ನವದೆಹಲಿ: ಇದೇ ಮೊದಲ ಬಾರಿಗೆ, ಅಮಿತ್ ಶಾ ನೇತೃತ್ವದ ಕೇಂದ್ರ ಗೃಹ ಸಚಿವಾಲಯವು ತನ್ನ ಉದ್ಯೋಗಿಗಳಿಗೆ ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾ ನೀತಿಯನ್ನು ತರುತ್ತಿದೆ. ಈ ಮೂಲಕ ಇಂಟರ್ನೆಟ್, ಸೋಶಿಯಲ್ ಮೀಡಿಯಾ ದುರ್ಬಳಕೆಯನ್ನು ತಡೆಯಲು ಮುಂದಾಗಿದೆ.
ಈ ನಿಟ್ಟಿನಲ್ಲಿ ಸಚಿವಾಲಯವು ತನ್ನ ಉದ್ಯೋಗಿಗಳಿಗೆ 24 ಪುಟಗಳ ನಿರ್ದೇಶನವನ್ನು ಬಿಡುಗಡೆಗೊಳಿಸಿದೆ. ಸರ್ಕಾರಿ ದಾಖಲೆಗಳ ಲೀಕೇಜ್ ತಡೆಗಟ್ಟಲು ಇದು ಪರಿಣಾಮಕಾರಿಯಾದ ಮಾರ್ಗವೂ ಆಗಿದೆ.
“ನೌಕರರು, ಗುತ್ತಿಗೆ ಸಿಬ್ಬಂದಿ, ಸಲಹೆಗಾರರು, ಪಾಲುದಾರರು ಮಾತ್ರವಲ್ಲದೇ, ಮಾಹಿತಿ ವ್ಯವಸ್ಥೆಗಳನ್ನು ಮತ್ತು ಸೌಲಭ್ಯಗಳನ್ನು, ಸಂವಹನ ಜಾಲಗಳನ್ನು, ಸರ್ಕಾರದ ಪರವಾಗಿ ರಚಿಸಲ್ಪಟ್ಟ, ಸಂಗ್ರಹಿಸಿದ ಮತ್ತು ಸಂಸ್ಕರಿಸಿದ ಮಾಹಿತಿಯನ್ನು ನಿರ್ವಹಿಸುವ ಮತ್ತು ಬೆಂಬಲಿಸುವ ಥರ್ಡ್ ಪಾರ್ಟಿ ಸ್ಟಾಫ್ಗಳು ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಸೋಶಿಯಲ್ ಮೀಡಿಯಾ ಅಥವಾ ಸೋಶಿಯಲ್ ನೆಟ್ವರ್ಕಿಂಗ್ ಪೋರ್ಟಲ್ಗಳಲ್ಲಿನ ಅಥವಾ ಅಪ್ಲಿಕೇಶನ್ಗಳಲ್ಲಿ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸುವಂತಿಲ್ಲ ” ಎಂದು ನಿರ್ದೇಶನದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಮಾತ್ರವಲ್ಲದೇ, ಅಧಿಕೃತ ಕಂಪ್ಯೂಟರ್ಗಳಿಂದ ಸೋಶಿಯಲ್ ಮೀಡಿಯಾವನ್ನು ಪ್ರವೇಶಿಸದಂತೆ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಅಲ್ಲದೇ, ಅಂತರ್ಜಾಲಕ್ಕೆ ಸಂಪರ್ಕ ಹೊಂದಿಲ್ಲದ ಸ್ವತಂತ್ರ ವ್ಯವಸ್ಥೆಗಳಲ್ಲಿ ಮಾತ್ರ ವರ್ಗೀಕೃತ ಕೆಲಸವನ್ನು ಮಾಡುವಂತೆ ನಿರ್ದೇಶಿಸಿದೆ. ಖಾಸಗಿ ಕ್ಲೌಡ್ ಗಳಲ್ಲಿ ವರ್ಗೀಕೃತ ಸರ್ಕಾರಿ ಮಾಹಿತಿಯನ್ನು ಸಂಗ್ರಹಿಸಿದ ನೌಕರರನ್ನು ದಂಡಕ್ಕೆ ಅರ್ಹರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.