ಎಂಬ ಸಾಹಿತ್ಯ ಪತ್ರಿಕೆಯನ್ನು ಸಂಪಾದಿಸಿದ್ದಾರೆ. 1986 ರಲ್ಲಿ ಅವರು ಭಾರತೀಯ ಸಂಸತ್ತಿನ ರಾಜ್ಯಸಭೆಗೆ ನಾಮನಿರ್ದೇಶನಗೊಂಡರು.
1956ರಲ್ಲಿ ಸಾಹಿತ್ಯ ಅಕಾಡಮಿ ಅವಾರ್ಡ್ ಪಡೆದ ಮೊದಲ ಮಹಿಳೆ ಎನಿಸಿಕೊಂಡರು. ಪದ್ಮಶ್ರೀ ಮತ್ತು ಪದ್ಮ ವಿಭೂಷಣಗಳಿಗೆ ಅವರು ಪಾತ್ರರಾಗಿದ್ದಾರೆ. 1981 ರಲ್ಲಿ ಭಾರತೀಯ ಜ್ಞಾನಪಿಠ ಸಾಹಿತ್ಯ ಪ್ರಶಸ್ತಿಯನ್ನೂ ಅವರು ಪಡೆದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.