ವಿಜಯಪುರ: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದ್ದು, ಇದಕ್ಕೆ ಜನರ ಭಾರೀ ಶ್ಲಾಘನೆಗಳು ವ್ಯಕ್ತವಾಗುತ್ತಿವೆ. ಈ ವೀಡಿಯೋದಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯ ಬಟ್ಟೆ ಅಂಗಡಿಯೊಂದರಲ್ಲಿ ಶಾಸ್ತ್ರೀಯ ಭಾಷೆ ಸಂಸ್ಕೃತವನ್ನು ಎಲ್ಲಾ ಉದ್ಯೋಗಿಗಳು ಮಾತನಾಡುತ್ತಿರುವುದು ಗೋಚರಿಸುತ್ತದೆ.
ವೀಡಿಯೋವು ವಿಜಯಪುರದ 3R ಗಾರ್ಮೆಂಟ್ಸ್ ಅಂಗಡಿಯಲ್ಲಿ ಚಿತ್ರೀಕರಿಸಿದ್ದಾಗಿದೆ, ಅಲ್ಲಿನ ಎಲ್ಲಾ ಉದ್ಯೋಗಿಗಳು ತಮ್ಮನ್ನು ಸಂಸ್ಕೃತದಲ್ಲಿ ಪರಿಚಯಿಸಿಕೊಳ್ಳುತ್ತಾರೆ ಮತ್ತು ಸಂಸ್ಕೃತದಲ್ಲೇ ಪರಸ್ಪರ ಸಂವಾದ ನಡೆಸುತ್ತಾರೆ. ಅವರು ಮಾರ್ಕೆಟಿಂಗ್ಗಾಗಿ ಹೊರಗೆ ಹೋದಾಗಲೂ ಕೂಡ ಸಂಸ್ಕೃತ ಬೋಧನಾ ತರಗತಿಗಳನ್ನು ನಡೆಸುತ್ತಾರೆ ಎಂದು ಹೇಳಲಾಗಿದೆ. ಅಂಗಡಿಯಲ್ಲಿ ಒಟ್ಟು 39 ಮಂದಿ ಉದ್ಯೋಗಿಗಳಾಗಿದ್ದಾರೆ.
ಭಾರತದ ಶಾಸ್ತ್ರೀಯ ಭಾಷೆಗಳನ್ನು ಪುನರುಜ್ಜೀವನಗೊಳಿಸುವುದಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಗಮನವನ್ನು ಹರಿಸಲಾಗುತ್ತಿದೆ. ಈ ಬಾರಿ, 17 ನೇ ಲೋಕಸಭೆಯಲ್ಲಿ ಇಂಗ್ಲಿಷ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಂಸದರ ಸಂಖ್ಯೆಯು 54 ಕ್ಕೆ ಕುಸಿತ ಕಂಡಿದೆ. 2014ರಲ್ಲಿ 114 ಮಂದಿ ಇಂಗ್ಲೀಷಿನಲ್ಲಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಲೋಕಸಭೆಯಲ್ಲಿ ಈ ಬಾರಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದ ಭಾಷೆಗಳ ಪೈಕಿ ಸಂಸ್ಕೃತವು ಮೂರನೇ ಅತ್ಯಂತ ಜನಪ್ರಿಯ ಭಾಷೆಯಾಗಿ ಹೊರಹೊಮ್ಮಿದೆ.
ಭಾರತೀಯ ಭಾಷೆಗಳ ಪರಂಪರೆಯ ಪುನರುಜ್ಜೀವನ ಮತ್ತು ಸಂರಕ್ಷಣೆಯ ಗುರಿಯನ್ನು ಹೊಂದಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು, ಸಂಸ್ಕೃತ ಭಾಷೆಯನ್ನು ಉತ್ತೇಜಿಸುವ ಮತ್ತು ಸಂರಕ್ಷಿಸುವ ಸಲುವಾಗಿ ಕೇಂದ್ರ ಸಂಸ್ಥೆಗಳ ಬಳಿ ಕನಿಷ್ಠ ಎರಡು ಸಂಸ್ಕೃತ ಮಾತನಾಡುವ ಗ್ರಾಮಗಳನ್ನು ಸ್ಥಾಪನೆ ಮಾಡುವಂತೆ ಸೂಚನೆ ನೀಡಿದೆ.
ಸಂಸ್ಕೃತ ಭಾಷೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿರುವ ಉತ್ತರ ಪ್ರದೇಶ ಸರ್ಕಾರವು ಇಂಗ್ಲಿಷ್, ಹಿಂದಿ ಮತ್ತು ಉರ್ದು ಜೊತೆಗೆ ಸಂಸ್ಕೃತದಲ್ಲಿ ತನ್ನ ಪತ್ರಿಕಾ ಪ್ರಕಟಣೆಗಳನ್ನು ಹೊರಡಿಸಲು ನಿರ್ಧರಿಸಿದೆ.
There is a shop named 3R Garments in Bijapur, Karnataka which has 39 employees and all 39 converse with each other in Sanskrit. Also, when they go out marketing they also conduct Sanskrit Teaching classes. @surnell @ARanganathan72 @ShefVaidya pic.twitter.com/OgbJnKcdf6
— Vallabha (@Vallabh59944335) July 7, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.