ನವದೆಹಲಿ: 2018-19ರ ಹಣಕಾಸು ವರ್ಷದಲ್ಲಿ ಭಾರತವು ದಾಖಲೆಯ ಎಫ್ಡಿಐ ಒಳಹರಿವನ್ನು ಕಂಡಿದೆ. ಈ ಸಾಲಿನಲ್ಲಿ 64.37 ಬಿಲಿಯನ್ ಡಾಲರ್ ಎಫ್ಡಿಐ ಒಳಹರಿವನ್ನು ಭಾರತದ ಆಕರ್ಷಿಸಿದೆ ಎಂಬ ಅಂಶ ಡಿಪಾರ್ಟ್ಮೆಂಟ್ ಫಾರ್ ಪ್ರೊಮೋಷನ್ ಆಫ್ ಇಂಡಸ್ಟ್ರೀ ಆ್ಯಂಡ್ ಇಂಟರ್ನಲ್ ಟ್ರೇಡ್ (ಡಿಪಿಐಐಟಿ)ನ ವಾರ್ಷಿಕ ವರದಿಯಿಂದ ತಿಳಿದುಬಂದಿದೆ.
ಕೊನೆಯ ಅತಿ ಹೆಚ್ಚು ಎಫ್ಡಿಐ ಒಳಹರಿವು 2016-17ರಲ್ಲಿ ದಾಖಲಾಗಿತ್ತು, ಈ ಸಾಲಿನಲ್ಲಿ ಭಾರತಕ್ಕೆ 60.98 ಬಿಲಿಯನ್ ಡಾಲರ್ ಹರಿದು ಬಂದಿತ್ತು. 2017-18ರ ಸಾಲಿನಲ್ಲಿ ಈ ಒಳಹರಿವು 55.55 ಬಿಲಿಯನ್ ಡಾಲರಿಗೆ ಇಳಿದಿತ್ತು.
ಕಳೆದ ಐದು ವರ್ಷಗಳಲ್ಲಿ ಒಟ್ಟು 286 ಬಿಲಿಯನ್ ಡಾಲರ್ ಎಫ್ಡಿಐ ಒಳಹರಿವು ದಾಖಲಾಗಿದೆ ಎಂದು ವರದಿ ಹೇಳಿದೆ. ಸಂಪನ್ಮೂಲಗಳು, ಉತ್ತಮ ಅಭ್ಯಾಸಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಎಫ್ಡಿಐ ಒಳಹರಿವು ಹೆಚ್ಚಾಗಿದ್ದು, ಇದು ಉನ್ನತ ಮಟ್ಟದಲ್ಲಿ ಪ್ರಗತಿಯನ್ನು ತರುತ್ತದೆ ಎಂದು ವರದಿ ಹೇಳಿದೆ.
ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರ ಕೈಗೊಂಡ ಹಲವು ಸುಧಾರಣೆಗಳು ಭಾರತಕ್ಕೆ ದಾಖಲೆಯ ಎಫ್ಡಿಐ ಒಳಹರಿವನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ಡಿಪಿಐಐಟಿ ಹೇಳಿದೆ. 2014-15ರಲ್ಲಿ ಭಾರತವು $45.14 ಬಿಲಿಯನ್ ಎಫ್ ಡಿಐಯನ್ನು ಆಕರ್ಷಿಸಿತ್ತು. ಆದರೆ ಈಗ ಅದು 64.37 ಬಿಲಿಯನ್ ಡಾಲರ್ಗೆ ಏರಿರುವುದು ಮಹತ್ವದ ಬೆಳವಣಿಗೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.