ರಾಂಚಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಸುಮಾರು 29 ಲಕ್ಷ ಮಹಿಳೆಯರಿಗೆ ಹಂಚಿಕೆ ಮಾಡಲಾದ ಅಡುಗೆ ಅನಿಲಗಳ ಎರಡನೇ ಪುನರ್ ಭರ್ತಿ ಅನ್ನು ಉಚಿತವಾಗಿ ಮಾಡುವುದಾಗಿ ಝಾರ್ಖಾಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಘೋಷಣೆ ಮಾಡಿದ್ದಾರೆ.
“ಪ್ರಧಾನ್ ಮಂತ್ರಿ ಉಜ್ವಲಾ ಯೋಜನೆ ಅಡಿಯಲ್ಲಿ ನಮ್ಮ ಸರ್ಕಾರವು ಗ್ಯಾಸ್ ಸಿಲಿಂಡರ್ಗಳಿಗೆ ಎರಡನೇ ಪುನರ್ ಭರ್ತಿಯನ್ನು ಉಚಿತವಾಗಿ ಮಾಡಲಿದೆ. ಇದನ್ನು ಈ ವರ್ಷದ ಜನ್ಮಾಷ್ಟಮಿಯ ಸಂದರ್ಭದಲ್ಲಿ ಪ್ರಾರಂಭಿಸಲಾಗುವುದು” ಎಂದು ದಾಸ್ ತಮ್ಮ ಸರ್ಕಾರ ಕೈಗೊಂಡ ನಿರ್ಧಾರದ ಕುರಿತು ಟ್ವಿಟರಿನಲ್ಲಿ ವೀಡಿಯೊ ಸಂದೇಶದೊಂದಿಗೆ ಟ್ವೀಟ್ ಮಾಡಿದ್ದಾರೆ.
अब… उज्ज्वला योजना के तहत झारखण्ड सरकार दूसरा रिफिल भी मुफ्त देगी। जन्माष्टमी के शुभ अवसर पर इसकी शुरुआत की जाएगी। राज्य की लाखों बहनों को इसका लाभ मिलेगा। #NewJharkhand@narendramodi
@dpradhanbjp pic.twitter.com/AMKSsmdtii— Raghubar Das (@dasraghubar) August 1, 2019
ಶೇಕಡಾ 99 ರಷ್ಟು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಉಚಿತ ಮರುಪೂರಣ ನೀಡಲು ಕ್ರಮ ಕೈಗೊಳ್ಳಲಾಗಿದೆ.
“ಪ್ರಧಾನ್ ಮಂತ್ರಿ ಉಜ್ವಲಾ ಯೋಜನೆಯನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು 2016 ಮೇ 1ರಂದು ಪ್ರಾರಂಭಿಸಿದೆ. ಈ ಯೋಜನೆಯು ಅಡುಗೆ ಮಾಡಲು ಕಟ್ಟಿಗೆಯನ್ನು ಅವಲಂಬಿಸುವುರಿಂದ ಮುಕ್ತಿಯನ್ನು ನೀಡಿದೆ. ಈ ಮೂಲಕ ಹೊಗೆ ಮುಕ್ತ ಅಡುಗೆ ಮನೆಯನ್ನು ಕಲ್ಪಿಸಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯವನ್ನು ಕಾಪಾಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಮುಂದಿನ ಕೆಲವು ವರ್ಷಗಳಲ್ಲಿ 80 ದಶಲಕ್ಷ ಬಿಪಿಎಲ್ ಕುಟುಂಬಗಳಿಗೆ ಉಚಿತ ಎಲ್ಪಿಜಿ ಸಂಪರ್ಕವನ್ನು ಒದಗಿಸಲು ಈ ಯೋಜನೆ ಬದ್ಧವಾಗಿದೆ.
ಉಜ್ವಲ ಯೋಜನೆಯ ಅನುಷ್ಠಾನವನ್ನು ವಿಶ್ವ ಆರೋಗ್ಯ ಸಂಸ್ಥೆಯೂ ಶ್ಲಾಘಿಸಿದ್ದು, ದೇಶದ ಮಹಿಳೆಯರು ಎದುರಿಸುತ್ತಿರುವ ಒಳಾಂಗಣ ಮಾಲಿನ್ಯವನ್ನು ಕುಗ್ಗಿಸಿ ಮಹಿಳೆಯರ ಆರೋಗ್ಯವನ್ನು ವೃದ್ಧಿಸುವ ನಿರ್ಣಾಯಕ ಯೋಜನೆ ಇದು ಎಂದು ಬಣ್ಣಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.