ನವದೆಹಲಿ: ನೆಹರು ಮೆಮೋರಿಯಲ್ ಮ್ಯೂಸಿಯಂ ಆ್ಯಂಡ್ ಲೈಬ್ರರಿ (NMML)ಯನ್ನು ಹೊಂದಿರುವ ದೆಹಲಿಯ ತೀನ್ ಮೂರ್ತಿ ಭವನ ಸಂಕೀರ್ಣದಲ್ಲಿ “ಭಾರತದ ಪ್ರಧಾನಮಂತ್ರಿಗಳ ಮ್ಯೂಸಿಯಂ” ಅನ್ನು ಸ್ಥಾಪಿಸುವ ಕಾರ್ಯವನ್ನು ಪೂರ್ಣಗೊಳಿಸಲು ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಮಾರ್ಚ್ 2020 ರ ಡೆಡ್ಲೈನ್ ಅನ್ನು ನಿಗದಿಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಸಿಪಿಡಬ್ಲ್ಯುಡಿಯು ಮ್ಯೂಸಿಯಂ ವಿನ್ಯಾಸ ಕಾರ್ಯ ಮತ್ತು ಅದರ ಫಿನಿಶಿಂಗ್, ಲಿಫ್ಟ್ ಅಳವಡಿಸುವಿಕೆ, ಎಸ್ಕಲೇಟರ್ಗಳು, ಸಿಸಿಟಿವಿಗಳು ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡಲು ಏಜೆನ್ಸಿಯೊಂದನ್ನು ನೇಮಕ ಮಾಡಿದೆ.
ಐಕಾನಿಕ್ ತೀನ್ ಮೂರ್ತಿ ಭವನವು ದೇಶದ ಮೊದಲ ಪ್ರಧಾನ ಮಂತ್ರಿಯಾಗಿದ್ದ ಜವಾಹರಲಾಲ್ ನೆಹರೂ ಅವರ ಅಧಿಕೃತ ನಿವಾಸವಾಗಿತ್ತು. ಕೇಂದ್ರ ಸಂಸ್ಕೃತಿ ಸಚಿವಾಲಯವು ತನ್ನ ಅಡಿಯಲ್ಲಿನ ಸ್ವಾಯತ್ತ ಸಂಸ್ಥೆಯಾಗಿರುವ ತೀನ್ ಭವನ ಆವರಣದಲ್ಲಿ ನೆಹರು ಸ್ಮರಣಾರ್ಥ ನೆಹರು ಮೆಮೋರಿಯಲ್ ಮ್ಯೂಸಿಯಂ ಆ್ಯಂಡ್ ಲೈಬ್ರರಿಯನ್ನು ಸ್ಥಾಪನೆ ಮಾಡಿತ್ತು.
ಪ್ರಸ್ತುತ ಈ ಭವನದಲ್ಲಿ ದೇಶದ ಪ್ರಧಾನ ಮಂತ್ರಿಗಳಾಗಿರುವವರ ಬಗೆಗಿನ ಮ್ಯೂಸಿಯಂ ಅನ್ನು ಸ್ಥಾಪನೆ ಮಾಡಲಾಗುತ್ತಿದೆ. 66 ಕೋಟಿ ರೂಪಾಯಿಗಳ ಯೋಜನೆ ಇದಾಗಿದೆ.
2020ರ ಮಾರ್ಚ್ ವೇಳೆಗೆ ಈ ಮ್ಯೂಸಿಯಂ ಅನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಒಂದು ಬಾರಿ ನಿರ್ಮಾಣ ಕಾರ್ಯ ಮುಗಿದರೆ ಮ್ಯೂಸಿಯಂ ಅನ್ನು ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಹಸ್ತಾಂತರ ಮಾಡಲಾಗುವುದು. ಬಳಿಕ ಆ ಸಚಿವಾಲಯವು ಮ್ಯೂಸಿಯಂಗೆ ಅಗತ್ಯವಿರುವ ಕಾರ್ಯವನ್ನು ಮಾಡಿಕೊಳ್ಳಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.