ನವದೆಹಲಿ: ದೇಶಕ್ಕೆ ಸೇವೆ ಸಲ್ಲಿಸುವ ಕಾರ್ಯ, ಉತ್ಸಾಹ ಮತ್ತು ಪ್ರೀತಿಯನ್ನು ಪ್ರೇರೇಪಿಸುವ ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ತನ್ನ ಗೌರವವನ್ನು ತುಂಬಾ ಎತ್ತರಕ್ಕೆ ಕೊಂಡೊಯ್ದಿದೆ. ಎನ್ಸಿಸಿಯ ಘನತೆಯನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಕೆಡೆಟ್ಗಳಿಗೆ ನೀಡಲಾಗುವ ಪ್ರಶಸ್ತಿಗಳ ಸಂಖ್ಯೆಯನ್ನು ಈಗಿರುವ 143 ರಿಂದ 243 ಕ್ಕೆ ಹೆಚ್ಚಿಸಲು ಅನುಮೋದನೆ ನೀಡಿದ್ದಾರೆ ಮತ್ತು ವಿವಿಧ ವಿಭಾಗಗಳಲ್ಲಿನ ನಗದು ಪ್ರೋತ್ಸಾಹವನ್ನೂ ಸಹ ನೀಡಲಿದ್ದಾರೆ.
ಎನ್ಸಿಸಿ ಕೆಡೆಟ್ಗಳಿಗೆ ಇನ್ನು ಮುಂದೆ 30,000 ರೂ.ಗಳ ನಗದು ಪ್ರೋತ್ಸಾಹವನ್ನು ಹೊಂದಿರುವ ಎರಡು ರಕ್ಷಾ ಮಂತ್ರಿ ಪದಕಗಳನ್ನು ಪಡೆಯುವ ಅರ್ಹತೆ ಸಿಕ್ಕಿದೆ, ಈ ಹಿಂದೆ 20,000 ರೂ.ಗಳ ಮೌಲ್ಯದ ಒಂದು ಪದಕ ಸಿಗುತ್ತಿತ್ತು. ತಲಾ 20,000 ರೂ.ಗಳ ಪ್ರೋತ್ಸಾಹವನ್ನು ಹೊಂದಿರುವ ನಾಲ್ಕು ರಕ್ಷಾ ಮಂತ್ರಿ ಪ್ರಶಂಸಾ ಪ್ರಶಸ್ತಿಯನ್ನು ಘೋಷಿಸಿಲಾಗಿದೆ. ಇದುವರೆಗೆ 15 ಸಾವಿರ ರೂಪಾಯಿ ನಗದು ಪುರಸ್ಕಾರವುಳ್ಳ 3 ರಕ್ಷಾ ಮಂತ್ರಿ ಪ್ರಶಂಸಾ ಪ್ರಶಸ್ತಿ ಇತ್ತು. ಈಗಿರುವ 102 ರಿಂದ 200 ಕ್ಕೆ ಡಿಜಿಯವರ ಪ್ರಶಂಸಾ ಪ್ರಶಸ್ತಿಯ ಸಂಖ್ಯೆಯನ್ನು ಹೆಚ್ಚಿಸಲು ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ.
ವಿವಿಧ ವಿಭಾಗಗಳಲ್ಲಿ ಎನ್ಸಿಸಿ ಕೆಡೆಟ್ಗಳಿಗಾಗಿ 9 ಹೊಸ ಅತ್ಯುತ್ತಮ ಕೆಡೆಟ್ ಪ್ರಶಸ್ತಿಗಳನ್ನು ರಕ್ಷಣಾ ಮಂತ್ರಿ ಅನುಮೋದಿಸಿದ್ದಾರೆ ಮತ್ತು ಅಂತಹ ಪ್ರಶಸ್ತಿಗಳ ಒಟ್ಟು ಸಂಖ್ಯೆಯನ್ನು 27 ಕ್ಕೆ ಏರಿಸಲಾಗಿದೆ. ಪ್ರತಿ ಪ್ರಶಸ್ತಿಗೆ ನಗದು ಪ್ರೋತ್ಸಾಹವನ್ನು ಕೂಡ ಗಣನೀಯವಾಗಿ ಹೆಚ್ಚಿಸಲಾಗಿದೆ.
ನವದೆಹಲಿಯ ಗಣರಾಜ್ಯೋತ್ಸವ ಶಿಬಿರದಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಆರ್ಥಿಕ ಸನ್ನಿವೇಶದ ಬದಲಾವಣೆಯ ಹಿನ್ನಲೆಯಲ್ಲಿ ಪ್ರಶಸ್ತಿಗಳ ಮೌಲ್ಯವನ್ನು ಹೆಚ್ಚಿಸಲಾಗಿದೆ ಮತ್ತು ಕೆಡೆಟ್ಗಳ ಬಲವನ್ನು 2014 ರಲ್ಲಿ ಇದ್ದ 11,31,083 ರಿಂದ 2018 ರಲ್ಲಿ 13,29,202 ಕ್ಕೆ ಹೆಚ್ಚಿಸಲಾಗಿದೆ. ಪ್ರಶಸ್ತಿಗಳ ಸಂಖ್ಯೆ ಮತ್ತು ಪ್ರೋತ್ಸಾಹವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಈಗ ಅನುಮೋದಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.