ಗುವಾಹಟಿ: ಅಸ್ಸಾಂನ ಮನೋಹರಿ ಗೋಲ್ಡ್ ಟೀ 1 ಕೆಜಿಗೆ ಬರೋಬ್ಬರಿ 50 ಸಾವಿರ ರೂಪಾಯಿಗೆ ಹರಾಜಾಗಿ ದಾಖಲೆಯನ್ನು ಮಾಡಿತ್ತು. ಆದರೀಗ ಅದರ ದಾಖಲೆಯನ್ನು ಅಸ್ಸಾಂನ ಮತ್ತೊಂದು ಅಪರೂಪದ ಚಹಾ ‘ಆರ್ಥಡಕ್ಸ್ ಗೋಲ್ಡನ್ ಟಿಪ್ಸ್’ ಮುರಿದು ಹಾಕಿದೆ. ಗುವಾಹಟಿ ಚಹಾ ಹರಾಜು ಕೇಂದ್ರದಲ್ಲಿ ಈ ಚಹಾ 1 ಕೆಜಿಗೆ ಬರೋಬ್ಬರಿ ರೂ. 70,501 ಕ್ಕೆ ಹರಾಜಾಗಿದೆ.
ಮೈಜನ್ ಟೀ ಎಸ್ಟೇಟ್ ಅಭಿವೃದ್ಧಿಪಡಿಸಿದ ‘ಆರ್ಥಡಕ್ಸ್ ಗೋಲ್ಡನ್ ಟೀ’ಯನ್ನು ಅಸ್ಸಾಂನ ದಿಬ್ರುಘಢ ಜಿಲ್ಲೆಯ ಮೈಜನ್ ಗಾರ್ಡನ್ನಲ್ಲಿ ಬೆಳೆಯಲಾಗಿದೆ. ಈ ಗಾರ್ಡನ್ ಅಸ್ಸಾಂ ಕಂಪನಿ ಇಂಡಿಯಾ ಒಡೆತನದ್ದಾಗಿದೆ. ಇದು ವಿಶ್ವದ ಅತೀ ಹಳೆಯ ಟೀ ಕಂಪನಿಯಾಗಿದೆ.
ಈ ಅಪರೂಪದ ಟೀ ಅನ್ನು ಶತಮಾನಗಳ ಹಿಂದೆ ಬಿತ್ತಿ ಬೆಳೆಯಲಾದ ಚಹಾ ಸಸ್ಯಗಳಿಂದ ತಯಾರು ಮಾಡಲಾಗಿದೆ. ಅತ್ಯಂತ ವಿಭಿನ್ನ ಸುಹಾಸನೆಯನ್ನು ಹೊಂದಿರುವ ಈ ಚಹಾವು ಚಹಾ ಪ್ರಿಯರಿಗೆ ವಿಭಿನ್ನವಾದ ಅನುಭವವನ್ನು ನೀಡುತ್ತದೆ.
ಅಪರೂಪದ ಚಹಾವನ್ನು ಗುವಾಹಟಿಯ ಮುಂಧ್ರಾ ಟೀ ಕಂಪನಿ ಖರೀದಿಸಿದೆ ಎಂದು ಅಸ್ಸಾಂ ಕಂಪನಿ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಈ ಚಹಾವನ್ನು ಅದು ತನ್ನ ಬೆಲ್ಜಿಯಂ ಗ್ರಾಹಕನಿಗೆ ಮತ್ತು ಗುವಾಹಟಿ ಮೂಲದ ಆನ್ಲೈನ್ ಚಹಾ ಅಂಗಡಿಗೆ ಹಂಚಲಿದೆ.
“ಅಸ್ಸಾಂ ಚಹಾ ವೈವಿಧ್ಯತೆಗಳು ಹೊಸ ದಾಖಲೆಯನ್ನು ಬರೆಯುತ್ತಿರುವುದು ಹೊಸ ಚಹಾ ಅಭಿವೃದ್ಧಿಪಡಿಸಲು ಬಯಸುತ್ತಿರುವವರಿಗೆ ದೊಡ್ಡ ಉತ್ತೇಜನವಾಗಿದೆ. ವಾಸ್ತವವಾಗಿ ಅನೇಕ ಬೆಳೆಗಾರರು ಈಗ ವಿಶೇಷ ಚಹಾದತ್ತ ಗಮನ ಹರಿಸುತ್ತಿದ್ದಾರೆ, ಅದು ಇನ್ನೂ ಉತ್ತಮ ಬೆಲೆಗಳಿಗೆ ಮಾರಾಟವಾಗುತ್ತಿದೆ. ಆದರೆ ಉದ್ಯಮವು ಇಂತಹ ವಿಶೇಷ ಚಹಾದ ಮೇಲೆ ಬದುಕಲು ಸಾಧ್ಯವಿಲ್ಲ ಯಾಕೆಂದರೆ ಇವುಗಳ ಉತ್ಪಾದನೆ ಅತ್ಯಂತ ಕನಿಷ್ಠವಾಗಿರುತ್ತದೆ “ಎಂದು ಖ್ಯಾತ ಚಹಾ ಬೆಳೆಗಾರ ಮತ್ತು ಗುವಾಹಟಿ ಚಹಾ ಹರಾಜು ಕೇಂದ್ರದ ಆಡಳಿತ ಮಂಡಳಿಯ ಸದಸ್ಯ ಬಿಡಿಯಾನಂದ ಬರ್ಕಾಟೋಕಿ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.