ಮಾಸ್ಕೋ: ಎರಡು ದಿನಗಳ ರಷ್ಯಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಎಸ್. ಜೈಶಂಕರ್ ಅವರು ಮಂಗಳವಾರ ಮಾಸ್ಕೋದಲ್ಲಿನ ಭಾರತೀಯ ರಾಯಭಾರಿ ಕಛೇರಿಯಲ್ಲಿ ಮಹಾತ್ಮ ಗಾಂಧೀ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಭಾರತೀಯ ರಾಯಭಾರ ಕಛೇರಿಯ ಆವರಣದಲ್ಲಿ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದ್ದು, ಗಾಂಧೀಜಿಯವರು ಕುಳಿತ ಭಂಗಿಯಲ್ಲಿ ಇರುವುದನ್ನು ಈ ಪ್ರತಿಮೆಯಲ್ಲಿ ಕಾಣಬಹುದು.
ಮಾಸ್ಕೋ ಪ್ರವಾಸದ ವೇಳೆ ಅವರು “ಇಂಡೋ-ಪೆಸಿಫಿಕ್ ಬಗ್ಗೆ ಭಾರತದ ದೃಷ್ಟಿಕೋನ” ಎಂಬ ವಿಷಯದ ಕುರಿತು ವಾಲ್ಡೈ ಡಿಸ್ಕಷನ್ ಕ್ಲಬ್ ಅನ್ನು ಉದ್ದೇಶಿಸಿ ಮಾತನಾಡಿದರು.
“ನಾನು ಮಾಸ್ಕೋಗೆ ನೀಡಿದ ಮೊದಲ ಭೇಟಿಗೆ 40 ವರ್ಷಗಳು ಸಂದಿವೆ. ಜಗತ್ತು ಈಗ ಬದಲಾಗಿದೆ ಆದರೆ ಭಾರತ-ರಷ್ಯಾ ಸಂಬಂಧಗಳು ಸ್ಥಿರವಾಗಿಯೇ ಉಳಿದುಕೊಂಡಿದೆ” ಎಂದು ಜೈಶಂಕರ್ ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.
“ಬದಲಾಗುತ್ತಿರುವ ಜಗತ್ತು ಹೊಸ ಪರಿಕಲ್ಪನೆಗಳು ಮತ್ತು ವಿಧಾನಗಳನ್ನು ನೀಡುತ್ತಿದೆ. ಅವುಗಳಲ್ಲಿ ಒಂದಾದ ‘ಇಂಡೋ-ಪೆಸಿಫಿಕ್’ ಅನ್ನು ವಾಲ್ಡೈ ಚರ್ಚಾ ಕ್ಲಬ್ನಲ್ಲಿ ಚರ್ಚೆ ಮಾಡಿದ್ದೇವೆ” ಎಂದಿದ್ದಾರೆ.
ಸೆಪ್ಟೆಂಬರ್ 4 ರಿಂದ 6 ರವರೆಗೆ ವ್ಲಾಡಿವೋಸ್ಟಾಕ್ನಲ್ಲಿ ನಡೆಯುವ ಈಸ್ಟರ್ನ್ ಎಕನಾಮಿಕ್ ಫೋರಂ (ಇಇಎಫ್) ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸಿದ್ಧತೆಯನ್ನು ನಡೆಸಿಕೊಳ್ಳಲು ಜೈಶಂಕರ್ ಮಾಸ್ಕೋಗೆ ಭೇಟಿಯನ್ನು ನೀಡಿದ್ದಾರೆ.
ಮೇ ತಿಂಗಳಲ್ಲಿ ವಿದೇಶಾಂಗ ಸಚಿವಾರಗಿ ಅಧಿಕಾರ ವಹಿಸಿಕೊಂಡ ನಂತರ ಎಸ್ ಜೈಶಂಕರ್ ರಷ್ಯಾದ ರಾಜಧಾನಿಗೆ ನೀಡಿದ ಮೊದಲ ಭೇಟಿ ಇದಾಗಿದ್ದು, ಈ ಸಂದರ್ಭದಲ್ಲಿ ಅವರು ಭಾರತ-ರಷ್ಯಾ ಅಂತರ್-ಸರ್ಕಾರಿ ಆಯೋಗ – ತಾಂತ್ರಿಕ ಮತ್ತು ಆರ್ಥಿಕ ಸಹಕಾರದ ಸಹ-ಅಧ್ಯಕ್ಷರಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.