ನವದೆಹಲಿ : ಭಾರತದಲ್ಲಿ ಗುಂಪು ಹಲ್ಲೆ ಮತ್ತು ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿ 49 ಮಂದಿ ಸೆಲೆಬ್ರಿಟಿಗಳ ತುಕ್ಡೆ ತುಕ್ಡೆ ಗ್ಯಾಂಗ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದ ಮರುದಿನವೇ, 62 ಸೆಲೆಬ್ರಿಟಿಗಳು ಈ ಗುಂಪಿನ ಆಯ್ದ ಖಂಡನೆ ಮತ್ತು ಪ್ರಕರಣಗಳ ತಪ್ಪು ವಿಶ್ಲೇಷಣೆಯನ್ನು ವಿರೋಧಿಸಿ ಬಹಿರಂಗ ಪತ್ರವನ್ನು ಬರೆದಿದ್ದಾರೆ.
ನಟಿ ಕಂಗನಾ ರಣಾವತ್, ಸಾಹಿತಿ ಪ್ರಸೂನ್ ಜೋಶಿ, ನೃತ್ಯಗಾರ್ತಿ ಸೋನಾಲ್ ಮಾನ್ಸಿಂಗ್, ಮಧುರ್ ಭಂಡಾರ್ಕರ್, ವಿವೇಕ್ ಅಗ್ನಿಹೋತ್ರಿ ಮುಂತಾದ 62 ಸೆಲೆಬ್ರಿಟಿಗಳು ಶುಕ್ರವಾರ ಬಹಿರಂಗ ಪತ್ರವನ್ನು ಬರೆದಿದ್ದು, ಆಯ್ದ ಖಂಡನೆ ಮತ್ತು ಪ್ರಕರಣಗಳ ತಪ್ಪು ನಿರೂಪಣೆಗೆ ವಿರೋಧವನ್ನು ವ್ಯಕ್ತಪಡಿಸಿದೆ.
“49 ಮಂದಿ ದೇಶದ ಸ್ವಯಂಘೋಷಿತ ರಕ್ಷಕರು ಮತ್ತು ಕಾಳಜಿದಾರರು ಭಾರತದ ಅಂತರಾಷ್ಟ್ರೀಯ ಗೌರವವನ್ನು ಹಾಳುಗೆಡವುತ್ತಿದ್ದರು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳನ್ನು ನಕಾರಾತ್ಮಕವಾಗಿ ಬಿಂಬಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ” ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಅಲ್ಲದೆ ಈ 49 ಮಂದಿ ಗ್ಯಾಂಗ್ ನಕ್ಸಲ್ ಭಯೋತ್ಪಾದನೆಯ ಬಗ್ಗೆ, ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳು ಮುಚ್ಚುವಂತೆ ನೀಡಿದ ಕರೆಯ ಬಗ್ಗೆ, ವಿಶ್ವವಿದ್ಯಾಲಯಗಳಲ್ಲಿ ಭಯೋತ್ಪಾದಕರ ಬಗ್ಗೆ ಘೋಷಣೆ ಕೂಗುತ್ತಿರುವ ಬಗ್ಗೆ ಮೌನವಾಗಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಗುಂಪು ಹಲ್ಲೆಗಳಂಥ ಪ್ರಕರಣಗಳು ಸಾಮಾಜಿಕ ಪಿಡುಗಾಗಿದ್ದು, ಅವುಗಳನ್ನು ಮುಂಚೂಣಿಯಲ್ಲಿ ನಿಂತು ನಿರ್ಮೂಲನೆಗೊಳಿಸಬೇಕು ಅಗತ್ಯವಿದೆ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ.
“ಪ್ರಧಾನಿ ನರೇಂದ್ರ ಮೋದಿಯವರು ಈ ಪ್ರಕರಣಗಳ ಬಗ್ಗೆ ನಿರಂತರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ ಮತ್ತು ಸಂಬಂಧಿತ ರಾಜ್ಯ ಸರಕಾರಗಳಿಗೆ ಈ ಪ್ರಕರಣಗಳ ಬಗ್ಗೆ ಕ್ರಮಕೈಗೊಳ್ಳುವ ಸ್ವಾತಂತ್ರ್ಯವಿದೆ. ಗುಂಪು ಹಲ್ಲೆ ತಾರತಮ್ಯ ಮತ್ತು ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿಯನ್ನು ಯಾವುದೇ ಭೇದಭಾವವಿಲ್ಲದೆ ಖಂಡಿಸಬೇಕು ಎಂಬುದು ನಮ್ಮ ಮನವಿಯಾಗಿದೆ ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.