ಭೋಪಾಲ್: ಸಂಸ್ಕೃತ ಭಾಷೆಯ ಅಭಿವೃದ್ಧಿಯು ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಎಂದು ಸಂಸ್ಕೃತ ಭಾರತಿಯ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ದಿನೇಶ್ ಕಾಮತ್ ಹೇಳಿದ್ದಾರೆ.
ಸಂಸ್ಕೃತ ಭಾರತಿ ಆಯೋಜಿಸಿದ್ದ ಸಂಸ್ಕೃತ ಸಪ್ತಾಹ ಮಹೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, “ಸಂಸ್ಕೃತವು ನಮ್ಮ ಪ್ರಾಚೀನ ಸಾಂಪ್ರದಾಯಿಕ ಜ್ಞಾನ ಮತ್ತು ವಿಜ್ಞಾನದ ರಕ್ಷಕ. ಅದರ ಅಭಿವೃದ್ಧಿಯು ನಮ್ಮ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ” ಎಂದಿದ್ದಾರೆ.
ಸಂಸ್ಕೃತ ಭಾರತಿಯು ತನ್ನ ಒಂದು ವಾರಗಳ ಕಾರ್ಯಕ್ರಮದಲ್ಲಿ, ಸಂಸ್ಕೃತ ಮಾತನಾಡುವ ತರಗತಿ, ಶಿಕ್ಷಕರ ತರಬೇತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಇಂತಹ ಕಾರ್ಯಕ್ರಮಗಳನ್ನು ಭಾರತದಲ್ಲಿ ಮತ್ತು ವಿಶ್ವದ ಇತರ 18 ದೇಶಗಳಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಮಾತನಾಡಿ, “ಸಂಸ್ಕೃತದ ಸಂರಕ್ಷಣೆ ಮತ್ತು ಪ್ರಸರಣಕ್ಕೆ ಭಾರತ ಸರ್ಕಾರ ಬದ್ಧವಾಗಿದೆ, ಸಂಸ್ಕೃತವನ್ನು ಸಾಮಾನ್ಯವಾಗಿ ‘ದೇವ ವಾಣಿ’ (ದೇವರ ಭಾಷೆ) ಎಂದು ಕರೆಯಲಾಗುತ್ತದೆ. ಸಂಸ್ಕೃತವು ವೈಜ್ಞಾನಿಕ ಭಾಷೆಯೂ ಆಗಿದೆ ಎಂದು ಹೇಳಿದ ಅವರು, ಈ ಭಾಷೆಯನ್ನು ಜನರ ಬಳಿಗೆ ಕೊಂಡೊಯ್ಯಲು ಸಮಾಜದ ಎಲ್ಲಾ ವರ್ಗದವರು ಮುಂದಾಗಬೇಕು” ಎಂದು ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಂತ್ ಚಂದ್ರಮಾ ದಾಸ್ ತ್ಯಾಗಿ ಮಾತನಾಡಿ, ಸಂಸ್ಕೃತವು ಭಾರತೀಯ ಸಂಸ್ಕೃತಿಯ ಪ್ರಗತಿ ಮತ್ತು ಸಂರಕ್ಷಣೆಯ ಮಾಧ್ಯಮವಾಗಿದೆ. ಸಂಸ್ಕೃತದಲ್ಲಿ ಬರೆದ ವಿವಿಧ ಪುಸ್ತಕಗಳು ನಮ್ಮ ಜೀವನದ ಪ್ರತಿಯೊಂದು ಅಂಶಗಳ ಜ್ಞಾನ ಮತ್ತು ಬೆಳವಣಿಗೆಯನ್ನು ಒಳಗೊಂಡಿವೆ. ಈ ಭಾಷೆಯ ಉಪಯುಕ್ತತೆಯನ್ನು ಸಮಾಜವು ಅರ್ಥಮಾಡಿಕೊಳ್ಳುವಂತೆ ಮತ್ತು ಸಂಸ್ಕೃತವನ್ನು ಕಲಿಯುವಂತೆ ಮಾಡಲು ಸಂಸ್ಕೃತದಲ್ಲಿ ಸಂಶೋಧನೆ ನಡೆಸುವ ಅವಶ್ಯಕತೆಯಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.