ಮುಂಬಯಿ: ದಾನ ಮಾಡುವುದರಲ್ಲಿ ಎತ್ತಿದ ಕೈ ಎನಿಸಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ನೆರೆ ಪೀಡಿತ ಅಸ್ಸಾಂನ ನೆರೆವಿಗೆ ಧಾವಿಸಿದ್ದಾರೆ. ಸಂತ್ರಸ್ಥರ ರಕ್ಷಣಾ ಕಾರ್ಯಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ರೂ. 1 ಕೋಟಿ ಮತ್ತು ಕಾಝೀರಂಗ ನ್ಯಾಷನಲ್ ಪಾರ್ಕ್ನಲ್ಲಿನ ಪ್ರಾಣಿಗಳ ರಕ್ಷಣಾ ಕಾರ್ಯಕ್ಕಾಗಿ ರೂ. 1 ಕೋಟಿಗಳನ್ನು ಅವರು ನೀಡಿದ್ದಾರೆ.
ಮಾತ್ರವಲ್ಲದೇ, ಟ್ವಿಟರ್ ಮೂಲಕ ನೆರೆ ಪೀಡಿತರಿಗೆ ಸಂತಾಪವನ್ನು ಸೂಚಿಸುವ ಬದಲು ಕೈಲಾದಷ್ಟು ಸಹಾಯ ಮಾಡಿ ಎಂದು ಅವರು ಜನರ ಬಳಿ ಮನವಿ ಮಾಡಿಕೊಂಡಿದ್ದಾರೆ.
ನೆರವು ನೀಡಿದ ಬಗ್ಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ತಮಾಷೆಯಾಗಿ ಉತ್ತರಿಸಿದ ಅವರು, ನನ್ನ ಬಳಿಕ ಸಾಕಷ್ಟು ಹಣವಿದೆ ಎಂದಿದ್ದಾರೆ. ಬಳಿಕ ಗಂಭೀರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮಹಿಳೆಯೊಬ್ಬಳು ನೆರೆಯ ನಡುವೆ ತನ್ನ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದ ಫೋಟೋವೊಂದನ್ನು ನೋಡಿ ನನಗೆ ಹೃದಯ ಭಾರವಾಯಿತು, ಹೀಗಾಗಿ ಸಹಾಯ ಮಾಡಬೇಕು ಅಂದುಕೊಂಡೆ ಎಂದಿದ್ದಾರೆ.
ನಾನು ನೆರೆಯ ಬಗ್ಗೆ ಕೇವಲ ಟ್ವಿಟ್ ಮಾಡಲು ಬಯಸುವುದಿಲ್ಲ, ನೆರೆ ಪೀಡಿತರಿಗೆ, ಸಂಕಷ್ಟದಲ್ಲಿರುವವರಿಗೆ ನನ್ನ ಸಾಮರ್ಥ್ಯದಷ್ಟು ನೆರವು ನೀಡಲು ಬಯಸುತ್ತೇನೆ ಎಂದಿದ್ದಾರೆ.
ಸಾಮಾಜಿಕ ಕಳಕಳಿಯನ್ನು ಹೊಂದಿರುವ ಅವರು, ಈಗಾಗಲೇ ಹುತಾತ್ಮ ಯೋಧರ ಕುಟುಂಬಗಳಿಗೆ, ರೈತರಿಗೆ ಸಾಕಷ್ಟು ಹಣವನ್ನು ದಾನ ಮಾಡಿದ್ದಾರೆ. ಈ ಮೂಲಕ ಹಿಂದಿ ಸಿನಿಮಾ ರಂಗದ ಅಗ್ರಗಣ್ಯ ದಾನಿ ಎನಿಸಿಕೊಂಡಿದ್ದಾರೆ.
Absolutely heartbreaking to know about the devastation by floods in Assam.All affected, humans or animals,deserve support in this hour of crisis.I’d like to donate 1cr each to the CM Relief Fund & for Kaziranga Park rescue.Appealing to all to contribute @CMOfficeAssam @kaziranga_
— Akshay Kumar (@akshaykumar) July 17, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.