ನವದೆಹಲಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್ನ ಪ್ರಾಧ್ಯಾಪಕ ಡಾ. ಪ್ರಭು ರಾಜಗೋಪಾಲ್ ಅವರು ಕೊಳಚೆ ಗುಂಡಿಗಳನ್ನು ಸ್ವಚ್ಛಗೊಳಿಸುವಂತಹ ಸಾಧನವೊಂದನ್ನು ಕಂಡುಹಿಡಿದಿದ್ದಾರೆ. ಮನುಷ್ಯರನ್ನು ಕೊಳಚೆ ಗುಂಡಿಗೆ ಇಳಿಸುವುದಕ್ಕೆ ಪರ್ಯಾಯವಾಗಿ ಈ ಸಾಧನ ಕೆಲಸ ಮಾಡಲಿದೆ.
ಐಐಟಿ-ಮದ್ರಾಸ್ನ ಸೆಂಟರ್ ಫಾರ್ ನಾನ್ ಡಿಸ್ಟ್ರಕ್ಟಿವ್ ಇವಲ್ಯೂಷನ್ನ ಪ್ರಾಧ್ಯಾಪಕರಾಗಿರುವ ಡಾ. ಪ್ರಭು ರಾಜಗೋಪಾಲ್ ಅವರು, 50 ಕೆಜಿ ತೂಕದ, ನ್ಯೂಮ್ಯಾಟಿಕ್-ಚಾಲಿತ, ರಿಮೋಟ್-ಕಂಟ್ರೋಲ್ಡ್ ರೋಬೋಟ್ ಅನ್ನು ಕಂಡುಹಿಡಿದಿದ್ದಾರೆ. ಇದನ್ನು ಸೆಪ್ಟಿಕ್ ಮತ್ತು ಒಳಚರಂಡಿಗಳನ್ನು ಸ್ವಚ್ಛಗೊಳಿಸಲು ಬಳಸಬಹುದಾಗಿದೆ.
ಈ ವಿಭಿನ್ನ ಯಂತ್ರಕ್ಕೆ ಸಿಪಾಯ್ ಸೆಪ್ಟಿಕ್ ಟ್ಯಾಂಕ್ ರೋಬೋಟ್ ಎಂದು ಹೆಸರಿಡಲಾಗಿದೆ, ಇದು 360-ಡಿಗ್ರಿ ಮೋಷನ್ ಆರ್ಮ್ ಟೆಕ್ನಾಲಜಿಯನ್ನು ಹೊಂದಿದೆ, ಇದು ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಅಂಡರ್ಗ್ರೌಂಡ್ ಮ್ಯಾನ್ಹೋಲ್ ಫ್ಲೋರ್ ಅನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.
“ಸೆಪ್ಟಿಕ್ ಟ್ಯಾಂಕ್ಗಳಿಗೆ ಮಾನವರನ್ನು ಇಳಿಸುವುದನ್ನು ತಡೆಯುವುದು ನಮ್ಮ ಗುರಿ. ಅಪಾಯಕಾರಿ ಅನಿಲಗಳು ಮತ್ತು ಹಾನಿಕಾರಕ ಸೂಕ್ಷ್ಮಜೀವಿಗಳನ್ನು ಒಳಗೊಂಡಿರುವ ಇಂತಹ ಟ್ಯಾಂಕ್ಗಳಿಗೆ ಮನುಷ್ಯರನ್ನು ಇಳಿಸುವುದು ಅವರ ಜೀವಕ್ಕೆ ಕುತ್ತು ತರಬಹುದು ”ಎಂದು ಡಾ. ರಾಜಗೋಪಾಲ್ ಎಚ್ಚರಿಸಿದ್ದಾರೆ.
”ರೋಬೋಟ್ ಮತ್ತು ಭವಿಷ್ಯದ ಸೇರ್ಪಡೆಗಳು ಸಮಗ್ರ ಪರಿಹಾರವನ್ನು ಸಾಧಿಸುವ ಮೂಲಕ ಸೆಪ್ಟಿಕ್ ಟ್ಯಾಂಕ್ಗಳಿಗೆ ಪ್ರವೇಶಿಸುವುದು, ಸ್ವಚ್ಛಗೊಳಿಸುವುದು ಮತ್ತು ನಿರ್ವಹಣೆ ಮಾಡುವುದು ಇತ್ಯಾದಿ ಕಾರ್ಯಗಳಿಗೆ ಮಾನವ ಪ್ರವೇಶವನ್ನು ತಡೆಯುವ ಉದ್ದೇಶವನ್ನು ಹೊಂದಿವೆ. ಈ ರೋಬೋಟ್ ಮೇಲೆ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಈ ಯಂತ್ರವನ್ನು ನಿಯಂತ್ರಿಸುವ ಮೂಲಕ ಆಪರೇಟರ್ ಒಳಚರಂಡಿ ಮಾರ್ಗದ ಸ್ಥಿತಿಗತಿಯನ್ನು ವೀಕ್ಷಣೆ ಮಾಡಬಹುದಾಗಿದೆ” ಎಂದು ಅವರು ಹೇಳಿದ್ದಾರೆ.
ಸೆಪ್ಟಿಕ್ ಟ್ಯಾಂಕಿನಲ್ಲಿರುವ ದಪ್ಪ ತ್ಯಾಜ್ಯಗಳನ್ನು ತುಂಡು ತುಂಡು ಮಾಡಲು ಈ ಯಂತ್ರ ಹೈ ವೆಲೋಸಿಟಿ ಕಟ್ಟರ್ಗಳನ್ನು ಬಳಸುತ್ತದೆ. ಸಿಪಾಯಿ ಸೆಪ್ಟಿಕ್ ಟ್ಯಾಂಕ್ ಬೆಲೆ 5 ಲಕ್ಷದಿಂದ 10 ಲಕ್ಷ ರೂ ಆಗಿದೆ ಮತ್ತು ಇದಕ್ಕೆ ಹೆಚ್ಚಿನ ನಿರ್ವಹಣೆಯ ಅಗತ್ಯವಿಲ್ಲ. ಈ ರೋಬೋಟ್ಗಳು ಇನ್ನು ಒಂದು ಅಥವಾ ಎರಡು ವರ್ಷಗಳಲ್ಲಿ ಮಾರುಕಟ್ಟೆಗೆ ಬರಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.