ಚೆನ್ನೈ: ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಇಂದು ಚೆನ್ನೈನಲ್ಲಿ ಡಾರ್ನಿಯರ್ ಮರಿಟೈಮ್ ಸರ್ವಿಲೆನ್ಸ್ ಏರ್ಕ್ರಾಫ್ಟ್ ಸ್ಕ್ವಾಡ್ರನ್ ಅನ್ನು ನೌಕಾಸೇನೆಗೆ ಸೇರ್ಪಡೆಗೊಳಿಸಲಿದ್ದಾರೆ. ಶ್ರೀಲಂಕಾ ಮತ್ತು ಪೂರ್ವ ಸಮುದ್ರ ತೀರದಲ್ಲಿನ ಭಾರತದ ಕಡಲ ಗಡಿಯಲ್ಲಿ ಗಸ್ತು ತಿರುಗಲು ಈ ಏರ್ಕ್ರಾಫ್ಟ್ ಅನ್ನು ಬಳಸಲಾಗುತ್ತದೆ. ಇದು ಐದನೇ ಡಾರ್ನಿಯರ್ ಏರ್ಕ್ರಾಫ್ಟ್ ಸ್ಕ್ವಾಡ್ರನ್ ಆಗಿದ್ದು, ಇಂಡಿಯನ್ ನೇವಲ್ ಏರ್ ಸ್ಕ್ವಾಡ್ರನ್ (ಐಎನ್ಎಎಸ್) 313 ಆಗಿದೆ.
ಈ ಸ್ಕ್ವಾಡ್ರನ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿತ ಕಡಲ ಕಣ್ಗಾವಲು ಆವೃತ್ತಿಯ ಬಹು-ಪಾತ್ರದ ಡಾರ್ನಿಯರ್ 228 ಶಾರ್ಟ್ ರೇಂಜ್ ಮರಿಟೈಮ್ ಸರ್ವಿಲೆನ್ಸ್ ಏರ್ಕ್ರಾಫ್ಟ್ ಅನ್ನು ನಿರ್ವಹಿಸುತ್ತದೆ. ಈ ಡಾರ್ನಿಯರ್ ಏರ್ಕ್ರಾಫ್ಟ್ ಅತ್ಯಾಧುನಿಕ ಕಣ್ಗಾವಲು ರಾಡಾರ್, ಎಲೆಕ್ಟ್ರಾನಿಕ್ ಸಂವೇದಕಗಳು ಮತ್ತು ನೆಟ್ವರ್ಕಿಂಗ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಅಲ್ಲದೇ, ಅಲ್ಟ್ರಾ-ಮಾಡರ್ನ್ ಸಂವೇದಕಗಳು ಮತ್ತು ಸಾಧನಗಳನ್ನು ಹೊಂದಿದೆ. ಈ ಸ್ಕ್ವಾಡ್ರನ್ ಭಾರತೀಯ ನೌಕಾಪಡೆಯ ಮರಿಟೈಮ್ ಡೊಮೈನ್ ಜಾಗೃತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಬಲ ದ್ವಿಗುಣಗೊಳ್ಳುತ್ತದೆ.
ಪೂರ್ವ ನೌಕಾಪಡೆಯ ನೇತೃತ್ವದಲ್ಲಿ ಡಾರ್ನಿಯರ್ ಮರಿಟೈಮ್ ಸರ್ವಿಲೆನ್ಸ್ ಸ್ಕ್ವಾಡ್ರನ್ ಅನ್ನು ನಿಯೋಜಿಸುವುದರಿಂದ, ಭಾರತೀಯ ನೌಕಾಪಡೆ ನಿರಂತರವಾಗಿ ಕಣ್ಗಾವಲು ಇರಿಸಲು ಮತ್ತು ದೇಶದ ಪೂರ್ವ ಸಮುದ್ರ ತೀರದಲ್ಲಿ ಕಡಲ ಹಿತಾಸಕ್ತಿಗಳನ್ನು ಕಾಪಾಡಲು ಮಾಡಿದ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುತ್ತದೆ.
Navy Chief Admiral Karambir Singh to commission a Dornier maritime surveillance aircraft squadron at Chennai tomorrow. The aircraft would be used to patrol Indian maritime boundary with Sri Lanka and other parts of the Eastern Seaboard. pic.twitter.com/E5eEyZZdSI
— ANI (@ANI) July 20, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.