ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ಕೇಂದ್ರ ಸರ್ಕಾರ ವಾಪಾಸ್ ಪಡೆದುಕೊಂಡು ಬಳಿಕ ಪಾಕಿಸ್ಥಾನವು ಭಾರತದೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದೆ. ಇಸ್ಲಾಮಾಬಾದಿನಲ್ಲಿನ ಭಾರತೀಯ ಹೈಕಮಿನರ್ ಮತ್ತು ದೂತವಾಸ ಕಛೇರಿಯ ಸಿಬ್ಬಂದಿಗಳಿಗೂ ವಾಪಾಸ್ ಹೋಗುವಂತೆ ಅದು ಸೂಚನೆಯನ್ನು ನೀಡಿತ್ತು. ಅದರಂತೆ ಹೈಕಮಿನಷರ್ ಮತ್ತು ಸಿಬ್ಬಂದಿಗಳು ಭಾರತಕ್ಕೆ ಪಾವಾಸ್ ಆಗಿದ್ದಾರೆ.
ಆದರೆ ವಾಪಾಸ್ ಆಗುವುದಕ್ಕೂ ಮುನ್ನ ದೂತವಾಸ ಕಛೇರಿಯಲ್ಲಿ ಗಿಡಗಳನ್ನು ನೆಟ್ಟು ಬಂದಿದ್ದಾರೆ. ಉತ್ತಮ ಭವಿಷ್ಯಕ್ಕಾಗಿ ಗಿಡ ನೆಟ್ಟಿರುವುದಾಗಿ ಹೈಕಮಿಷನರ್ ಅಜಯ್ ಬಿಸಾರಿಯಾ ಅವರು ಹೇಳಿದ್ದಾರೆ. ಅವರು ಈ ಬಗ್ಗೆ ಮಾಡಿರುವ ಟ್ವಿಟ್ ಭಾರೀ ವೈರಲ್ ಆಗಿದೆ.
“ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನೋತ್ಸವದ ಪ್ರಯುಕ್ತ ಪಾಕಿಸ್ಥಾನದಲ್ಲಿರುವ ಭಾರತೀಯ ದೂತವಾಸ ಕಛೇರಿ ಮತ್ತು ವಸತಿ ಸಂಕೀರ್ಣಗಳಲ್ಲಿ 150 ಗಿಡಗಳನ್ನು ನೆಡಲು ಯೋಜನೆ ಹಾಕಿಕೊಂಡಿದ್ದೆವು. 150ನೇ ಗಿಡವನ್ನು ಹೈಕಮಿಷನರ್ ಅಜಯ್ ಬಿಸಾರಿಯಾ ಅವರು ನೆಟ್ಟರು” ಎಂದು ಪಾಕಿಸ್ಥಾನದಲ್ಲಿನ ಭಾರತೀಯ ದೂತವಾಸ ಕಛೇರಿ ಟ್ವಿಟ್ ಮಾಡಿದೆ.
ಈ ಟ್ವಿಟ್ ಅನ್ನು ಅಜಯ್ ಬಿಸಾರಿಯಾ ಅವರು, “ಬಹು ಮಟ್ಟದಲ್ಲಿ ಅರ್ಥಪೂರ್ಣ ಕಾರ್ಯ. ಪಾಕಿಸ್ಥಾನವನ್ನು ಬಿಡುವ ಮೊದಲು ಉತ್ತಮ ಭವಿಷ್ಯಕ್ಕಾಗಿ ಗಿಡನೆಟ್ಟೆವು” ಎಂಬ ಒಕ್ಕಣೆಯೊಂದಿಗೆ ಮರು ರಿಟ್ವಿಟ್ ಮಾಡಿದ್ದಾರೆ. ಈ ಟ್ವಿಟ್ ಅನ್ನು ಹಲವಾರು ಮಂದಿ ಮರುಟ್ವಿಟ್ ಮಾಡಿದ್ದಾರೆ ಮತ್ತು ಲೈಕ್ ಮಾಡಿದ್ದಾರೆ.
ಬಿಸಾರಿಯಾ ಅವರು ಪಾಕಿಸ್ಥಾನದಲ್ಲಿ ಭಾರತೀಯ ಹೈಕಮಿಷನರ್ ಆಗಿ 1 ವರ್ಷ 80 ತಿಂಗಳುಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಮೊನ್ನೆ ಶನಿವಾರ ಪಾಕಿಸ್ಥಾನದ ಆದೇಶದ ಮೇರೆಗೆ ಅವರು ಭಾರತಕ್ಕೆ ವಾಪಾಸ್ ಆಗಿದ್ದಾರೆ.
Meaningful at multiple levels. Before leaving Pakistan, planted a sapling for a better future. https://t.co/YS0P2Ropcg
— Ajay Bisaria (@Ajaybis) August 11, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.