ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಒಂದು ವಾರಗಳ ಸೇನಾ ನೇಮಕಾತಿ ಸಮಾವೇಶವನ್ನು ಆಯೋಜನೆಗೊಳಿಸಲಾಗಿದ್ದು, ಇದಕ್ಕಾಗಿ 5,000 ಕ್ಕೂ ಹೆಚ್ಚು ಕಾಶ್ಮೀರಿ ಯುವಕರು ನೋಂದಾಯಿಸಿಕೊಂಡಿದ್ದಾರೆ ಎಂದು ರಕ್ಷಣಾ ವಕ್ತಾರರು ಬುಧವಾರ ತಿಳಿಸಿದ್ದಾರೆ.
“ಬಾರಾಮುಲ್ಲಾ ಜಿಲ್ಲೆಯ ಪಟ್ಟನ್ ಪ್ರದೇಶದ ಹೈದರ್ಬೀಗ್ನಲ್ಲಿ ಸೇನಾ ನೇಮಕಾತಿ ಸಮಾವೇಶ ಪ್ರಾರಂಭವಾಗಿದೆ. ಸಮಾವೇಶವನ್ನು ಜುಲೈ 10 ರಿಂದ ಜುಲೈ 16ರವರೆಗೆ ನಡೆಸಲಾಗುತ್ತಿದೆ. ಬಂಡೀಪೋರಾ, ಕುಪ್ವಾರಾ, ಗಂಡರ್ಬಲ್, ಬಾರಾಮುಲ್ಲಾ, ಶ್ರೀನಗರ, ಬುಡ್ಗಾಮ್, ಪುಲ್ವಾಮಾ, ಶೋಪಿಯಾನ್, ಅನಂತ್ನಾಗ್ ಮತ್ತು ಕುಲ್ಗಮ್ ಜಿಲ್ಲೆಗಳಿಂದ ಅಭ್ಯರ್ಥಿಗಳು ಇದಕ್ಕೆ ನೋಂದಾಯಿಸಿಕೊಂಡಿದ್ದು, ಇವರೆಲ್ಲರನ್ನೂ ಪರೀಕ್ಷಿಸಲಾಗುವುದು”ಎಂದು ವಕ್ತಾರರು ತಿಳಿಸಿದ್ದಾರೆ.
ನೇಮಕಾತಿ ಸಮಾವೇಶಕ್ಕೆ ಕಣಿವೆಯ ಎಲ್ಲಾ ಭಾಗಗಳಿಂದ 5,366 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
“ಅಭ್ಯರ್ಥಿಗಳು ದೈಹಿಕ ಸಾಮರ್ಥ್ಯ, ವೈದ್ಯಕೀಯ ಪರೀಕ್ಷೆ ಮತ್ತು ದಾಖಲಾತಿಗಳಿಗಾಗಿ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು ಜುಲೈ 28 ಮತ್ತು ಆಗಸ್ಟ್ 25 ರಂದು ಲಿಖಿತ ಪರೀಕ್ಷೆಯನ್ನು ಬರೆಯಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಸೇನೆಯ ವಿವಿಧ ಶಸ್ತ್ರಾಸ್ತ್ರ ಮತ್ತು ಸೇವೆಗಳಿಗೆ ನೇಮಕಗೊಳಿಸಲಾಗುವುದು” ಎಂದು ವಕ್ತಾರರು ತಿಳಿಸಿದ್ದಾರೆ.
“ಈ ನೇಮಕಾತಿ ಸಮಾವೇಶ ಮತ್ತು ಕಣಿವೆಯಾದ್ಯಂತ ನಡೆಯುವ ಇದೇ ರೀತಿಯ ಕಾರ್ಯಕ್ರಮಗಳು ಸೇನೆಗೆ ಸೇರಲು, ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಮತ್ತು ತಮ್ಮ ಕುಟುಂಬಗಳಿಗೆ ಉಜ್ವಲ ಭವಿಷ್ಯವನ್ನು ರೂಪಿಸಲು ಬಯಸುವ ಯುವಕರ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ಬಹಳ ಮಹತ್ವದ ಪಾತ್ರ ನಿರ್ವಹಿಸುತ್ತದೆ” ಎಂದು ಅವರು ಹೇಳಿದ್ದಾರೆ.
ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಕಂಪ್ಯೂಟರೀಕೃತವಾಗಿದ್ದು, ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತದೆ. ಎಲ್ಲಾ ಅಭ್ಯರ್ಥಿಗಳಿಗೆ ಈ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ವಿಶೇಷ ಒತ್ತು ನೀಡಲಾಗುತ್ತದೆ, ಇದರಿಂದ ಅವರು ನಕಲಿ ಆಮಿಷಗಳಿಗೆ ಬಲಿಯಾಗುವುದಿಲ್ಲ ಎಂದಿದ್ದಾರೆ.
ಸ್ಥಳೀಯ ಸೇನಾ ಘಟಕಗಳು ಮತ್ತು ಬಾರಾಮುಲ್ಲಾ ಜಿಲ್ಲೆಯ ನಾಗರಿಕ ಆಡಳಿತದ ಬೆಂಬಲದೊಂದಿಗೆ ಶ್ರೀನಗರ ಸೇನಾ ನೇಮಕಾತಿ ಕಚೇರಿಯಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.