ಪಿಂಗಳಿ ವೆಂಕಯ್ಯ ಓರ್ವ ಸ್ವಾತಂತ್ರ್ಯ ಹೋರಾಟಗಾರ. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ದಿವಿ ತಾಲೂಕಿನಲ್ಲಿ 1876ರ ಆಗಸ್ಟ್ 2ರಂದು ಜನಿಸಿದ ಇವರು, ಭಾರತದ ರಾಷ್ಟ್ರಧ್ವಜದ ವಿನ್ಯಾಸಕಾರರೂ ಹೌದು. ಹನುಮಂತರಾಯುಡಡು-ವೆಂಕಟರತ್ನಮ್ಮ ಇವರ ತಂದೆ, ತಾಯಿ. ಇಂದು ಅವರ 143ನೇ ಜನ್ಮ ವರ್ಷಚಾರಣೆ.
ಭಾರತದ ಸ್ವಾತಂತ್ರ್ಯ ಪೂರ್ವ ಚಳುವಳಿಗಳಲ್ಲಿ ವಿವಿಧ ರೀತಿಯ ಧ್ವಜಗಳನ್ನು ಬಳಸಲಾಗಿತ್ತು. ಆದರ ಇಂದು ನಾವು ಬಳಸುತ್ತಿರುವ ತ್ರಿವರ್ಣದ ರಾಷ್ಟ್ರಧ್ವಜವನ್ನು ವಿನ್ಯಾಸಪಡಿಸಿದ ಕೀರ್ತಿ ಅವರದ್ದಾಗಿದೆ.
ಅವರು ವಿನ್ಯಾಸಗೊಳಿಸಿದ ಧ್ವಜವನ್ನು 1921ರಲ್ಲಿ ಮಹಾತ್ಮ ಗಾಂಧೀಜಿಯವರು ರಾಷ್ಟ್ರಧ್ವಜವಾಗಿ ಅನುಮೋದಿಸಿದ್ದರು. ಇದು ಮೊದಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗಿತ್ತು. ಅನಂತರ ಜುಲೈ 22, 1947 ರಲ್ಲಿ ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಲಾಯಿತು.
ತನ್ನ 19 ವರ್ಷ ಪ್ರಾಯದಲ್ಲಿ ಬೋರ್ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಆಫ್ರಿಕಾದಲ್ಲಿ ಗಾಂಧೀಜಿಯನ್ನೂ ಭೇಟಿ ಮಾಡಿದ್ದರು. ಶಿಕ್ಷಣದಲ್ಲಿ ಆಸಕ್ತಿ ಹೊಂದಿದ್ದ ಅವರು ಲಾಹೋರ್ನ ಆಂಗ್ಲೋ-ವೇದಿಕ್ ಕಾಲೇಜಿನಲ್ಲಿ ಇತಿಹಾಸ ಮತ್ತು ಉರ್ದು, ಜಪಾನಿ ಭಾಷೆ ಕಲಿತರು. ಬೆಂಗಳೂರು, ಮದ್ರಾಸ್ಗಳಲ್ಲಿ ರೈಲ್ವೆ ಸಿಬ್ಬಂದಿಯಾಗಿ, ಬಳ್ಳಾರಿಯಲ್ಲಿ ಸರ್ಕಾರಿ ಸೇವಾ ಅಧಿಕಾರಿಯಾಗಿ ಸೇರಿದರು. ವೆಂಕಯ್ಯ ಅವರು ಭೂವಿಜ್ಞಾನಿ, ಕೃಷಿಕ ಹಾಗೂ ಶಿಕ್ಷಣ ತಜ್ಞರಾಗಿದ್ದು, ಮಚಲಿಪಟ್ಟಣಂನಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಪ್ರಾರಂಭಿಸಿದ್ದರು.
ಪಿಂಗಳಿ ಅವರು 1906 ರಿಂದ 1911ರ ಮಧ್ಯೆ ತಮ್ಮ ಬಹು ಹೆಚ್ಚಿನ ಸಮಯ ವಿವಿಧ ಪ್ರಧಾನ ಬೆಳೆಗಳ ಸಂಶೋಧನೆ ನಡೆಸಿದರು ಹಾಗೂ ಕಾಂಬೋಡಿಯಾ ಹತ್ತಿಯ ಬಗ್ಗೆ ವಿಶೇಷ ಅಧ್ಯಯನ ಮಾಡಿದರು. ಇದರೊಂದಿಗೆ ಅವರಿಗೆ ಪ್ಯಾಟ್ಟಿ ವೆಂಕಯ್ಯ (ಕಾಟನ್ ವೆಂಕಯ್ಯ) ಎಂಬ ಹೆಸರೂ ಬಂದಿತು. 1914ರಲ್ಲಿ ತಮ್ಮ ಕೃಷಿ ಭೂಮಿಯನ್ನು ಎಸ್ಟೇಟ್ ಆಗಿ ಮಂರ್ಪಡಿಸಿ ಅದಕ್ಕೆ ಸ್ವೇಚ್ಛಾಪುರಂ ಎಂದು ಹೆಸರಿಸಿದರು. ಬಹುಮುಖಿ ವ್ಯಕ್ತಿತ್ವ ಹೊಂದಿದ್ದ ಅವರು ಒಬ್ಬ ಉತ್ತಮ ಬರಹಗಾರ, ಜಪಾನಿ ಭಾಷಾ ಉಪನ್ಯಾಸಕ ಹಾಗೂ ಭೌತಶಾಸ್ತ್ರಜ್ಞ.
ಕಾಕಿನಾಡದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮ್ಮೇಳನದಲ್ಲಿ ಭಾರತ ತನ್ನದೇ ಆದ ತ್ರಿವರ್ಣ ರಾಷ್ಟ್ರ ಧ್ವಜ ಹೊಂದಬೇಕೆಂಬ ಬೇಡಿಕೆಯನ್ನು ವೆಂಕಯ್ಯ ಅವರು ಮುಂದಿಟ್ಟರು. ಇದಕ್ಕೆ ಅನುಮತಿಯೂ ಪಡೆದರು. 1916 ರಿಂದ 1921ರ ನಡುವೆ ಸುಮಾರು 30 ರಾಷ್ಟ್ರಗಳ ಧ್ವಜಗಳ ಅಧ್ಯಯನ ನಡೆಸಿ ತ್ರಿವರ್ಣ ಧ್ವಜವನ್ನು ರೂಪಿಸಿದರು. 1931ರಲ್ಲಿ ಕರಾಚಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಸಭೆಯಲ್ಲಿ ಈ ತ್ರಿವರ್ಣ ಧ್ವಜವನ್ನು ಪ್ರಥಮ ಬಾರಿಗೆ ಕಾಂಗ್ರೆಸ್ ಧ್ವಜವಾಗಿ ಸ್ವೀಕರಿಸಲಾಯಿತು.
ಬಡತನದಲ್ಲೇ ಜೀವಿಸಿದ್ದ ಅವರು ಜುಲೈ 4, 1963ರಲ್ಲಿ ನಿಧನ ಹೊಂದಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.