ಟೆಲ್ ಅವೀವ್: ಇದೇ ವರ್ಷದ ಸೆಪ್ಟೆಂಬರ್ 17 ರಂದು ಇಸ್ರೇಲ್ನಲ್ಲಿ ಚುನಾವಣೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಇರುವ ಬ್ಯಾನರ್ಗಳು ಅಲ್ಲಿ ರಾರಾಜಿಸುತ್ತಿವೆ. ಮೋದಿ ಮಾತ್ರವಲ್ಲೇ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಇರುವ ಚಿತ್ರಗಳನ್ನು ಒಳಗೊಂಡ ಬ್ಯಾನರ್ಗಳನ್ನು ಪ್ರದರ್ಶಿಸಲಾಗುತ್ತಿದೆ. ಲಿಕುಡ್ ಪಕ್ಷದ ಮುಖಂಡರಾಗಿರುವ ನೆತನ್ಯಾಹು ಅವರ ವ್ಯಕ್ತಿತ್ವವನ್ನು ವಿಭಿನ್ನವಾಗಿ ಬಿಂಬಿಸುವ ಸಲುವಾಗಿ ಈ ಬ್ಯಾನರ್ಗಳನ್ನು ಅಳವಡಿಸಲಾಗಿದೆ.
ಟೆಲ್ ಅವೀವ್ನ ಮೆಟ್ಜುಡಾಟ್ ಜೀವ್ 38, ಕಿಂಗ್ ಜಾರ್ಜ್ ಸ್ಟ್ರೀಟ್ನಲ್ಲಿರುವ ಲಿಕುಡ್ ಪಕ್ಷದ ಪ್ರಧಾನ ಕಛೇರಿಯಲ್ಲಿ ಚುನಾವಣಾ ಜಾಹೀರಾತು ಬ್ಯಾನರ್ಗಳೊಂದಿಗೆ, ನೆತನ್ಯಾಹು ಅವರು ಮೂವರು ವಿಶ್ವ ನಾಯಕರೊಂದಿಗೆ ನಿಕಟರಾಗಿರುವ ಫೋಟೋಗಳ ಬ್ಯಾನರ್ಗಳನ್ನು ಹಾಕಲಾಗಿದೆ. ಹೀಬ್ರೂ ಭಾಷೆಯಲ್ಲಿ, Netanyahu (in a) “different league” ಎಂದು ಬರೆಯಲಾಗಿದೆ.
ವಿಶ್ವ ನಾಯಕರೊಂದಿಗೆ ಅವರ ನಿಕಟತೆಯನ್ನು ಕೇಂದ್ರೀಕರಿಸಿ ನೆತನ್ಯಾಹು ಅವರ ಚುನಾವಣಾ ಪ್ರಚಾರ ಕಾರ್ಯ ನಡೆಯುತ್ತಿದೆ ಮತ್ತು ಆ ದೇಶದ ಭದ್ರತೆಗೆ ನಿರ್ಣಾಯಕವಾಗಿರುವ ಇಸ್ರೇಲಿ ರಾಜಕೀಯದಲ್ಲಿ ಸಾಟಿಯಿಲ್ಲದ ನಾಯಕನಾಗಿ ಅವರನ್ನು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ.
ಈ ಯಹೂದಿ ರಾಷ್ಟ್ರದಲ್ಲಿ ಮತದಾನ ನಡೆಯಲು ಕೇವಲ ಎಂಟು ದಿನಗಳು ಇರುವ ಮೊದಲು ಇಸ್ರೇಲಿ ಪ್ರಧಾನ ಮಂತ್ರಿ ನೆತನ್ಯಾಹು ಅವರು ಸೆಪ್ಟೆಂಬರ್ 9 ರಂದು ಮೋದಿಯವರನ್ನು ಭೇಟಿಯಾಗಲು ದೆಹಲಿಗೆ ಬರಲಿದ್ದಾರೆ. ಕೆಲವು ರಾಜಕೀಯ ವಿಶ್ಲೇಷಕರ ಪ್ರಕಾರ, ವಿಶ್ವ ಒಪ್ಪಿತ ನಾಯಕನೆಂದು ತೋರಿಸಿಕೊಳ್ಳಲು ಮತ್ತು ಮತದಾನಕ್ಕೂ ಮುನ್ನ ತನ್ನ ಇಮೇಜ್ ಅನ್ನು ಇನ್ನಷ್ಟು ಬಿಲ್ಡ್ ಮಾಡಲು ಅವರು ಮೋದಿಯನ್ನು ಭೇಟಿಯಾಗುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.