ನವದೆಹಲಿ: ರಷ್ಯಾದ ರಾಜಧಾನಿ ಮಾಸ್ಕೋ ಬಳಿಯ ಜುಕೊವ್ಸ್ಕಿಯಲ್ಲಿ ನಡೆಯುವ MAKS 2019 (ಅಂತಾರಾಷ್ಟ್ರೀಯ ವಾಯುಯಾನ ಮತ್ತು ಬಾಹ್ಯಾಕಾಶ ಪ್ರದರ್ಶನ) ವಾಯು ಪ್ರದರ್ಶನದಲ್ಲಿ ಬ್ರಹ್ಮೋಸ್ ಏರೋಸ್ಪೇಸ್ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಭಾಗವಹಿಸಲಿದೆ. MAKS 2019 ಜುಕೊವ್ಸ್ಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 27 ರಿಂದ ಸೆಪ್ಟೆಂಬರ್ 1, 2019 ರವರೆಗೆ MAKS 2019 ವಾಯು ಪ್ರದರ್ಶನವು ನಡೆಯಲಿದ್ದು, ವಿಶ್ವದಾದ್ಯಂತದ ಹಲವಾರು ರಕ್ಷಣಾ ದಿಗ್ಗಜರು ಇದರಲ್ಲಿ ಭಾಗವಹಿಸಲಿದ್ದಾರೆ.
ಈ ದ್ವೈವಾರ್ಷಿಕ ಕಾರ್ಯಕ್ರಮದ ಸಂದರ್ಭದಲ್ಲಿ ಸುಖೋಯ್ ಸು-57 5ನೇ ಜನರೇಷನ್ ಸ್ಟೆಲ್ತ್ ಫೈಟರ್ ಎಕ್ಸ್ಪೋರ್ಟ್ ಆವೃತ್ತಿಯನ್ನು ಅನಾವರಣಗೊಳಿಸುವುದಾಗಿ ರಷ್ಯಾ ಘೋಷಿಸಿದೆ. ಈ ಆವೃತ್ತಿಗೆ ಸು -57 ಇ ಎಂದು ನಾಮಕರಣ ಮಾಡಲಾಗಿದೆ ಮತ್ತು ಭಾರತ ಸೇರಿದಂತೆ ಹಲವಾರು ದೇಶಗಳು ಈ ಫೈಟರ್ನಲ್ಲಿ ಆಸಕ್ತಿ ತೋರಿಸಲಿದೆ ಎಂದು ರಷ್ಯಾ ನಿರೀಕ್ಷಿಸಿದೆ.
ಸು-57 ಅನ್ನು ಅಭಿವೃದ್ಧಿಪಡಿಸಲು ಭಾರತವು ರಷ್ಯಾದೊಂದಿಗೆ ಕೈಜೋಡಿಸಿತ್ತು ಆದರೆ ಯುದ್ಧ ವಿಮಾನದ ರಹಸ್ಯ ಲಕ್ಷಣಗಳು, ಸಾಫ್ಟ್ವೇರ್ ಮೂಲ ಸಂಕೇತಗಳು ಮತ್ತು ಯುದ್ಧ-ಸಾಮರ್ಥ್ಯಗಳ ಕುರಿತು ಪ್ರಶ್ನೆಗಳಿಗೆ ಉತ್ತರ ಸಿಗದ ಹಿನ್ನಲೆಯಲ್ಲಿ 2018ರಲ್ಲಿ ಇದರಿಂದ ಹಿಂದೆ ಸರಿಯಿತು. ಆದರೆ ಈ ಕಾರ್ಯಕ್ರಮಕ್ಕೆ ಮತ್ತೆ ಸೇರಲು ರಷ್ಯಾ ಭಾರತಕ್ಕೆ ಅವಕಾಶ ನೀಡಿದೆ ಮತ್ತು ರಷ್ಯಾದ ವಾಯುಸೇನೆಯೊಂದಿಗೆ ಸಕ್ರಿಯ ಸೇವೆಗೆ ಸೇರಿದ ನಂತರವೇ ಸು -57 ಅನ್ನು ಪರಿಶೀಲಿಸಲಾಗುವುದು ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಬಿರೇಂದರ್ ಸಿಂಗ್ ಧನೋವಾ ಹೇಳಿದ್ದಾರೆ.
“ವಿದೇಶಿ ಪಾಲುದಾರರೊಂದಿಗಿನ ಜಂಟಿ ಯೋಜನೆಗಳಿಗೆ ರಷ್ಯಾದ ಹೈಟೆಕ್ ಮತ್ತು ರಷ್ಯಾದ ಮಾರುಕಟ್ಟೆಯ ಸಾಮರ್ಥ್ಯವನ್ನು ಪ್ರದರ್ಶಿಸುವುದು MAKS ನ ಮುಖ್ಯ ಉದ್ದೇಶವಾಗಿದೆ. MAKS ರಷ್ಯಾದ ಏರೋಸ್ಪೇಸ್ ಉದ್ಯಮದ ಆದ್ಯತೆಗಳು ಮತ್ತು ಸಾಧನೆಗಳ ಬಗ್ಗೆ ಸಮಗ್ರ ಒಳನೋಟವನ್ನು ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.