ನವದೆಹಲಿ: ಫ್ರಾನ್ಸ್ನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ನವ ಭಾರತವು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸಾರ್ವಜನಿಕ ಹಣದ ಲೂಟಿ ಮತ್ತು ಭಯೋತ್ಪಾದನೆ ವಿರುದ್ಧ ಬಲಿಷ್ಠಗೊಳ್ಳುತ್ತಿದೆ ಎಂದರು.
“ಭಾರತವು ದಾಪುಗಾಲಿಡುತ್ತಿರುವುದು ಮೋದಿಯ ಕಾರಣದಿಂದಾಗಿ ಅಲ್ಲ. ಭಾರತದ ಜನರು ತಮ್ಮ ಮತಗಳ ರೂಪದಲ್ಲಿ ನೀಡಿರುವ ಆದೇಶದ ಕಾರಣದಿಂದಾಗಿ” ಎಂದಿದ್ದಾರೆ.
“ನಮ್ಮ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಕೇವಲ 75 ದಿನಗಳು ಆಗಿವೆ. ಈ ಅವಧಿಯಲ್ಲಿ ನಾವು ತೆಗೆದುಕೊಂಡ ದಿಟ್ಟ ನಿರ್ಧಾರಗಳನ್ನು ನೀವು ನೋಡಿದ್ದೀರಿ, ಸಂಸತ್ತಿನಲ್ಲಿ ದಾಖಲೆಯ ಕೆಲಸಗಳು ನಡೆಯುತ್ತಿವೆ. 100 ದಿನಗಳ ಮೈಲಿಗಲ್ಲು ಇನ್ನಷ್ಟೇ ಬರಬೇಕು. ಈ ಮೊದಲು ಸರ್ಕಾರದ ಮೊದಲ 50-75 ದಿನಗಳನ್ನು ಸಾಮಾನ್ಯವಾಗಿ ವಿಷಯಗಳನ್ನು ಯೋಜಿಸಲು ಮತ್ತು ಶುಭಾಶಯಗಳನ್ನು ಪಡೆಯಲು ಮತ್ತು ಅಭಿನಂದನೆಗಳನ್ನು ಸ್ವೀಕರಿಸಲು ವಿನಿಯೋಗಿಸಲಾಗುತ್ತಿತ್ತು. ಆದರೆ ನೀವೆಲ್ಲರೂ ಇಂದಿನ ಸರ್ಕಾರದ ಆಶಯವನ್ನು ನೋಡಿದ್ದೀರಾ, ಆ ಆಶಯವೇ’ ಇಂಡಿಯಾ ಮೀನ್ಸ್ ಬ್ಯುಸಿನೆನ್'”ಎಂದರು.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸುವ ಸರ್ಕಾರದ ನಿರ್ಧಾರವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, “ಭಾರತದಲ್ಲಿ ಯಾವುದಕ್ಕೂ ತಾತ್ಕಾಲಿಕ ಸ್ಥಾನವಿಲ್ಲ, ‘ತಾತ್ಕಾಲಿಕ’ವನ್ನು ತೆಗೆದುಹಾಕಲು 70 ವರ್ಷಗಳೇ ಬೇಕಾಯಿತು. ನಾವು ಮುಂದೆ ಬಂದಿದ್ದೇವೆ ಮತ್ತು ನಮ್ಮ ಗುರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುತ್ತೇವೆ” ಎಂದಿದ್ದಾರೆ.
ಮೋದಿ ಸೋಮವಾರದವರೆಗೆ ಮೂರು ರಾಷ್ಟ್ರಗಳ ಐದು ದಿನಗಳ ಪ್ರವಾಸವನ್ನು ಹಮ್ಮಿಕೊಂಡಿದ್ದು, ಇಂದು ಫ್ರಾನ್ಸಿನಿಂದ ಬಹ್ರೇನ್ಗೆ ತೆರಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.