ಜೈಪುರ: ರಾಜಸ್ಥಾನ ಕೇವಲ ಶೌರ್ಯ ಮತ್ತು ಪರಾಕ್ರಮಕ್ಕೆ ಮಾತ್ರ ಹೆಸರುವಾಸಿಯಾಗಿಲ್ಲ, ಪಾಕಪದ್ಧತಿ ಮತ್ತು ವಾಸ್ತುಶಿಲ್ಪಕ್ಕೂ ಪ್ರಸಿದ್ಧಿಯನ್ನೂ ಪಡೆದುಕೊಂಡಿದೆ. ರಾಜ್ವಾಡಿ ಕಿರೀಟದ ಆಭರಣ ಎನಿಸಿರುವ ಜೈಪುರ ತನ್ನ ಅಪ್ರತಿಮ ವಾಸ್ತುಶಿಲ್ಪ ಪರಂಪರೆ ಮತ್ತು ಅತ್ಯದ್ಭುತವಾದ ಸಂಸ್ಕೃತಿಯೊಂದಿಗೆ ಈಗ ವಿಶ್ವ ಪಾರಂಪರಿಕ ಟ್ಯಾಗ್ ಅನ್ನು ಪಡೆದುಕೊಂಡಿದೆ. ಹೌದು, ಪಿಂಕ್ ಸಿಟಿ ಜೈಪುರ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.
ಜೂನ್ 30 ರಿಂದ ಜುಲೈ 10 ರವರೆಗೆ ಬಾಕು (ಅಜೆರ್ಬೈಜಾನ್) ನಲ್ಲಿ ನಡೆಯುತ್ತಿರುವ ಯುನೆಸ್ಕೋ ವಿಶ್ವ ಪಾರಂಪರಿಕ ಸಮಿತಿಯ 43 ನೇ ಸಭೆಯಲ್ಲಿ, ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆಗೊಳ್ಳಲು ಜೈಪುರದ ನಾಮನಿರ್ದೇಶನವನ್ನು ಪರಿಶೀಲಿಸಿದ ನಂತರ ಈ ಘೋಷಣೆಯನ್ನು ಮಾಡಲಾಗಿದೆ.
ಕಳೆದ ತಿಂಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಕ್ಕಾಗಿ ಜೈಪುರವನ್ನು ಪ್ರಸ್ತಾಪಿಸಲಾಗಿತ್ತು.
ಭಾರತದಲ್ಲಿ 37 ವಿಶ್ವ ಪಾರಂಪರಿಕ ತಾಣಗಳಿವೆ. ಇವುಗಳಲ್ಲಿ 29 ಸಾಂಸ್ಕೃತಿಕ ತಾಣಗಳು, ಏಳು ನೈಸರ್ಗಿಕ ತಾಣಗಳು ಮತ್ತು ಒಂದು ಮಿಶ್ರ ತಾಣವಾಗಿದೆ. ಭಾರತವು ವಿಶ್ವದ ಆರನೇ ಅತಿ ದೊಡ್ಡ ವಿಶ್ವ ಪಾರಂಪರಿಕ ತಾಣಗಳನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಯಾವುದೇ ದೇಶದಲ್ಲಿದ್ದರೂ ಕೂಡ, ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳನ್ನು ವಿಶ್ವದ ಎಲ್ಲಾ ಜನರಿಗೆ ಸೇರಿದ ಸ್ಥಳವೆಂದು ಗುರುತಿಸಲಾಗುತ್ತದೆ. ಇದರರ್ಥ ಭಾರತದಲ್ಲಿನ ಈ ವಿಶ್ವ ಪಾರಂಪರಿಕ ತಾಣಗಳು ಪ್ರಪಂಚದಲ್ಲಿ ಅಪಾರ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪ್ರಾಮುಖ್ಯತೆಯನ್ನು ಹೊಂದಿವೆ.
ಜೈಪುರವನ್ನು ವಿಶ್ವ ಪಾರಂಪರಿಕ ತಾಣಗಳ ಮಟ್ಟಿಗೆ ಸೇರ್ಪಡೆಗೊಳಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಐತಿಹಾಸಿಕ ಅರಮನೆ, ಕೋಟೆಗಳನ್ನು ಹೊಂದಿದ ರಾಜಸ್ಥಾನದ ನಗರವಾದ ಜೈಪುರವನ್ನು ಕ್ರಿ.ಶ 1727 ರಲ್ಲಿ ಸವಾಯಿ ಜೈ ಸಿಂಗ್ II ರ ಆಶ್ರಯದಲ್ಲಿ ನಿರ್ಮಾಣ ಮಾಡಲಾಯಿತು. ಇದು ಸಾಂಸ್ಕೃತಿಕವಾಗಿ ಶ್ರೀಮಂತ ರಾಜ್ಯವಾದ ರಾಜಸ್ಥಾನದ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತಿದೆ.
Jaipur is a city associated with culture and valour. Elegant and energetic, Jaipur’s hospitality draws people from all over.
Glad that this city has been inscribed as a World Heritage Site by @UNESCO. https://t.co/1PIX4YjAC4
— Narendra Modi (@narendramodi) July 6, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.