ಮಂಗಳೂರು : ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಪ್ರಾರಂಭವಾಗಿ 125 ವರ್ಷದ ಸಂಭ್ರಮಾಚರಣೆ ಆಚರಿಸುತ್ತಿದೆ. ಈ ಸಂದರ್ಭ ಸಂಸ್ಥೆಯ ಹಳೆ ವಿದ್ಯಾರ್ಥಿ ಮತ್ತು ಬರಹಗಾರ, ಬೂಕರ್ ಪ್ರಶಸ್ತಿ ವಿಜೇತ ಅರವಿಂದ ಅಡಿಗ 1 ಕೋಟಿ ರೂ. ಮೊತ್ತದ ಧನಸಹಾಯ ನೀಡಿದ್ದಾರೆ.
ಅರವಿಂದ ಅಡಿಗ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಪಡೆದಿದ್ದಾರೆ. ಈ ಹಣವನ್ನು 1891 ರಲ್ಲಿ ಶಾಲಾ ಪ್ರಾರಂಭದ ಸಮಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಯು. ಶ್ರೀನಿವಾಸ್ ರಾವ್, ಬಿ. ಪದ್ಮನಾಭ ಬಾಳಿಗಾ, ಬಿ. ವಾಮನ್ ಬಾಳಿಗಾ, ಅರ್ಕುಳ ವಾಸುದೇವ ರಾವ್ ಮತ್ತು ಎ. ಪದ್ಮನಾಭಯ್ಯ ಇವರುಗಳ ಹೆಸರಿನಲ್ಲಿ ಅಸೋಸಿಯೇಷನ್ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ನೀಡಲು ವಿನಿಯೋಗ ಮಾಡುತ್ತದೆ ಎಂದು ಕಾರ್ಯದರ್ಶಿ ರಂಗನಾಥ್ ಭಟ್ ತಿಳಿಸಿದ್ದಾರೆ.
ಶಾಲೆಗೆ ಧನ ಸಹಾಯ ಮಾಡಲು ಸ್ವಯಂಪ್ರೇರಿತರಾಗಿ ಅರವಿಂದ ಅಡಿಗ ನಮ್ಮನ್ನು ಸಂಪರ್ಕಿಸಿದರು. ಆಗ ನಾವು ಅವರಿಗೆ ನಮ್ಮ ಸಂಸ್ಥೆಯು 25 ವರ್ಷಗಳ ಯೋಜನೆಯ ಬಗ್ಗೆ ತಿಳಿಸಿದೆವು. ಅವರು 50 ಲಕ್ಷ ನೀಡಲು ಮುಂದಾದರು. ಅವರು ಶಾಲೆಗೆ ಭೇಟಿ ನೀಡಿದಾಗ ಧನ ಸಹಾಯದ ಮೊತ್ತ 75 ಲಕ್ಷಕ್ಕೆ ಹೆಚ್ಚಿಸಿದ್ದು ಈಗ ಚೆಕ್ ಅನ್ನು ಕಳುಹಿಸುವಾಗ 1 ಕೋಟಿ ರೂ. ಆಗಿದ್ದು, ಇದು ನಮಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದರು..
ಅರವಿಂದ ಅಡಿಗ ಅವರು ಈಗ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. 2008 ರಲ್ಲಿ ಇವರು ಬರೆದ ‘ದ ವೈಟ್ ಟೈಗರ್’ ಕೃತಿಗೆ ಮ್ಯಾನ್ ಬೂಕ್ರ್ ಪ್ರಶಸ್ತಿ ದೊರೆತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.