ಇವತ್ತು ಮನೆಯು ಟ್ರೆಡಿಷನಲ್ ಲುಕ್ನಿಂದ ಮಾಡ್ರ್ನ್ ಲುಕ್ಕನ್ನು ಪಡೆಯುತ್ತಿದೆ. ಹಿರಿಯರು ಉಪಯೋಗಿಸುತ್ತಿದ್ದ ಹಿತ್ತಾಳೆ, ತಾಮ್ರದ ಪಾತ್ರೆಗಳು ಹೋಗಿ ಅದ್ಯಾವುದೊ ಕಾಲವಾಗಿದೆ. ಅವುಗಳ ಸ್ಥಾನವನ್ನು ಸ್ಟೀಲ್, ಪಿಂಗಾಣಿ ಮತ್ತು ಪ್ಲಾಸ್ಟಿಕ್ ಪಾತ್ರೆಗಳು ಪಡೆದುಕೊಂಡಿದೆ. ಈಗ ಅವುಗಳೆಲ್ಲವನ್ನು ಮೀರಿ ನಮ್ಮ ಅಡುಗೆ ಮನೆಗಳಿಗೆ ಬೋನ್ ಚೈನಾ ಲಗ್ಗೆಯಿಡುತ್ತಿದೆ. ಬೋನ್ ಚೈನಾದ ಪಾತ್ರೆಗಳು ಸುಂದರ ಮತ್ತು ಒಳ್ಳೆಯ ವಿನ್ಯಾಸಗಳಲ್ಲಿವೆ. ಎಷ್ಟು ಒಳ್ಳೆಯ ಗುಣಮಟ್ಟದ ಪಾತ್ರೆಗಳಿವೆಯೋ ಅಷ್ಟೇ ಹೆಚ್ಚು ಹಣ ಆ ಪಾತ್ರೆಗೆ ತೆರಬೇಕಾದದ್ದು ಸುಳ್ಳಲ್ಲ.
ಬೋನ್ ಚೈನಾ ಕಂಡು ಹಿಡಿದದ್ದು ಪ್ರಥಮ ಬಾರಿಗೆ ಇಂಗ್ಲೆಂಡಿನಲ್ಲಿ . ಆ ಹೊತ್ತಿಗಾಗಲೇ ಚೀನಾದ ಮಣ್ಣಿನಿಂದ ಪಾತ್ರೆಗಳನ್ನು ತಯಾರಿಸಲಾಗುತ್ತಿತ್ತು. ಅಲ್ಲದೇ ಚೀನಾದ ಮಣ್ಣಿನಿಂದ ಮಾಡಿದ ಪಾತ್ರೆಗೆ ಅಪಾರ ಬೇಡಿಕೆ ಇದ್ದುದರಿಂದ ದುಬಾರಿ ಕ್ರಯ ತೆರಬೇಕಾಗಿತ್ತು. ಆದುದರಿಂದ ಧಾಮಸ್ಸ್ ಫೆರಿ ಎಂಬಾತ 1749 ರಲ್ಲಿ ಪಶುಗಳ ಎಲುಬಿನಿಂದ ಕೂಡಿದ ಪಿಂಗಾಣಿ ಪಾತ್ರಗಳನ್ನು ಮಾಡಲು ಆರಂಭಿಸಿದ. ಅದುವೇ ಬೋನ್ ಚೈನಾ. ತದನಂತರ ಈ ಬೋನ್ ಚೈನಾ ಪಾತ್ರೆಗಳು ತನ್ನ ಗುಣಮಟ್ಟದಿಂದ ಜನರ ಮನಗೆದ್ದಿತು. ಈ ಮೂಲಕ ಅದು ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆಯಿತು.
ಬೋನ್ ಚೈನಾ ತಯಾರಾಗುವ ಬಗ್ಗೆ?: ಕಸಾಯಿಖಾನೆಗಳಲ್ಲಿ ಸತ್ತ ಪ್ರಾಣಿಗಳ ಮೂಳೆಯನ್ನು ಸಂಗ್ರಹಿಸಿ ಅವುಗಳನ್ನು ಪರೀಕ್ಷಿಸಿ ಮೂಳೆಗಳನ್ನು ಹುಡಿಯನ್ನಾಗಿ ಮಾಡಿ ಅದನ್ನು ಪಾಟಲ, ಸ್ಫಟಿಕ, ಕಾಯೋಲಿನ್ ನೀರಿನೊಂದಿಗೆ ಮಿಶ್ರಣಮಾಡಿ ಗೋಲಗಳಾಗಿ ಮಾಡಲಾಗುತ್ತದೆ. ಅದರಲ್ಲಿ ಅತ್ಯಧಿಕವಾಗಿರುವಂತದು ಮೂಳೆಹುಡಿ. ಸುಮಾರು 25% ರಿಂದ 50% ರಷ್ಟು ಮೂಳೆ ಹುಡಿಯನ್ನು ಮಿಶ್ರಣಕ್ಕೆ ಬಳಸಲಾಗುತ್ತದೆ. ತದನಂತರ ಈ ಮಿಶ್ರಣವನ್ನು 1000 ರಿಂದ 1500 ಸೆಂಟಿಗ್ರೇಡ್ ತಾಪಮಾನದಷ್ಟು ಶಾಖವನ್ನು ನೀಡಿ ತಟ್ಟೆಯಾಗಿ, ಕಾಫಿ ಕಪ್ ಆಗಿ ಮತ್ತು ಇನ್ನಿತರ ವಸ್ತುವಾಗಿ ಆಕಾರ ನೀಡಲಾಗುತ್ತದೆ.
ಬೋನ್ ಚೈನಾವನ್ನು ಗುರುತಿಸುವುದು : ಬೋನ್ ಚೈನಾ ಬಿಳಿಯ ಬಣ್ಣವನ್ನು ಹೊಂದಿದ್ದು ಅರೆಪಾರದರ್ಶಕವಾಗಿದೆ. ಬೋನ್ ಚೈನಾಪ್ಲೇಟ್ ಅಥವಾ ವಸ್ತುಗಳನ್ನು ಬೆಳಕಿಗೆ ಹಿಡಿದರೆ ಅದರ ಹಿಂದೆ ಇದ್ದ ವಸ್ತು ಅರೆಪಾರದರ್ಶಕತೆಯಿಂದ ಕಾಣಬಹುದಾಗಿದೆ. ಮತೊಂದು ಮಹತ್ವದ ವಿಷಯವೆಂದರೆ ಬೋನ್ ಚೈನಾ ವಸ್ತುಗಳ ಮೇಲೆ ಬೋನ್ ಚೈನಾ ಎಂದು ನಮುದಿಸಿರುದಿಲ್ಲ.
ಕಳದೇ ಹಲವಾರು ವರ್ಷಗಳಿಂಧ ಬೋನ್ ಚೈನಾ ವನ್ನು ಭಾರತದಲ್ಲೂ ಇದೇ ರೀತಿಯಲ್ಲಿ ತಯಾರಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.