ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ಸ್ಕಿಲ್ ಇಂಡಿಯಾ ಯೋಜನೆಗೆ ಮಹತ್ವದ ಸುಧಾರಣೆಯನ್ನು ತರಲು ಸಜ್ಜಾಗಿದೆ, ಹಿಂದಿನ ನಾಲ್ಕು ವರ್ಷಗಳ ಕಾಲ ಅಸಮರ್ಪಕ ಉದ್ಯೋಗ ಕೊಡುಗೆಗಳು ಮತ್ತು ಗುಣಮಟ್ಟದ ತರಬೇತಿಯ ಕೊರತೆಯಿಂದಾಗಿ ಈ ಯೋಜನೆಗೆ ಮಹತ್ವದ ಫಲಿತಾಂಶವನ್ನು ನೀಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಮೋದಿ ಸರ್ಕಾರವು, ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಹೊಸ ಕೋರ್ಸ್ಗಳನ್ನು ಪ್ರಾರಂಭಿಸುವ ಮೂಲಕ ಮತ್ತು ಉನ್ನತ ಬಹುರಾಷ್ಟ್ರೀಯ ಮತ್ತು ಭಾರತೀಯ ಸಂಸ್ಥೆಗಳೊಂದಿಗೆ ಸಹಯೋಗವನ್ನು ಸಾಧಿಸುವ ಮೂಲಕ ಈ ಯೋಜನೆಗೆ ಮರು ಜೀವವನ್ನು ನೀಡಲು ನಿರ್ಧರಿಸಿದೆ.
ಭಾರತದಾದ್ಯಂತ ಇರುವ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ (ಐಟಿಐ)ಗಳಲ್ಲಿ ಹೊಸ ಕೈಗಾರಿಕಾ ತರಬೇತಿ ಕೋರ್ಸ್ಗಳನ್ನು ಪರಿಚಯಿಸಲು ನಿರ್ಧರಿಸಲಾಗಿದೆ. ಎಲೆಕ್ಟ್ರಿಕ್ ವೆಹ್ಹಿಕಲ್ ಬಗೆಗಿನ ಕೋರ್ಸ್ ಕೂಡ ಇದರಲ್ಲಿ ಸೇರಿದೆ. 2026 ರಿಂದ ಎಲ್ಲಾ ವಾಣಿಜ್ಯ ವಾಹನಗಳು ಎಲೆಕ್ಟ್ರಿಕ್ ಮೂಲಕ ಚಲಿಸುವಂತೆ ಮಾಡಬೇಕು ಎಂದು ನೀತಿ ಆಯೋಗವು ಪ್ರಸ್ತಾಪ ಮಾಡಿರುವ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ.
ಇತ್ತೀಚಿನ ಆರ್ಥಿಕ ಸಮೀಕ್ಷೆ ಕೂಡ, ಭಾರತವನ್ನು ಎಲೆಕ್ಟ್ರಿಕ್ ವಾಹನಗಳ ಕೇಂದ್ರವನ್ನಾಗಿ ಮಾಡಲು ಮತ್ತು ವಾಹನ ವಲಯದಲ್ಲಿ ಉದ್ಯೋಗವನ್ನು ಹೆಚ್ಚಿಸಲು ಒತ್ತು ನೀಡಿದೆ. ಈ ಸಮೀಕ್ಷೆಯ ಪ್ರಕಾರ, ಎಲೆಕ್ಟ್ರಿಕ್ ಕಾರುಗಳಲ್ಲಿ ಭಾರತದ ಮಾರುಕಟ್ಟೆ ಪಾಲು ಕೇವಲ ಶೇ. 0.06 ರಷ್ಟು ಆಗಿದ್ದರೆ, ಚೀನಾ ಜಾಗತಿಕ ಪಾಲಿನ ಶೇ. 2 ರಷ್ಟು ಪಾಲನ್ನು ಹೊಂದಿದೆ.
ಕೋರ್ಸ್ಗಳನ್ನು ಪರಿಚಯಿಸುವುದು ಮತ್ತು ಭವಿಷ್ಯದ ಉದ್ಯೋಗಗಳಿಗಾಗಿ ಜನರಿಗೆ ತರಬೇತಿ ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. “ಭಾರತವು ದಕ್ಷಿಣ ಏಷ್ಯಾದಲ್ಲಿ ಈಗಾಗಲೇ ಆಟೋಮೊಬೈಲ್ ಉತ್ಪಾದನಾ ಹಬ್ ಆಗಿದೆ. ಆದರೆ ಜಗತ್ತು ಎಲೆಕ್ಟ್ರಿಕ್ ವಾಹನಗಳತ್ತ ತಿರುಗುತ್ತಿರುವುದರಿಂದ, ಮಾರುಕಟ್ಟೆಯ ಲಾಭ ಪಡೆಯಲು ನಮ್ಮ ಉದ್ಯೋಗಿಗಳಿಗೆ ತರಬೇತಿ ನೀಡುವ ಅವಕಾಶವನ್ನು ನಾವು ಬಳಸಿಕೊಳ್ಳಬೇಕು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.