ವಾಷಿಂಗ್ಟನ್: ಕಾಶ್ಮೀರ ಬಿಕ್ಕಟ್ಟು ಬಗೆಹರಿಸಲು ಮಧ್ಯಪ್ರವೇಶ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ನನಗೆ ಮನವಿ ಮಾಡಿಕೊಂಡಿದ್ದರು ಎಂಬ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಜುಗರದ ಹೇಳಿಕೆಗೆ ಪ್ರಭಾವಿ ಡೆಮಾಕ್ರಟಿಕ್ ಕಾಂಗ್ರೆಸ್ಸಿಗರೊಬ್ಬರು ಮಂಗಳವಾರ ಕ್ಷಮೆಯಾಚಿಸಿದ್ದಾರೆ. ಅಲ್ಲದೇ, ಈ ವಿಷಯದ ಬಗ್ಗೆ ಯಾವುದೇ ಮೂರನೇ ವ್ಯಕ್ತಿಯ ಮಧ್ಯಪ್ರವೇಶ ಸಾಧ್ಯವಿಲ್ಲ ಎಂಬ ಭಾರತದ ನಿಲುವನ್ನು ಬೆಂಬಲಿಸಿದರು.
“ಟ್ರಂಪ್ ಅವರ ಮುಜುಗರದ ಹೇಳಿಕೆಗಾಗಿ ನಾನು ಭಾರತೀಯ ರಾಯಭಾರಿ ಹರ್ಷ್ ಶ್ರೀಂಗ್ಲಾ ಅವರ ಬಳಿ ಕ್ಷಮೆಯಾಚಿಸಿದ್ದೇನೆ” ಎಂದು ಅಮೆರಿಕಾ ಕಾಂಗ್ರೆಸ್ ಸದಸ್ಯ ಬ್ರಾಡ್ಲಿ ಶೆರ್ಮನ್ ಅವರು ಟ್ವಿಟ್ ಮಾಡಿದ್ದಾರೆ. ಕಾಶ್ಮೀರ ವಿಷಯ ಬಗೆಹರಿಸಲು ಮೋದಿ ನನ್ನ ಮಧ್ಯಸ್ಥಿಕೆಗೆ ಮನವಿ ಮಾಡಿದ್ದಾರೆ ಎಂದು ಟ್ರಂಪ್ ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ ಅವರು ಈ ಪೋಸ್ಟ್ ಮಾಡಿದ್ದಾರೆ.
Everyone who knows anything about foreign policy in South Asia knows that #India consistently opposes third-party mediation re #Kashmir. Everyone knows PM Modi would never suggest such a thing. Trump’s statement is amateurish and delusional. And embarrassing. 1/2
— Rep. Brad Sherman (@BradSherman) July 22, 2019
ಟ್ರಂಪ್ ಅವರ ಹೇಳಿಕೆಯನ್ನು ಭಾರತ ಸಾರಸಗಟಾಗಿ ತಳ್ಳಿ ಹಾಕಿದೆ.
ಕಳೆದ 70 ವರ್ಷಗಳಿಂದ, ಭಾರತವು ಕಾಶ್ಮೀರ ವಿಷಯದಲ್ಲಿ ಯಾವುದೇ ತೃತೀಯ ಮಧ್ಯಸ್ಥಿಕೆ ಪ್ರಸ್ತಾಪವನ್ನು ನಿರಂತರವಾಗಿ ವಿರೋಧಿಸುತ್ತಲೇ ಬಂದಿದೆ. ಒಂದು ದಶಕದಿಂದ, ಕಾಶ್ಮೀರ ದ್ವಿಪಕ್ಷೀಯ ವಿಷಯ ಎಂದು ಅಮೆರಿಕ ಪ್ರತಿಪಾದಿಸುತ್ತಿದೆ.
“ದಕ್ಷಿಣ ಏಷ್ಯಾದಲ್ಲಿ ವಿದೇಶಾಂಗ ನೀತಿಯ ಬಗ್ಗೆ ಜ್ಞಾನ ಹೊಂದಿರುವ ಪ್ರತಿಯೊಬ್ಬರಿಗೂ, ಭಾರತವು ಕಾಶ್ಮೀರ ವಿಷಯದಲ್ಲಿ ತೃತೀಯ ಮಧ್ಯಸ್ಥಿಕೆಯನ್ನು ಬಲವಾಗಿ ವಿರೋಧಿಸುತ್ತದೆ ಎಂಬುದು ತಿಳಿದಿದೆ. ಪ್ರಧಾನ ಮಂತ್ರಿ ಮೋದಿ ಎಂದಿಗೂ ಇಂತಹ ಸಲಹೆಯನ್ನು ನೀಡಲಾರರು ಎಂಬುದು ಎಲ್ಲರಿಗೂ ತಿಳಿದಿದೆ” ಎಂದು ಶೆರ್ಮನ್ ಟ್ವೀಟ್ ಮಾಡಿದ್ದಾರೆ. ದಕ್ಷಿಣ ಏಷ್ಯಾದಲ್ಲಿನ ಬೆಳವಣಿಗೆಯನ್ನು ಇವರು ಕಳೆದ ದಶಕಗಳಿಂದಲೂ ನಿಕಟವಾಗಿ ಅಧ್ಯಯನ ನಡೆಸುತ್ತಿದ್ದಾರೆ.
“ಟ್ರಂಪ್ ಅವರ ಹೇಳಿಕೆ ಭ್ರಮನಿರಸನದ ಮತ್ತು ಮುಜುಗರದ ಸಂಗತಿಯಾಗಿದೆ” ಎಂದು ಏಷ್ಯಾ, ಪೆಸಿಫಿಕ್ ಮತ್ತು ನಾನ್ ಪ್ರೊಫಿಲರೇಶನ್ ವಿದೇಶಾಂಗ ವ್ಯವಹಾರಗಳ ಉಪಸಮಿತಿಯ ಅಧ್ಯಕ್ಷರೂ ಆಗಿರುವ ಶೆರ್ಮನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.